2ನೇ ಪಂದ್ಯದ ಹೀನಾಯ ಸೋಲಿನಿಂದ ಪಾಠ ಕಲಿತ ಭಾರತ
ಬೌಲಿಂಗ್, ಬ್ಯಾಟಿಂಗ್ನಲ್ಲೂ ಎರಡರಲ್ಲೂ ಭರ್ಜರಿ ಪ್ರದರ್ಶನ
ಹಾರ್ದಿಕ್, ಮುಕೇಶ್, ಸಂಜು, ಗಿಲ್, ಸೂರ್ಯ ಸೂಪರ್ ಆಟ
ಕೆರಿಬಿಯನ್ ನಾಡಲ್ಲಿ ಯಂಗ್ ಇಂಡಿಯಾ ಘರ್ಜಿಸಿದೆ. 2ನೇ ಏಕದಿನದ ಹೀನಾಯ ಸೋಲಿನ ಟೀಕೆಗಳಿಗೆ ಅಬ್ಬರದ ಪ್ರದರ್ಶನದಿಂದಲೇ ಆನ್ಸರ್ ಕೊಟ್ಟಿದೆ. ಟ್ರಿನಿಡಾಡ್ ಅಂಗಳದಲ್ಲಿ ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಟೀಮ್ ಇಂಡಿಯಾದ ಆರ್ಭಟ ಹೇಗಿತ್ತು? ಪಂದ್ಯದ ಹೈಲೆಟ್ಸ್ ಇಲ್ಲಿದೆ.
ಗಿಲ್-ಕಿಶನ್ ಆಟಕ್ಕೆ ವಿಂಡೀಸ್ ಸುಸ್ತು..!
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾಗೆ ಶುಭ್ಮನ್ ಗಿಲ್-ಇಶಾನ್ ಕಿಶನ್ ಸಾಲಿಡ್ ಓಪನಿಂಗ್ ನೀಡಿದ್ರು. ವಿಂಡೀಸ್ ಬೌಲರ್ಗಳ ಮೇಲೆ ಸವಾರಿ ಮಾಡಿ ಮೊದಲ ವಿಕೆಟ್ಗೆ ಬರೋಬ್ಬರಿ 143 ರನ್ಗಳ ಜೊತೆಯಾಟವಾಡಿದ್ರು.
4ನೇ ಕ್ರಮಾಂಕದಲ್ಲಿ ಅಬ್ಬರಿಸಿದ ಸಂಜು..!
ಅಬ್ಬರದ ಹಾಫ್ ಸೆಂಚುರಿ ಸಿಡಿಸಿದ ಇಶಾನ್ ಕಿಶನ್, 77 ರನ್ ಸಿಡಿಸಿ ಔಟಾದ್ರು. ಆ ಬಳಿಕ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ ಬಿಗ್ ಸ್ಕೋರ್ ಕಲೆ ಹಾಕುವಲ್ಲಿ ವಿಫಲರಾದ್ರು. ಆದ್ರೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಸಂಜು ಸ್ಯಾಮ್ಸನ್ ಭರ್ಜರಿ ಅರ್ಧಶತಕ ಸಿಡಿಸಿದ್ರು.
ಹಾರ್ದಿಕ್-ಸೂರ್ಯ ಕುಮಾರ್ ಸೂಪರ್ ಆಟ..!
ಅರ್ಧಶತಕದ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಔಟಾದ್ರೆ, ಶತಕದಂಚಿನಲ್ಲಿ ಶುಭ್ಮನ್ ಗಿಲ್ ಎಡವಿದ್ರು. 11 ಬೌಂಡರಿ ಸಿಡಿಸಿ 85 ರನ್ಗಳಿಸಿದ್ದ ಗಿಲ್, ಸೆಂಚುರಿ ಸಿಡಿಸೋ ಅವಕಾಶವನ್ನು ಮಿಸ್ ಮಾಡಿಕೊಂಡ್ರು. ಆ ಬಳಿಕ ಜೊತೆಯಾದ ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಜೋಡಿ ವಿಂಡೀಸ್ ಬೌಲರ್ಗಳ ಬೆವರಿಳಿಸಿದ್ರು. ಸೂರ್ಯ ಕುಮಾರ್ ಯಾದವ್, 35 ರನ್ ಸಿಡಿಸಿದ್ರೆ, ಹಾರ್ದಿಕ್ ಪಾಂಡ್ಯ ಸ್ಫೋಟಕ 70 ರನ್ಗಳ ಇನ್ನಿಂಗ್ಸ್ ಕಟ್ಟಿದ್ರು. 50 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ 351 ರನ್ಗಳ ಬೃಹತ್ ಮೊತ್ತ ಕಲೆಹಾಕ್ತು.
ಆರಂಭದಲ್ಲೇ ಕಂಗಾಲಾದ ವೆಸ್ಟ್ ಇಂಡೀಸ್..!
ಬೆಟ್ಟದಂತಹ ಸವಾಲನ್ನು ಬೆನ್ನತ್ತಿದ ವಿಂಡೀಸ್ ಪಡೆ ಆರಂಭದಲ್ಲೇ ಎಡವಿತು. ಮುಖೇಶ್ ಕುಮಾರ್ ಆರ್ಭಟದ ಮುಂದೆ ಕಂಗಾಲಾದ ವಿಂಡೀಸ್ ಪಡೆ 17 ರನ್ಗಳಿಸುವಷ್ಟರಲ್ಲೇ 3 ವಿಕೆಟ್ ಕಳೆದುಕೊಳ್ತು. ಬ್ರೆಂಡನ್ ಕಿಂಗ್, ಕೈಲ್ ಮೆಯರ್ಸ್, ಶಾಯ್ ಹೋಪ್ ಪೆವಿಲಿಯನ್ ಪರೇಡ್ ನಡೆಸಿದ್ರು.
151 ರನ್ಗಳಿಗೆ ವಿಂಡೀಸ್ ಆಲೌಟ್..!
ಆರಂಭಿಕ ಆಘಾತ ಕಂಡ ಕೆರಬಿಯನ್ ಪಡೆಗೆ ಸುಧಾರಿಸಿಕೊಳ್ಳಲು ಟೀಮ್ ಇಂಡಿಯನ್ಸ್ ಅವಕಾಶವನ್ನೇ ನೀಡಲಿಲ್ಲ.. ಜಯದೇವ್ ಉನಾದ್ಕತ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್ ಮತ್ತೆ ಶಾಕ್ ಟ್ರೀಟ್ಮೆಂಟ್ ನೀಡಿದ್ರು. ಪರಿಣಾಮ 151 ರನ್ಗಳಿಗೆ ವಿಂಡೀಸ್ ಆಲೌಟ್ ಆಯ್ತು. 200 ರನ್ ಅಂತರದ ಬೃಹತ್ ಜಯ ಸಾಧಿಸಿದ ಟೀಮ್ ಇಂಡಿಯಾ 2-1 ಅಂತರದಲ್ಲಿ ಸರಣಿ ಕೈ ವಶ ಮಾಡಿಕೊಳ್ತು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್