newsfirstkannada.com

ಹಾರ್ದಿಕ್​ ಪಾಂಡ್ಯ ಶಕ್ತಿ ಅಷ್ಟಿಷ್ಟಲ್ಲ.. ಮ್ಯಾಚ್ ಗೆಲ್ಲಿಸಬಲ್ಲ ಭಲೇ ಕಿಲಾಡಿ ಈ ಪಂಟರ್

Share :

08-09-2023

  ಬಿಗ್ ಟೂರ್ನಮೆಂಟ್​ಗಳಲ್ಲಿ ಪಾಂಡ್ಯ ಯಾಕೆ ಬೇಕು ?

  ಮಹತ್ವದ ಪಂದ್ಯಗಳಲ್ಲಿ ಹಾರ್ದಿಕ್​ ತಂಡಕ್ಕೆ ಬೇಕೆ ಬೇಕು.!

  ಟೀಮ್​ ಇಂಡಿಯಾಗೆ ಆಲ್​​ರೌಂಡರ್​ ಪಾಂಡ್ಯ ಶಕ್ತಿ

ಹಾರ್ದಿಕ್​​ ಪಾಂಡ್ಯ, ಸ್ಟಾರ್​ ಆಲ್​ರೌಂಡರ್​​ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕ್ಲಾಸ್ ಬ್ಯಾಟಿಂಗ್​​ನಿಂದ ಮ್ಯಾಚ್ ಗೆಲ್ಲಿಸಬಲ್ಲ ಭಲೇ ಕಿಲಾಡಿ. ಈಗ ಇದೇ ಕಿಲಾಡಿಯ ಮಹತ್ವ ಮತ್ತೊಮ್ಮೆ ತಿಳಿದಿದೆ. ಹಾರ್ದಿಕ್​​​​​​ ತಂಡದಲ್ಲಿ ಯಾಕಿರ್ಬೇಕು ಅನ್ನೋದಕ್ಕೆ ಪಾಕ್​ ಎದುರಿನ ಪಂದ್ಯಲ್ಲಿ ಆನ್ಸರ್ ಕೊಟ್ಟಿದ್ದಾರೆ.

87 ರನ್​, 90 ಎಸೆತ, 7 ಬೌಂಡ್ರಿ, 1 ಸಿಕ್ಸ್​​​. ಇಂಡೋ-ಪಾಕ್​ ಏಷ್ಯಾಕಪ್​​ ಪಂದ್ಯ ಸದ್ಯ ಮುಗಿದ ಅಧ್ಯಾಯ. ಮಳೆಯಿಂದ ಪಂದ್ಯ ರದ್ದಾಯ್ತು. ಆದ್ರೆ, ಈ ಬೇಸರದ ಮಧ್ಯೆಯೂ ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯ ಕ್ಲಾಸ್​​​ ಇನ್ನಿಂಗ್ಸ್​​ ಕಟ್ಟಿ ಎಲ್ಲರ ದಿಲ್​​ ಗೆದ್ರು.

ಪಾಕ್​​ ವಿರುದ್ಧ ಹಾರ್ದಿಕ್​ ಕಟ್ಟಿದ ಈ ಇನ್ನಿಂಗ್ಸ್ ನಿಜಕ್ಕೂ ದಿ ಬೆಸ್ಟ್​​​. ಟಾಪ್​​ ಆರ್ಡರ್ ಕೈಕೊಟ್ಟಾಗಿತ್ತು. ಇನ್ನೇನು ಅಲ್ಪಮೊತ್ತಕ್ಕೆ ಕುಸಿದು ರೋಹಿತ್ ಪಡೆ ಮಾನ ಹರಾಜಾಗೊದೊಂದೇ ಬಾಕಿ. ಆಗ ತೊಡೆತಟ್ಟಿ ನಿಂತ ಪಾಂಡ್ಯ, ಪಾಕ್​ಗೆ ಚಳ್ಳೆ ಹಣ್ಣು ತಿನ್ನಿಸಿದ್ರು. ಅತ್ಯಮೂಲ್ಯ 87 ರನ್​ ಸಿಡಿಸಿ ಭಾರತದ ಪಾಲಿಗೆ ಆಪ್ತ ರಕ್ಷಕರಾದ್ರು.

ನಂಬಿಕೆಗೆ ಇನ್ನೊಂದು ಹೆಸರೇ ಹಾರ್ದಿಕ್​ ಪಾಂಡ್ಯ

ಕೆಲವೊಮ್ಮೆ ಡಬಲ್ ಡಿಜಿಟ್​​ ಆಟ ಕೂಡ ತ್ರಿಬಲ್​ ಡಿಜಿಟ್​​ ಆಟವನ್ನ ನೆನಪಿಸುತ್ತೆ. ಅದಕ್ಕೆ ಪಾಂಡ್ಯನೇ ಬೆಸ್ಟ್​ ಎಕ್ಸಾಂಪಲ್​​.! ಹಾರ್ದಿಕ್ ಬಾರಿಸಿದ 87 ರನ್ ಅದ್ಯಾವ ಸೆಂಚುರಿಗೂ ಕಮ್ಮಿ ಇರಲಿಲ್ಲ. ಈ ಕ್ರೂಷಿಯಲ್​​​​ ಇನ್ನಿಂಗ್ಸ್​ ಮೂಲಕ ಪಾಂಡ್ಯ ವ್ಯಾಲ್ಯೂ ಏನು ಅನ್ನೋದು ಪ್ರತಿಯೊಬ್ಬರಿಗೂ ತಿಳಿದಿದೆ. ಇಷ್ಟೇ ಅಲ್ಲ.. ಬಿಗ್ ಟೂರ್ನರ್ಮೆಂಟ್​​​​ಗಳಲ್ಲಿ ಪಾಂಡ್ಯ ಬೇಕೆ ಬೇಕು ಅನ್ನೋ ಮಾತುಗಳೂ ಕೇಳಿ ಬರ್ತಿವೆ.

ಟಾಪ್ ಆರ್ಡರ್​ ಕುಸಿದ್ರೂ ಆಸರೆಯಾಗ್ತಾರೆ ಪಾಂಡ್ಯ

ಪಾಕ್​​​​ ಡೆಡ್ಲಿ ಪೇಸರ್ಸ್​ ಕೊಟ್ಟ ಏಟಿಗೆ ಭಾರತದ ಟಾಪ್ ಆರ್ಡರ್ ಬ್ಯಾಟ್ಸ್​​ಮನ್​​ಗಳು ಕಕ್ಕಾಬಿಕ್ಕಿಯಾದ್ರು. 66 ರನ್​​ಗೆ 4 ವಿಕೆಟ್​​ ಉರುಳಿದ್ವು. ರೋಹಿತ್​​​​ ಶರ್ಮಾ, ಗಿಲ್​​​​, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್​​ ರಂತ ಸ್ಟಾರ್ ಪ್ಲೇಯರ್ಸ್​ ಥಂಡಾ ಹೊಡೆದಿದ್ರು. ಇಂತಾ ಒತ್ತಡದಲ್ಲೂ ಪಾಂಡ್ಯ ರಾಕಿಂಗ್ ಪರ್ಫಾಮೆನ್ಸ್ ನೀಡಿದ್ರು. ಆ ಮೂಲಕ ಟಾಪ್​​​​​​ ಆರ್ಡರ್​ ಫೇಲ್ಯೂರ್ ಆದ್ರೇನಂತೆ.., ಸಂಕಷ್ಟದಲ್ಲಿ ನಾನಿರ್ತೇನೆ ಅನ್ನೋ ಸ್ಟ್ರಾಂಗ್ ಮೆಸೇಜ್ ರವಾನಿಸಿದ್ರು.

ಒತ್ತಡದಲ್ಲಿ ಬ್ಯಾಟಿಂಗ್ ಮಾಡೋದ್ರಲ್ಲಿ ನಿಸ್ಸೀಮ

ಒಂದೆಡೆ ಬ್ಯಾಕ್ ಟು ಬ್ಯಾಕ್ ವಿಕೆಟ್​​​​ ಉರುಳ್ತಿದ್ರೆ, ಇನ್ನೊಂದೆಡೆ ರನ್​​ರೇಟ್ ನಿಧಾನಕ್ಕೆ ಕುಸಿಯುತ್ತಿತ್ತು. ಇಂತಾ ಪ್ರೆಶರ್​​ನಲ್ಲಿ ಕ್ರಿಸ್​ಕಚ್ಚಿ ಆಡೋದು ಸುಲಭದ ಮಾತಲ್ಲ. ಅದಕ್ಕೆ ಧಮ್ ಬೇಕು. 4 ವಿಕೆಟ್​ ಪತನದ ಮಧ್ಯೆ ನಿರ್ಭಯವಾಗಿ ಬ್ಯಾಟ್ ಬೀಸಿ ಪಾಕ್​ ಬೌಲರ್​​ಗಳಿಗೆ ತಿರುಗೇಟು ಕೊಟ್ರು.

ಸಮಯೋಚಿತ ಬ್ಯಾಟಿಂಗ್​ ಕರಗತ..!

ಇನ್ನು ಪಾಂಡ್ಯ ಪಾಕ್​ ವಿರುದ್ಧ ಸಮಯೋಚಿತ ಇನ್ನಿಂಗ್ಸ್ ಕಟ್ಟಿದ್ರು. ಆರಂಭದಲ್ಲಿ ನಿಧಾನಗತಿ ಆಟವಾಡಿದ್ರು. ಸೆಟಲ್​​ ಆಗ್ತಿದ್ದಂತೆ ಗೇರ್​​​ ಬದಲಿಸಿ ಅಗ್ರೆಸ್ಸಿವ್​ ಆಟಕ್ಕೆ ಕೈ ಹಾಕಿದ್ರು. ಮ್ಯಾಚ್​​​ ಸಿಚ್ಯುವೇಶನ್​ಗೆ ತಕ್ಕಂತೆ ಹಾರ್ದಿಕ್​ ಆಟವಾಡಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು.

ಫಿನಿಶಿಂಗ್​ ಪಂಟರ್​​​..ಬೌಲಿಂಗ್​​ನಲ್ಲೂ ಮ್ಯಾಜಿಕ್​​..!

ಇನ್ನೂ ಪಾಂಡ್ಯ ಒತ್ತಡದಲ್ಲಿ ತಾಳ್ಮೆಯಿಂದ ಬ್ಯಾಟ್ ಬೀಸೋದಷ್ಟೇ ಅಲ್ಲ. ಓರ್ವ ಫಿನಿಶಿಂಗ್ ಪಂಟರ್ ಕೂಡ ಹೌದು.! ಘಟಾನುಘಟಿ ಬೌಲರ್​ಗಳನ್ನ ದಂಡಿಸಿ ಪಂದ್ಯ ಗೆಲ್ಲಿಸಿಕೊಡುವ ಕೆಪಾಸಿಟಿ ಹೊಂದಿದ್ದಾರೆ. ಇದರ ಜೊತೆ ಚೆಂಡಿಡಿದು ದಾಳಿಗಿಳಿದು ವಿಕೆಟ್ ಕಬಳಿಸಿ ತಂಡಕ್ಕೆ ನೆರವಾಗಬಲ್ಲರು.

ಹಲವು ಜವಾಬ್ದಾರಿ ನಿಭಾಯಿಸಬಲ್ಲ ಹಾರ್ದಿಕ್​ ಬಿಗ್ ಟೂರ್ನಮೆಂಟ್​​ಗಳಲ್ಲಿ ಕಮಾಲ್​ ಮಾಡಬಲ್ಲರು. ಈ ಹಿಂದಿನ ಐಸಿಸಿ ಟೂರ್ನಿಗಳಲ್ಲೂ ಅದನ್ನ ನಿರೂಪಿಸಿದ್ದಾರೆ. ಅದ್ರಲ್ಲೂ ಪಾಕ್​ ವಿರುದ್ಧವಂತೂ ಸಾಲಿಡ್​ ಆಟವಾಡಿದ ಟ್ರ್ಯಾಕ್​ ರೆಕಾರ್ಡ್​ ಹೊಂದಿದ್ದಾರೆ. ಸದ್ಯ ಉತ್ತಮ ಟಚ್​​ನಲ್ಲಿರುವ ಹಾರ್ದಿಕ್​ ಪಾಂಡ್ಯ, ಭಾನುವಾರದ ಇಂಡೋ – ಪಾಕ್​ ಕದನದಲ್ಲೂ ಆರ್ಭಟಿಸಲಿ ಅನ್ನೋದಷ್ಟೇ ಅಭಿಮಾನಿಗಳ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹಾರ್ದಿಕ್​ ಪಾಂಡ್ಯ ಶಕ್ತಿ ಅಷ್ಟಿಷ್ಟಲ್ಲ.. ಮ್ಯಾಚ್ ಗೆಲ್ಲಿಸಬಲ್ಲ ಭಲೇ ಕಿಲಾಡಿ ಈ ಪಂಟರ್

https://newsfirstlive.com/wp-content/uploads/2023/09/Hardik-Pandya.jpg

Load More