ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಆಟಗಾರ
ಎಡ ಪಾದಕ್ಕೆ ಗಂಭೀರ ಸ್ವರೂಪದ ಗಾಯ ಹಿನ್ನೆಲೆಯಲ್ಲಿ ಔಟ್
ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡ್ತಿರುವ ಭಾರತಕ್ಕೆ ಹೊಡೆತ
ವಿಶ್ವಕಪ್ನಲ್ಲಿ ಸೆಮಿ ಫೈನಲ್ ಪ್ರವೇಶ ಮಾಡಿರುವ ಟೀಂ ಇಂಡಿಯಾಗೆ ದೊಡ್ಡ ಹೊಡೆತ ಆಗಿದೆ. ಗಾಯಗೊಂಡಿದ್ದ ಉಪನಾಯಕ ಹಾರ್ದಿಕ್ ಪಾಂಡ್ಯ ಏಕದಿನ ವಿಶ್ವಕಪ್ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ.
ಅವರ ಬದಲಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಮಣೆ ಹಾಕಲಾಗಿದೆ. ಹಾರ್ದಿಕ್ ಪಾಂಡ್ಯ ಅವರು, ಕಳೆದ ತಿಂಗಳು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರು. ಫೀಲ್ಡಿಂಗ್ ವೇಳೆ ಎಡಗಾಲಿನ ಪಾದಕ್ಕೆ ಗಾಯವಾಗಿತ್ತು. ಕೂಡಲೇ ಮೈದಾನದಿಂದ ಹೊರ ಹೋಗಿದ್ದ ಪಾಂಡ್ಯ ಮತ್ತೆ ವಾಪಸ್ ಫೀಲ್ಡಿಂಗ್ ಬರುತ್ತಾರೆ ಎನ್ನಲಾಗಿತ್ತು.
ಗಾಯ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಮುಂದಿನ ಎರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿತ್ತು. ಈ ಬೆನ್ನಲ್ಲೇ ಬೆಂಗಳೂರಿನ ಎನ್ಸಿಎ ಅಕಾಡೆಮಿಗೆ ಪಾಂಡ್ಯ ಬಂದಿದ್ದರು. ಸೆಮಿ ಫೈನಲ್ ನಲ್ಲಿ ಪಾಂಡ್ಯ ತಂಡದಲ್ಲಿ ಇರಲಿದ್ದಾರೆ ಎಂದು ಹೇಳಲಾಗಿತ್ತದರೂ, ಇದೀಗ ವಿಶ್ವಕಪ್ನಿಂದಲೇ ಹೊರಬಿದ್ದಿದ್ದಾರೆ ಅನ್ನೋ ಆಘಾತಕಾರಿ ಸುದ್ದಿ ಸಿಕ್ಕಿದೆ.
Hardik Pandya ruled out of the World Cup 2023.
– Prasidh Krishna replaces Hardik Pandya in the team. pic.twitter.com/HMOkdKojKL
— Johns. (@CricCrazyJohns) November 4, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ