ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮಂಕಾದ್ರಾ..?
ಸಮರ್ಥವಾಗಿ ಆಲ್ರೌಂಡರ್ ಜವಾಬ್ದಾರಿ ನಿಭಾಯಿಸ್ತಿದ್ದಾರಾ.?
ವೆಸ್ಟ್ ಇಂಡೀಸ್ ಸರಣಿಯಲ್ಲಿ ಹಾರ್ದಿಕ್ ವೈಫಲ್ಯ
ಪ್ರಮೋಷನ್ ಮೆಲೆ ಪ್ರಮೋಷನ್ ಸಿಕ್ತು. ಬಡ್ತಿ ಮೇಲೆ ಬಡ್ತಿನೂ ಬಂತು. ಈತ ಕಮ್ಬ್ಯಾಕ್ ಮಾಡಿದ ಮೇಲೆ ಟೀಮ್ ಇಂಡಿಯಾದ ಮೈನ್ ವೆಪನ್ ಆಗ್ತಾನೆ ಅಂತಾನೇ ಹೇಳಲಾಗಿತ್ತು. ಆದರೀಗ ಈತನ ಆಟ ನೋಡಿದ ಮೇಲೆ ನಿರೀಕ್ಷೆಗಳೆಲ್ಲಾ ಹುಸಿಯಾಗಿವೆ. ಫ್ಯಾನ್ಸ್ ವಲಯದಲ್ಲಿದ್ದ ಆಸೆಗಳೂ ಕಮರ ತೊಡೆಗಿವೆ.
ಹಾರ್ದಿಕ್ ಪಾಂಡ್ಯ. ಟೀಮ್ ಇಂಡಿಯಾದ ONE OF THE FINEST ಆಲ್ರೌಂಡರ್. 3D ಪ್ಲೇಯರ್ ಅಂತಾನೇ ಖ್ಯಾತಿ ಪಡೆದಿರೋ ಪಾಂಡ್ಯ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ನಲ್ಲಿ ಖತನಾರ್ಕ್ ಕಿಲಾಡಿ. ಮೆನ್ ಇನ್ ಬ್ಲೂ ಪಡೆಯ ಬಿಗ್ ಗೇಮ್ ಚೇಂಜರ್ ಆ್ಯಂಡ್ ಮ್ಯಾಚ್ ವಿನ್ನರ್ ಪ್ಲೇಯರ್. ಈತ ಟೀಮ್ ಇಂಡಿಯಾಗೆ ಕಮ್ಮ್ಯಾಕ್ ಮಾಡಿದ್ದೇ ತಡ, ಬಿಸಿಸಿಐ ಸ್ಟಾರ್ ಆಲ್ರೌಂಡರ್ ಬಂದೇ ಬಿಟ್ಟ ಎಂಬ ಸಂಭ್ರಮದಲ್ಲಿ ತೇಲಾಡಿತ್ತು. ಅಷ್ಟೇ ಅಲ್ಲ.! ಪಾಂಡ್ಯಗೆ ಪ್ರಮೋಷನ್ ಮೇಲೆ ಪ್ರಮೋಷನ್ನೂ ನೀಡಿತ್ತು. ಆದ್ರೆ, ಈ ಪ್ರಮೋಷನ್ ಪಡೆದ ಪಾಂಡ್ಯ ಮಾತ್ರ. ಅರ್ಹತೆ ತಕ್ಕ ಆಟವಾಡೋದ್ರಲ್ಲಿ ಕಂಪ್ಲೀಟ್ ಫೇಲ್ ಆಗಿದ್ದಾರೆ.
2021ರ ಟಿ20 ವಿಶ್ವಕಪ್ ವೈಫಲ್ಯದ ಬಳಿಕ ಟೀಮ್ ಇಂಡಿಯಾದಿಂದ ಕಿಕ್ಔಟ್ ಆಗಿದ್ದ ಪಾಂಡ್ಯ, ಅಷ್ಟೇ ಬೇಗ ಟೀಮ್ ಇಂಡಿಯಾಗೆ ಮರಳಿದ್ದರು. ನೋಡ ನೋಡುತ್ತಿದ್ದಂತೆ ಟಿ20 ನಾಯಕನಾಗಿ, ಏಕದಿನ ತಂಡದ ಉಪ ನಾಯಕನಾಗಿಯೂ ಪ್ರಮೋಷನ್ ಗಿಟ್ಟಿಸಿದ್ದರು. ಇಷ್ಟೆಲ್ಲಾ ಪ್ರಮೋಷನ್ ಪಡೆದ ಪಾಂಡ್ಯರಿಂದ ಮೂಡಿ ಬರ್ತಿರೋದು ಮಾತ್ರ ಫ್ಲಾಫ್ ಶೋ.
ಕಮ್ಬ್ಯಾಕ್ ಬಳಿಕ ಪಾಂಡ್ಯರಲಿಲ್ಲ ಮೊದಲಿನ ಖದರ್..!
2022 ಜುಲೈ. ಇಂಗ್ಲೆಂಡ್ ಪ್ರವಾಸದೊಂದಿಗೆ ಏಕದಿನ ಫಾರ್ಮೆಟ್ಗೆ ಕಮ್ಬ್ಯಾಕ್ ಮಾಡಿದ ಹಾರ್ದಿಕ್, ಭಾರೀ ನಿರೀಕ್ಷೆಯನ್ನೇ ಹುಟ್ಟುಹಾಕಿದ್ರು. ಆದ್ರೆ, ಆ ಸರಣಿ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿಕೊಳ್ಳುವಂತ ಪರ್ಫಾಮೆನ್ಸ್ ನೀಡೆ ಇಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್, ಸದ್ಯ ನಡೀತಿರೋ ವೆಸ್ಟ್ ಇಂಡೀಸ್ ಟೂರ್.
ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಎರಡೂ ಪಂದ್ಯಗಳಲ್ಲೂ ಬ್ಯಾಟಿಂಗ್ಗೆ ಇಳಿದಿರೋ ಪಾಂಡ್ಯ ಗಳಿಸಿದ್ದು ಸಿಂಗಲ್ ಡಿಜಿಟ್ ಸ್ಕೋರ್. ಮೊದಲ ಏಕದಿನದಲ್ಲಿ 5 ಹಾಗೂ 2ನೇ ಏಕದಿನಲ್ಲಿ 7 ರನ್ಗಳಿಸುವಷ್ಟರಲ್ಲಿ ಪಾಂಡ್ಯ ಸುಸ್ತಾಗಿದ್ದಾರೆ. ಪಾಂಡ್ಯ ಫ್ಲಾಪ್ ಶೋ ಕಥೆ ಇದು ಈ ಒಂದು ಸಿರೀಸ್ಗೆ ಮಾತ್ರ ಸೀಮಿತವಾಗಿಲ್ಲ. ಪ್ರಸಕ್ತ ವರ್ಷದಲ್ಲಿ ನೀಡಿರೋದು ನೀರಸ ಪರ್ಫಾಮೆನ್ಸ್.!
2023ರಲ್ಲಿ ಪಾಂಡ್ಯ ಬ್ಯಾಟಿಂಗ್..!
ಪಂದ್ಯ 10
ರನ್ 210
ಸರಾಸರಿ 23.33
ಸ್ಟ್ರೈಕ್ರೇಟ್ 88.98
2023ರಲ್ಲಿ 10 ಏಕದಿನ ಪಂದ್ಯಗಳನ್ನಾಡಿರುವ ಪಾಂಡ್ಯ, ಕೇವಲ 210 ರನ್ ಕಲೆ ಹಾಕಿದ್ದಾರೆ. 23.33ರ ಸರಾಸರಿಯಲ್ಲಿ ರನ್ ಗಳಿಸಿರೋ ಹಾರ್ದಿಕ್ರ ಸ್ಟ್ರೈಕ್ರೇಟ್ 88.98..!
ಮೂರು ಓವರ್ ಬೌಲಿಂಗ್.. 5 ಓವರ್ ರೆಸ್ಟ್..!
ಬ್ಯಾಟಿಂಗ್ ಮಾತ್ರವಲ್ಲ, ಬೌಲಿಂಗ್ನಲ್ಲೂ ಅದೇ ಕಥೆ. ಸದ್ಯ ವಿಂಡೀಸ್ ಟೂರ್ನಲ್ಲಿ ಲಾಂಗ್ ಸ್ಪೆಲ್ ಹಾಕುವಲ್ಲಿ ಪಾಂಡ್ಯ ಫೇಲ್ ಆಗ್ತಿದ್ದಾರೆ. 3 ಓವರ್ ಬೌಲಿಂಗ್ ಮಾಡಿದ್ರೆ, 5 ಓವರ್ ರೆಸ್ಟ್ ಮಾಡ್ತಾರೆ. ಪೇಸ್ ಅಟ್ಯಾಕರ್ ಆಗಿ ಚೆಂಡು ತೆಗೆದುಕೊಳ್ಳುವ ಪಾಂಡ್ಯ, ಮೂರು ಓವರ್ ಎಸೆದ ಮೇಲೆ ನಡೆಯೋದು ಡಗೌಟ್ ಕಡೆಗೆ.! ಇನ್ನು, ಈ ವರ್ಷ ಆಡಿರೋ 10 ಪಂದ್ಯಗಳಿಂದ ಕೇವಲ 10 ವಿಕೆಟ್ ಉರುಳಿಸಿದ್ದಾರೆ.
ಇದು ಮುಂದುವರಿದರೆ ವಿಶ್ವಕಪ್ ಕನಸು ಭಗ್ನ ಗ್ಯಾರಂಟಿ.!
ಕಮ್ಬ್ಯಾಕ್ ಬಳಿಕ ಅಲ್ಲೊಂದು ಇಲ್ಲೊಂದು ಪಂದ್ಯ ಆಡಿರೋ ಪಾಂಡ್ಯ, ಪವರ್ಫುಲ್ ಪರ್ಫಾಮೆನ್ಸ್ ನೀಡಿದ್ದೆ ಇಲ್ಲ. 5 ಹಾಗೂ 6ನೇ ಕ್ರಮಾಂಕದಲ್ಲಿ ಮ್ಯಾಚ್ ವಿನ್ನರ್ ಆಗಿ ಮೂಡಿಬರಬೇಕಿದ್ದ ಪಾಂಡ್ಯ, ಟೀಮ್ ಇಂಡಿಯಾಗೆ ಕೈಕೊಟ್ಟಿದ್ದೇ ಹೆಚ್ಚು. ಸತತ ವೈಫಲ್ಯ ಅನುಭವಿಸ್ತಿರೋ ಹಾರ್ದಿಕ್, ಏಕದಿನ ವಿಶ್ವಕಪ್ನಲ್ಲೂ ಪ್ಲಾಫ್ ಆದ್ರೆ, 2021ರ ಟಿ20 ವಿಶ್ವಕಪ್ನಲ್ಲಾದ ಗತಿಯೇ ಎದುರಾಗೋದು ಗ್ಯಾರಂಟಿ. ಹೀಗಾಗಿ ಹಾರ್ದಿಕ್ ಹಳೆಯ ಖದರ್ಗೆ ಮರಳಬೇಕಾದ ಅನಿವಾರ್ಯತೆ ಇದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ