newsfirstkannada.com

ರೋಹಿತ್ ಗುಡ್​ಬೈ.. T20 ಕ್ಯಾಪ್ಟನ್ಸಿಗಾಗಿ ಇಬ್ಬರು ಆಟಗಾರರ ಮಧ್ಯೆ ಬಿಗ್ ಫೈಟ್​

Share :

Published July 1, 2024 at 2:58pm

  ಟೀಮ್ ಇಂಡಿಯಾದ ಚುಟುಕು ಕ್ರಿಕೆಟ್ ನಾಯಕ ಯಾರು ಆಗ್ತಾರೆ?

  ಭಾರತದ ಚುಟುಕು ಕ್ರಿಕೆಟ್​ಗೆ ವಿದಾಯ ಹೇಳಿದ್ದ ರೋಹಿತ್ ಶರ್ಮಾ

  ಕ್ಯಾಪ್ಟನ್​ ಸ್ಥಾನಕ್ಕಾಗಿ ಈಗಾಗಲೇ ಯಾವ್ಯಾವ ಹೆಸರುಗಳಿವೆ ಗೊತ್ತಾ?

ವೆಸ್ಟ್ ಇಂಡೀಸ್​ನಲ್ಲಿ T20 ವರ್ಲ್ಡ್​​ಕಪ್​ಗೆ ಮುತ್ತಿಕ್ಕಿದ್ದೇ ತಡ ರೋಹಿತ್ ಶರ್ಮಾ ಅವರು ಚುಟುಕು ಕ್ರಿಕೆಟ್​ಗೆ ಗುಡ್​ಬಾಯ್ ಹೇಳಿದ್ದರು. ಇದರ ಬೆನ್ನಲ್ಲೇ ಭಾರತದ ಟಿ20 ತಂಡಕ್ಕೆ ನಾಯಕ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಸದ್ಯ ಇದಕ್ಕೆ ವಿಶ್ವಕಪ್​​ನಲ್ಲಿ ಆಡಿರುವ ಇಬ್ಬರು ಆಟಗಾರರ ಹೆಸರು ಕೇಳಿ ಬಂದಿವೆ. ಆದರೆ ಬಿಸಿಸಿಐ ಯಾರಿಗೆ ಮಣೆ ಹಾಕುತ್ತೆ ಎಂದು ಕಾದು ನೋಡಬೇಕಿದೆ.

ಭಾರತದ ಟಿ20 ತಂಡದ ನಾಯಕನಾಗ್ತಾರಾ ಹಾರ್ದಿಕ್ ಪಾಂಡ್ಯ?

ಪಾಂಡ್ಯ ಅನುಭವಿ ಆಟಗಾರನಾಗಿದ್ದು ಭಾರತಕ್ಕಾಗಿ ಅನೇಕ ಸಂದರ್ಭಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 2024ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಹಾರ್ದಿಕ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಪಾಂಡ್ಯ ಅವರ ನಾಯಕತ್ವದ ದಾಖಲೆಯನ್ನು ಗಮನಿಸಿದರೆ ಅದು ಉತ್ತಮವಾಗಿದೆ. ಪಾಂಡ್ಯ 2022-23ರಲ್ಲಿ 16 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಅದೇ ಸಮಯದಲ್ಲಿ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಚಾಂಪಿಯನ್‌ ಆಗಿ ಮಾಡಿದ ಕೀರ್ತಿ ಇವರಿಗಿದೆ. ಭಾರತ ತಂಡ ಪಾಂಡ್ಯ ಅವರನ್ನು ಮುಂದಿನ ನಾಯಕನನ್ನಾಗಿ ಆಯ್ಕೆ ಮಾಡಬಹುದು. ಇದರ ಬೆನ್ನಲ್ಲೇ ಪಾಂಡ್ಯಗೆ ಬದಲಾಗಿ ಪ್ರಬಲ ಸ್ಪರ್ಧಿಯ ಹೆಸರು ಕೇಳಿಬರುತ್ತಿದೆ.

ಇದನ್ನೂ ಓದಿ: ನಟ ದರ್ಶನ್ ತಾಯಿ ಮೀನಾ, ಸಹೋದರ ದಿನಕರ ಜೈಲಿಗೆ ಭೇಟಿ.. ಮಗನ ಸಂಕಟ ನೋಡಿ ಅಮ್ಮ ಭಾವುಕ..

ರಿಷಬ್​ ಪಂತ್‌ಗೆ ಒಲಿದು ಬರುತ್ತಾ ಕ್ಯಾಪ್ಟನ್ ಸ್ಥಾನ?

ರಿಷಬ್ ಪಂತ್ ಅವರ ಈವರೆಗಿನ ಪ್ರದರ್ಶನ ಅತ್ಯುತ್ತಮವಾಗಿದೆ. ಗಾಯದಿಂದ ಮರಳಿದ ನಂತರ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಪಂತ್ ನಾಯಕರಾಗಿದ್ದಾರೆ. ಅವರ ನಾಯಕತ್ವದ ದಾಖಲೆ ಉತ್ತಮವಾಗಿದೆ. ಟೀಂ ಇಂಡಿಯಾ ಕೂಡ ಪಂತ್ ಅವರನ್ನು ಪರಿಗಣಿಸಬಹುದು ಎನ್ನಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರೋಹಿತ್ ಗುಡ್​ಬೈ.. T20 ಕ್ಯಾಪ್ಟನ್ಸಿಗಾಗಿ ಇಬ್ಬರು ಆಟಗಾರರ ಮಧ್ಯೆ ಬಿಗ್ ಫೈಟ್​

https://newsfirstlive.com/wp-content/uploads/2024/07/ROHIT_VIRAT-2.jpg

Load More