newsfirstkannada.com

‘ಕೊಹ್ಲಿ, ರೋಹಿತ್​ ಅಲ್ಲ.. ವಿಶ್ವಕಪ್ ಗೆದ್ದಿದ್ದು ಧೋನಿ’ ಎಂದವರ ಚಳಿ ಬಿಡಿಸಿದ ಹರ್ಭಜನ್!

Share :

12-06-2023

    ವಿಶ್ವಕಪ್​​​ ಗೆದ್ದಿದ್ದು ಕೂಲ್​ ಕ್ಯಾಪ್ಟನ್​​​ ಧೋನಿ ಮಾತ್ರ

    ಏಕಾಂಗಿಯಾಗಿ ವಿಶ್ವಕಪ್​ ಗೆದ್ದ ಧೋನಿ ಎಂದ ಫ್ಯಾನ್​​​

    ಧೋನಿ ಅಭಿಮಾನಿ ವಿರುದ್ಧ ಹರ್ಭಜನ್​​ ಆಕ್ರೋಶ..!

ನವದೆಹಲಿ: ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ಕ್ಯಾಪ್ಟನ್​​ ರೋಹಿತ್​ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸೋತಿದೆ. ಈ ಮುನ್ನ ವಿರಾಟ್​​ ಕೊಹ್ಲಿ ನಾಯಕತ್ವದಲ್ಲೂ ಭಾರತ ತಂಡ ಐಸಿಸಿ ಟ್ರೋಫಿ ಗೆದ್ದಿರಲಿಲ್ಲ. ಆದರೆ, ಕೊನೇ ಬಾರಿಗೆ ಟೀಂ ಇಂಡಿಯಾ ಐಸಿಸಿ ಟ್ರೋಫಿ ಗೆದ್ದಿದ್ದು ಮಾತ್ರ ಕೂಲ್​ ಕ್ಯಾಪ್ಟನ್​​ ಧೋನಿ ನಾಯಕತ್ವದಲ್ಲೇ. ಇದೇ ಕಾರಣಕ್ಕೆ ಈಗ ಅಭಿಮಾನಿಗಳು ಎಂ.ಎಸ್​​ ಧೋನಿಯನ್ನು ಹಾಡಿಹೊಗಳಿದ್ದಾರೆ. ಧೋನಿ ಮಾತ್ರ ಟೀಂ ಇಂಡಿಯಾದ ಶ್ರೇಷ್ಠ ನಾಯಕ ಎಂದಿದ್ದಾರೆ. ಈ ಪೈಕಿ ಫ್ಯಾನ್​ ಒಬ್ಬ ಧೋನಿ ಬಗ್ಗೆ ಮಾಡಿರೋ ಟ್ವೀಟ್​​ವೊಂದು ವೈರಲ್​ ಆಗಿದೆ.

ಕೋಚ್​​ ಇರಲಿಲ್ಲ, ಮೆಂಟರ್​ ಇರಲಿಲ್ಲ, ಸೀನಿಯರ್​​ ಪ್ಲೇಯರ್ಸ್​​ ಕೂಡ ಇರಲಿಲ್ಲ. ಈ ಚಿಕ್ಕ ಹುಡುಗ ಒಮ್ಮೆಯೂ ಹಿಂದೆ ಒಂದೇ ಒಂದು ಪಂದ್ಯದಲ್ಲೂ ನಾಯಕತ್ವ ವಹಿಸಿರಲಿಲ್ಲ. ಆದ್ರೂ, ಕ್ಯಾಪ್ಟನ್ ಆದ 48 ದಿನಗಳಲ್ಲೇ T20 ವಿಶ್ವಕಪ್ ಗೆದ್ದರು. ಸಿಂಗಲ್​ ಹ್ಯಾಂಡೆಡ್​ ಆಗಿ ಧೋನಿ ಒಬ್ಬರೇ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ್ರು ಎಂದು ಅಭಿಮಾನಿಯೋರ್ವ ಟ್ವೀಟ್​ ಮಾಡಿದ್ದು, ಇದು ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರನ್ನು ಕೆಣಕಿದೆ. ಇದರಿಂದ ಸಿಟ್ಟಿಗೆದ್ದ ಹರ್ಭಜನ್​ ಸಿಂಗ್​​​​​​ ಧೋನಿ ಅಭಿಮಾನಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟಿದ್ದಾರೆ.

ಯೆಸ್​​, ಈ ಚಿಕ್ಕ ಹುಡುಗ ಅಂದರೆ ಧೋನಿ ಒಬ್ಬನೇ ಟೀಂ ಇಂಡಿಯಾ ಪರ ಆಡಿದ್ದ. ಉಳಿದ 10 ಆಟಗಾರರು ಆಡಲೇ ಇಲ್ಲ. ಹಾಗಾಗಿ ಏಕಾಂಗಿಯಾಗಿ ಧೋನಿ ವಿಶ್ವಕಪ್ ಟ್ರೋಫಿಗಳನ್ನು ಗೆದ್ದ. ತಮಾಷೆ ಏನೆಂದರೆ ಆಸ್ಟ್ರೇಲಿಯಾ ವಿಶ್ವಕಪ್​ ಗೆದ್ದಾಗ ಇದು ಟೀಂ ಗೆಲುವು ಎಂದು ಹೇಳುವುದು, ಭಾರತ ಗೆದ್ದಾಗ ಇದು ನಾಯಕನ ಗೆಲುವುದು ಎನ್ನುವುದು. ಕ್ರಿಕೆಟ್​​ ಒಂದು ತಂಡವಾಗಿ ಆಡುವ ಆಟ. ಜೊತೆಯಾಗಿ ಗೆಲ್ಲುತ್ತಾರೆ, ಜೊತೆಯಾಗಿ ಸೋಲುತ್ತಾರೆ ಎಂದು ಹರ್ಭಜನ್​ ಸಿಂಗ್​​ ಟ್ವೀಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕೊಹ್ಲಿ, ರೋಹಿತ್​ ಅಲ್ಲ.. ವಿಶ್ವಕಪ್ ಗೆದ್ದಿದ್ದು ಧೋನಿ’ ಎಂದವರ ಚಳಿ ಬಿಡಿಸಿದ ಹರ್ಭಜನ್!

https://newsfirstlive.com/wp-content/uploads/2023/06/Bhajji.jpg

Load More