Advertisment

ರೋಹಿತ್​ ಶರ್ಮಾಗೆ ಬಿಗ್​ ಶಾಕ್​​.. ಹಾರ್ದಿಕ್​ ಪಾಂಡ್ಯಗೆ ಮುಂಬೈ ಇಂಡಿಯನ್ಸ್​​ ಕ್ಯಾಪ್ಟನ್ಸಿ ಪಟ್ಟ..?

author-image
Ganesh Nachikethu
Updated On
ಪಾಂಡ್ಯ ಬಂದ ಬೆನ್ನಲ್ಲೇ MIನಲ್ಲಿ ಎಲ್ಲವೂ ಉಲ್ಟಾ-ಪಲ್ಟಾ; ಬೇರೆ ತಂಡದ ಜೊತೆ ಬುಮ್ರಾ ಬಿಗ್ ಡೀಲ್..!?
Advertisment
  • ಬಹುನಿರೀಕ್ಷಿತ ಇಂಡಿಯನ್​ ಪ್ರೀಮಿಯರ್​​ ಲೀಗ್​​​
  • ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಬಿಗ್​ ಶಾಕ್​​..!
  • ಮುಂಬೈ ಇಂಡಿಯನ್ಸ್​​ ಕ್ಯಾಪ್ಸನ್ಸಿಯಿಂದ ಕೊಕ್​​..?

2023ರ ಐಸಿಸಿ ಏಕದಿನ ವಿಶ್ವಕಪ್​​ ಬೆನ್ನಲ್ಲೇ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​ ಸೀಸನ್ ಶುರುವಾಗಲಿದೆ. ಮುಂದಿನ ವರ್ಷ ಮಾರ್ಚ್​​​ ತಿಂಗಳಲ್ಲಿ ನಡೆಯಲಿರೋ ಈ ಐಪಿಎಲ್​​ನಲ್ಲಿ ಹೇಗಾದ್ರೂ ಗೆಲ್ಲಲೇಬೇಕು ಎಂದು ಎಲ್ಲಾ ತಂಡಗಳು ಜಿದ್ದಿಗೆ ಬಿದ್ದಿದೆ.

Advertisment

ಇದಕ್ಕೂ ಮುನ್ನ ಮಿನಿ ಐಪಿಎಲ್​​ ಹರಾಜು ನಡೆಯಲಿದೆ. ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿ ಮಾಡಲು ಐಪಿಎಲ್​​ ಫ್ರಾಂಚೈಸಿಗಳು ಮುಂದಾಗಿವೆ. ಇನ್ನು, ಈ ಮಧ್ಯೆ ಅಭಿಮಾನಿಗಳಿಗೆ ಮುಂಬೈ ಇಂಡಿಯನ್ಸ್​ ತಂಡ ಗುಡ್​ನ್ಯೂಸ್​ ಕೊಟ್ಟಿದೆ. ಜತೆಗೆ ಇದು ರೋಹಿತ್​ ಶರ್ಮಾ ಫ್ಯಾನ್ಸ್​​ ಪಾಲಿಗೆ ಕಹಿಸುದ್ದಿ ಆಗಲಿದೆ.

publive-image

ಹೌದು, ಸ್ಟಾರ್​​ ಆಲ್​ರೌಂಡರ್​​​ ಹಾರ್ದಿಕ್​ ಪಾಂಡ್ಯ ಅವರು ಗುಜರಾತ್​​ ಟೈಟಾನ್ಸ್​ ತಂಡದಿಂದ ಮುಂಬೈ ಇಂಡಿಯನ್ಸ್​​ಗೆ ಟ್ರೇಡ್​ ಆಗಿದ್ದಾರೆ. ಹಾರ್ದಿಕ್​​ ಪಾಂಡ್ಯ ಅವರೇ ತನ್ನನ್ನು ಟ್ರೇಡ್​​ ಮಾಡಿ ಎಂದು ವಿನಂತಿ ಮಾಡಿದ್ದರು ಎನ್ನಲಾಗಿದೆ.

ಹಾರ್ದಿಕ್​ ಮುಂಬೈಗೆ ಯಾಕೆ..?

ರೋಹಿತ್​ ಶರ್ಮಾಗೆ 36 ವರ್ಷ. ಈ ಐಪಿಎಲ್​​ ಸೀಸನ್​​ ಬಹುಷ್ಯ ಕೊನೆ ಆಗಬಹುದು. ಹೀಗಾಗಿ ರೋಹಿತ್​​ ಬದಲಿಗೆ ಹಾರ್ದಿಕ್​ ಪಾಂಡ್ಯಗೆ ನಾಯಕತ್ವ ಪಟ್ಟ ಕಟ್ಟೋಕೆ ಮುಂಬೈ ಇಂಡಿಯನ್ಸ್​ ಮುಂದಾಗಿದೆ. ಈ ಸೀಸನ್​​ನಲ್ಲೇ ಹಾರ್ದಿಕ್​​​​ ಮುಂಬೈ ಇಂಡಿಯನ್ಸ್​ ಕ್ಯಾಪ್ಟನ್​ ಆಗಬಹುದು. ರೋಹಿತ್​ ಶರ್ಮಾ ಹಾರ್ದಿಕ್​​ ನಾಯಕತ್ವದಲ್ಲೇ ಕ್ರಿಕೆಟ್​ ಆಡಬಹುದು ಎನ್ನುತ್ತಿವೆ ಮೂಲಗಳು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment