newsfirstkannada.com

ಹಾರ್ದಿಕ್​ ಅಬ್ಬರಕ್ಕೆ ಬಾಂಗ್ಲಾ ಕಂಗಾಲು.. 4 ಬೌಂಡ್ರಿ, 3 ಭರ್ಜರಿ ಸಿಕ್ಸರ್; ಹೇಗಿತ್ತು ಪಾಂಡ್ಯ ಆರ್ಭಟ?

Share :

Published June 23, 2024 at 10:34am

  ಸಂಕಷ್ಟದಲ್ಲಿ ಬ್ರಿಲಿಯಂಟ್​ ಇನ್ನಿಂಗ್ಸ್​ ಕಟ್ಟಿದ ಹಾರ್ದಿಕ್​ ಪಾಂಡ್ಯ

  ಹಾರ್ದಿಕ್​ ಪಾಂಡ್ಯ ಅಬ್ಬರಕ್ಕೆ ತಬ್ಬಿಬ್ಬಾದ ಬಾಂಗ್ಲಾ ಟೈಗರ್ಸ್

  ಪಾಂಡ್ಯ ಸಿಡಿಸಿದ ಒಂದೇ ಒಂದು ಶಾಟ್​ ಕೂಡ ಮಿಸ್​ ಆಗಲಿಲ್ಲ

ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ವಿಜಯ ಯಾತ್ರೆ ಮುಂದುವರೆದಿದೆ. ಒಂದೊಂದು ಪಂದ್ಯದಲ್ಲಿ ಒಬ್ಬೊಬ್ಬರು ಮ್ಯಾಚ್​​ ವಿನ್ನರ್ಸ್​ ಇಂಡಿಯಾ ಪರ ಕೆಚ್ಚೆದೆಯ ಹೋರಾಟ ನಡೆಸ್ತಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಫೈಟರ್​ ಪಾಂಡ್ಯ ಮ್ಯಾಚ್​ ವಿನ್ನರ್​ ರೋಲ್​ನ ಪರ್ಫೆಕ್ಟ್​ ಆಗಿ ಪ್ಲೇ ಮಾಡಿದ್ರು. ಹಾರ್ದಿಕ್​ ಅಬ್ಬರಕ್ಕೆ ತಬ್ಬಿಬ್ಬಾದ ಬಾಂಗ್ಲಾ ಟೈಗರ್ಸ್​ ಬೋನು ಸೇರಿಬಿಟ್ವು. ಅಂಟಿಗಾದಲ್ಲಿ ಕುಂಗ್​ ಫು ಪಾಂಡ್ಯ ಪರ್ಫಾಮೆನ್ಸ್​ ಹೇಗಿತ್ತು.?

ಇದನ್ನೂ ಓದಿ: NEET- PG ಎಕ್ಸಾಂ ಮುಂದೂಡಿಕೆ.. ಪರೀಕ್ಷೆಯಲ್ಲಿ ಅಕ್ರಮ ವಾಸನೆ, ಸುಬೋಧ್ ಕುಮಾರ್ ಸಿಂಗ್ ವಜಾ

ನಿನ್ನೆ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟೀಮ್​ ಇಂಡಿಯಾ ಬ್ಯಾಟರ್ಸ್​ ಅಕ್ಷರಶಃ ಘರ್ಜಿಸಿದ್ರು. ಮಿಸ್ಟರ್​ 360 ಬ್ಯಾಟರ್​​ ಸೂರ್ಯಕುಮಾರ್​ ಹೊರತುಪಡಿಸಿದ್ರೆ, ಉಳಿದೆಲ್ಲ ಆಟಗಾರರು​​ ತಮ್ಮ ರೋಲ್​ನ ಸ್ಪಷ್ಟವಾಗಿ ನಿಭಾಯಿಸಿದ್ರು. ಟೀಮ್​ ಇಂಡಿಯಾ ಎಲ್ಲ ಬ್ಯಾಟರ್ಸ್​ ಅಂಟಿಗುವಾದಲ್ಲಿ ರನ್​ಗಳಿಸಿದ್ರು ನಿಜ. ಆದ್ರೆ, ಬಾಂಗ್ಲಾದ ಬೌಲಿಂಗ್​ ದಾಳಿಯನ್ನ ಪರ್ಫೆಕ್ಟ್​ ಆಗಿ ಚಿಂದಿ ಉಡಾಯಿಸಿದ್ದು ಮಾತ್ರ ಹಾರ್ದಿಕ್​ ಪಾಂಡ್ಯ ಒಬ್ಬರೇ.

ಇದನ್ನೂ ಓದಿ: ಸಲಿಂಗ ಲೈಂಗಿಕ ಕೇಸ್​.. ನಿಗೂಢ ಸ್ಥಳದಲ್ಲಿ ಮಧ್ಯರಾತ್ರಿ ಸೂರಜ್​ ರೇವಣ್ಣ ವಿಚಾರಣೆ

ಬಾಂಗ್ಲಾ ಟೈಗರ್ಸ್​​ ಬೇಟೆಯಾಡಿದ ‘ಫೈಟರ್​’ ಪಾಂಡ್ಯ.!

ತಾನೆಂಥಾ ಫೈಟರ್​ ಅನ್ನೋದನ್ನ ಹಾರ್ದಿಕ್​ ಪಾಂಡ್ಯ ನಿನ್ನೆ ಮತ್ತೆ ಪ್ರೂವ್​ ಮಾಡಿದ್ರು. ಲೆಜೆಂಡ್​​ ಸರ್​ ವಿವಿಎನ್​ ರಿಚರ್ಡ್ಸ್​​ ಸ್ಟೇಡಿಯಂನಲ್ಲಿ ಬಾಂಗ್ಲಾದ ಟೈಗರ್ಸ್​ಗಳ ದಾಳಿಯನ್ನ ಅಷ್ಟು ಸಮರ್ಥವಾಗಿ ಎದುರಿಸಿದ್ರು ಪಾಂಡ್ಯ. 5ನೇ ಕ್ರಮಾಂಕದಲ್ಲಿ ಹಾರ್ದಿಕ್​ ಪಾಂಡ್ಯ ಕಣಕ್ಕಿಳಿದಾಗ ಟೀಮ್​ ಇಂಡಿಯಾ 11.4 ಓವರ್​​ಗಳಲ್ಲಿ 108 ರನ್​ಗಳಿಸಿತ್ತು. ಆದ್ರೆ, ಪ್ರಮುಖ 4 ಬ್ಯಾಟರ್ಸ್​ ಪೆವಿಲಿಯನ್​ ಸೇರಿದ್ರು. ಇನ್ನೆರಡು ವಿಕೆಟ್​ ಹೋದ್ರೆ, ಕಥೆಯೇ ಮುಗಿದಿತ್ತು. ಈ ಸಂದರ್ಭದಲ್ಲಿ ಬ್ರಿಲಿಯಂಟ್​ ಇನ್ನಿಂಗ್ಸ್​ ಕಟ್ಟಿದ್ರು ಹಾರ್ದಿಕ್​ ಪಾಂಡ್ಯ.

4 ಫೋರ್​, 3 ಸಿಕ್ಸರ್​.. 185ರ ಸ್ಟ್ರೈಕ್​ರೇಟ್.!

ಬಾಂಗ್ಲಾ ಎದುರಿನ ಕದನದಲ್ಲಿ ಹಾರ್ದಿಕ್​ ಪಾಂಡ್ಯ ಸಿಡಿಸಿದ ಒಂದೇ ಒಂದು ಶಾಟ್​ ಕೂಡ ಮಿಸ್​ ಹಿಟ್​ ಆಗಲಿಲ್ಲ. ಎಲ್ಲ ಕ್ಲೀನ್​ ಹಿಟ್. ಒಂದೇ ಒಂದು ಎಸೆತವನ್ನ ಎದುರಿಸುವಾಗ್ಲೂ ಕಿಂಚಿತ್ತೂ ಹಿಂಜರಿಕೆಯಿರಲಿಲ್ಲ. ಒತ್ತಡ ಇರಲಿಲ್ಲ.. ಪ್ರತಿ ಶಾಟ್​ಗಳನ್ನ ಕೂಡ 100% ಪರ್ಫೆಕ್ಟ್​ ಆಗಿ ಪ್ಲೇ ಮಾಡಿದ್ರು. ಬಾಂಗ್ಲಾದ ಬೌಲರ್​ಗಳ ಮೇಲೆ ಸವಾರಿ ಮಾಡಿದ ಹಾರ್ದಿಕ್​​, 4 ಬೌಂಡರಿ, 3 ಸಿಕ್ಸರ್​ ಚಚ್ಚಿದ್ರು.

ಬಾಂಗ್ಲಾ ಪ್ಲೇಯರ್ಸ್​​ಗೆ ಶಾಕ್ ಕೊಟ್ಟ ಪಾಂಡ್ಯ.. ಹಾರ್ದಿಕ್​

185 ಸ್ಟ್ರೈಕ್​ರೇಟ್​ನಲ್ಲಿ ಘರ್ಜಿಸಿದ ಹಾರ್ದಿಕ್​, 21 ಎಸೆತಗಳಲ್ಲಿ ಸಿಡಿಸಿದ್ದು 50 ರನ್​ಗಳನ್ನ. ಹಾರ್ದಿಕ್​ ಪಾಂಡ್ಯ ಸಿಡಿಸಿದ ಅಬ್ಬರದ ಅರ್ಧಶತಕ ಟೀಮ್​ ಇಂಡಿಯಾಗೆ ಬಿಗ್​ ಟಾರ್ಗೆಟ್​ ಸೆಟ್​ ಮಾಡಲು ನೆರವಾಯ್ತು. 196 ರನ್​ಗಳ ಸವಾಲಿನ ಟಾರ್ಗೆಟ್​ ನೀಡದಿದ್ದಿದ್ರೆ, ಬಾಂಗ್ಲಾ ಟೈಗರ್ಸ್​ನ ಸೋಲಿಸೋದು ನಿಜಕ್ಕೂ ಕಷ್ಟದ್ದಾಗ್ತಿತ್ತು.

ಬೌಲಿಂಗ್​ನಲ್ಲೂ ಹಾರ್ದಿಕ್​​ ಪಾಂಡ್ಯ ಮಿಂಚು.!

ಬ್ಯಾಟಿಂಗ್​ ಮಾತ್ರವಲ್ಲ.. ಬೌಲಿಂಗ್​ನಲ್ಲೂ ಹಾರ್ದಿಕ್​ ಮಿಂಚಿದ್ರು. ತಂಡಕ್ಕೆ ಉತ್ತಮ ಆರಂಭ ಪಡೆಯೋ ಲೆಕ್ಕಾಚಾರದಲ್ಲಿದ್ದ ಬಾಂಗ್ಲಾಗೆ ಶಾಕ್​ ಕೊಟ್ಟಿದ್ದು ಇದೇ ಪಾಂಡ್ಯ. ಡೇಂಜರಸ್​ ಲಿಟನ್​ ದಾಸ್​ ವಿಕೆಟ್ ಕಬಳಿಸಿದ ಹಾರ್ದಿಕ್​ ಭಾರತಕ್ಕೆ ಮೊದಲ ಬ್ರೇಕ್​ ಥ್ರೂ ಕೊಟ್ರು.

ಇದನ್ನೂ ಓದಿ: ದರ್ಶನ್​ ಗ್ಯಾಂಗ್​ನ​ ಆರೋಪಿಗಳ ಹೆಸರಲ್ಲಿ ಹೊಸ ಸಿಮ್ ಖರೀದಿಸಿದ ಪೊಲೀಸರು.. ತನಿಖೆ ಏನೇನು ಆಗ್ತಿದೆ?

ವಿಶ್ವಕಪ್​ ಅಖಾಡದಲ್ಲಿ ಹಾರ್ದಿಕ್​ ಬೊಂಬಾಟ್​ ಆಟ.!

ವಿಶ್ವಕಪ್​ ಆರಂಭಕ್ಕೂ ಮುನ್ನ ಐಪಿಎಲ್​ನಲ್ಲಿ ಹಾರ್ದಿಕ್​ ಪಾಂಡ್ಯ ಕಳಪೆ ಪರ್ಫಾಮೆನ್ಸ್​ ಸುಳಿಗೆ ಸಿಲುಕಿದ್ರು. ತಂಡದಲ್ಲಾದ ಬದಲಾವಣೆ, ಟೀಕೆ-ಟಿಪ್ಪಣಿಗಳು, ವೈಯಕ್ತಿಕ ಜೀವನದ ಬಗೆಗಿನ ಉಹಾಪೋಹ ಈ ಎಲ್ಲ ವಿಚಾರಗಳಿಂದ ಹಾರ್ದಿಕ್​ ಕುಗ್ಗಿ ಹೋಗಿದ್ರು. ಸಮಸ್ಯೆಗಳ ಸುಳಿಗೆ ಸಿಲುಕಿ ಬಸವಳಿದಿದ್ದ ಪಾಂಡ್ಯ ವಿಶ್ವಕಪ್​ನಲ್ಲಿ ಪುಟಿದೆದ್ದಿದ್ದಾರೆ. ಬ್ಯಾಟಿಂಗ್​, ಬೌಲಿಂಗ್​ ಎರಡೂ ವಿಭಾಗದಲ್ಲೂ ಕ್ರೂಶಿಯಲ್​ ರೋಲ್​ ಪ್ಲೇ ಮಾಡ್ತಿದ್ದಾರೆ. 3 ಇನ್ನಿಂಗ್ಸ್​ಗಳಿಂದ 44.50ರ ಸರಾಸರಿಯಲ್ಲಿ 89 ರನ್​ಗಳ ಕಾಣಿಕೆ ನೀಡಿದ್ರೆ, 17 ಓವರ್​ ಬೌಲಿಂಗ್​ ಮಾಡಿ 8 ವಿಕೆಟ್​ ಬೇಟೆಯಾಡಿದ್ದಾರೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್ ಜೈಲಲ್ಲಿ ಒಳಸಂಚು ರೂಪಿಸುತ್ತಾ.. ಕೋರ್ಟ್​ಗೆ ಪೊಲೀಸರು ಮತ್ತೆ ಮನವಿ ಮಾಡಿದ್ದೇನು?

ತನ್ನ ಜೀವನದ ಸಂಕಷ್ಟಗಳ ಮೆಟ್ಟಿ ನಿಂತಿರೋ ಹಾರ್ದಿಕ್​ ಪಾಂಡ್ಯ, ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಸಂಕಷ್ಟಹರನಾಗಿದ್ದಾರೆ. ಬ್ಯಾಟಿಂಗ್​, ಬೌಲಿಂಗ್​ ಎರಡರಲ್ಲೂ ಸಾಲಿಡ್​ ಆಟವಾಡ್ತಾ ರಿಯಲ್​ ಫೈಟರ್​ ಅನ್ನೋದನ್ನ ನಿರೂಪಿಸ್ತಾ ಇದ್ದಾರೆ. ಮುಂದಿನ ಪಂದ್ಯಗಳಲ್ಲೂ ಹಾರ್ದಿಕ್​ ಇಂತದ್ದೇ ಪರ್ಫಾಮೆನ್ಸ್​ ನೀಡಲಿ. ಕಪ್​ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿ ಅನ್ನೋದು ಎಲ್ಲರ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹಾರ್ದಿಕ್​ ಅಬ್ಬರಕ್ಕೆ ಬಾಂಗ್ಲಾ ಕಂಗಾಲು.. 4 ಬೌಂಡ್ರಿ, 3 ಭರ್ಜರಿ ಸಿಕ್ಸರ್; ಹೇಗಿತ್ತು ಪಾಂಡ್ಯ ಆರ್ಭಟ?

https://newsfirstlive.com/wp-content/uploads/2024/06/PANDYA_style.jpg

Load More