newsfirstkannada.com

ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗಬೇಕಿದ್ದ ಹಾರ್ದಿಕ್​​ಗೆ ಮತ್ತೊಂದು ಬಿಗ್​ ಶಾಕ್​​.. ಈ ಸಲ ಏನಾಯ್ತು?

Share :

Published July 11, 2024 at 6:05pm

Update July 11, 2024 at 6:02pm

    ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗಬೇಕಿದ್ದ ಹಾರ್ದಿಕ್​ ಪಾಂಡ್ಯಗೆ ಶಾಕ್..​​!

    ಬಿಂಗ್​​​ ಶಾಕ್​ ಕೊಟ್ಟ ಐಸಿಸಿ ಪುರುಷರ ಟಿ20 ಆಲ್‌ರೌಂಡರ್ ಶ್ರೇಯಾಂಕ

    ಕಳೆದ ವಾರ ಆಲ್‌ರೌಂಡರ್ ಶ್ರೇಯಾಂಕದಲ್ಲಿ ನಂ. 1 ಸ್ಥಾನಕ್ಕೇದಿದ್ದ ಪಾಂಡ್ಯ

ಜಿಂಬಾಬ್ವೆ ವಿರುದ್ಧ ಟಿ20 ಸರಣಿ ಬೆನ್ನಲ್ಲೇ ಟೀಮ್​ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಟೀಮ್​ ಇಂಡಿಯಾ 3 ಟಿ20 ಮತ್ತು 3 ODI ಪಂದ್ಯಗಳ ಸರಣಿ ಆಡಲಿದೆ. ಈಗಾಗಲೇ ಟೀಮ್​ ಇಂಡಿಯಾಗೆ ಹೊಸ ಕೋಚ್​​​​ ಆಗಿ ಗೌತಮ್​ ಗಂಭೀರ್​​ ನೇಮಕವಾಗಿದ್ದಾರೆ. ಶ್ರೀಲಂಕಾ ವಿರುದ್ಧ ಸರಣಿಗೆ ಭಾರತ ಕ್ರಿಕೆಟ್​ ತಂಡಕ್ಕೆ ಹೊಸ ನಾಯಕನ ಹೆಸರು ಘೋಷಣೆ ಮಾಡಬೇಕಿದೆ.

ವಿಶ್ವಕಪ್​ ಗೆದ್ದ ಬೆನ್ನಲ್ಲೇ ಟಿ20 ಸ್ವರೂಪಕ್ಕೆ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ರು. ಹಾಗಾಗಿ ಟಿ20 ಟೀಮ್​​​ ಇಂಡಿಯಾಗೆ ಹೊಸ ಟಿ20 ಕ್ಯಾಪ್ಟನ್​​​ ಬೇಕಿದ್ದಾರೆ. ಈ ಹಿಂದೆ ರೋಹಿತ್​ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಟಿ20 ಕ್ರಿಕೆಟ್​ನಲ್ಲಿ ಹಾರ್ದಿಕ್​ ಪಾಂಡ್ಯ ಮುನ್ನಡೆಸಿದ್ರು. ಈಗ ಹಾರ್ದಿಕ್​ ಬದಲಿಗೆ ಟಿ20 ಕ್ರಿಕೆಟ್​ ತಂಡಕ್ಕೆ ರಾಹುಲ್​ ಕ್ಯಾಪ್ಟನ್​ ಆಗಲಿ ಅನ್ನೋ ಒತ್ತಾಯ ಕೇಳಿ ಬಂದಿದೆ. ಇದರ ಮಧ್ಯೆ ಹಾರ್ದಿಕ್​​ ಮತ್ತೊಂದು ಶಾಕಿಂಗ್​ ನ್ಯೂಸ್​ ಇದೆ.

ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗಬೇಕಿರೋ ಹಾರ್ದಿಕ್​ಗೆ ಶಾಕ್​​ ಮೇಲೆ ಶಾಕ್​ ಸಿಗುತ್ತಿದೆ. ಹಾರ್ದಿಕ್​​ ಪಾಂಡ್ಯ ಐಸಿಸಿ ಪುರುಷರ ಟಿ20 ಆಲ್‌ರೌಂಡರ್ ಶ್ರೇಯಾಂಕದ ಅಗ್ರಸ್ಥಾನದಿಂದ ಕುಸಿದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಹಾಗಾಗಿ ಮತ್ತೆ ಶ್ರೀಲಂಕಾ ಸ್ಟಾರ್ ವನಿಂದು ಹಸರಂಗಾ ಅಗ್ರಸ್ಥಾನಕ್ಕೆ ಏರಿದ್ದಾರೆ.

ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಹಾರ್ದಿಕ್ ಪಾಂಡ್ಯ ಕಳೆದ ವಾರ ಆಲ್‌ರೌಂಡರ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೆ ಏರಿದ್ದರು. ಈಗ ಟಿ20 ಆಲ್‌ರೌಂಡರ್ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದು, ಹಾರ್ದಿಕ್​ ಜಾಗಕ್ಕೆ ಹಸರಂಗ ಬಂದಿದ್ದಾರೆ.

ಇದನ್ನೂ ಓದಿ: ಹಾರ್ದಿಕ್​ ಬೇಡ.. ಕೆ.ಎಲ್​ ರಾಹುಲ್​ ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗಲಿ ಎಂದ ಸೆಲೆಕ್ಟರ್ಸ್​!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗಬೇಕಿದ್ದ ಹಾರ್ದಿಕ್​​ಗೆ ಮತ್ತೊಂದು ಬಿಗ್​ ಶಾಕ್​​.. ಈ ಸಲ ಏನಾಯ್ತು?

https://newsfirstlive.com/wp-content/uploads/2023/06/HARDIK_PANDYA_CAPTAIN.jpg

Load More