newsfirstkannada.com

ಕ್ಯಾಪ್ಟನ್​ ರೋಹಿತ್​, ಕೊಹ್ಲಿ ಅಲ್ವೇ ಅಲ್ಲ.. ಟೀಮ್ ಇಂಡಿಯಾದ ಈ ತ್ರಿಮೂರ್ತಿಗಳೇ ಇಂಗ್ಲೆಂಡ್​ಗೆ ಭಯ

Share :

Published June 27, 2024 at 2:51pm

  ಬಂದ ಬಂದಾಗೆ ದಂಡಂ ದಶಗುಣಂ ಮಂತ್ರ ಪಠಿಸೋ ಪ್ಲೇಯರ್

  ಜೋಸ್​ ಬಟ್ಲರ್​ಗೆ ಭಾರತದ ಈ ಪ್ಲೇಯರ್ಸ್​ ಎಂದರೆ​ ಆತಂಕ

  ಸೆಮಿಫೈನಲ್​ನಲ್ಲಿ ಇವರಿಂದ ಮಿಂಚಿನಾಟ ಬರೋದು ಗ್ಯಾರಂಟಿ

ಸೆಮಿಸ್​ ಸಮರಕ್ಕೆ ಸಜ್ಜಾಗಿರೋ ಹಾಲಿ ಚಾಂಪಿಯನ್ಸ್​​ಗೆ ಅಸಲಿ ಯುದ್ಧ ಆರಂಭಕ್ಕೂ ಮೊದಲೇ ಆತಂಕ ಶುರುವಾಗಿದೆ. ಟೀಮ್​ ಇಂಡಿಯಾದ ತ್ರಿಮೂರ್ತಿಗಳು ಇಂಗ್ಲೆಂಡ್​ ಕ್ಯಾಪ್ಟನ್​​ ಜೋಸ್​ ಬಟ್ಲರ್​​​ ಟೆನ್ಶನ್​ ತಂದಿಟ್ಟಿದ್ದಾರೆ. ಆಂಗ್ಲರ ಆತಂಕಕ್ಕೆ ಕಾರಣ ಏನು, ತ್ರಿಮೂರ್ತಿಗಳ ಬಗ್ಗೆ ಯಾಕಿಷ್ಟು ಭಯ, ಭಾರತದ ಆ 3 ಟೈಗರ್ಸ್​ ಯಾರು?.

ಇದನ್ನೂ ಓದಿ: Kalki 2898 AD: ತೆರೆ ಮೇಲೆ ಗ್ರ್ಯಾಂಡ್ ಆಗಿ ಅಪ್ಪಳಿಸಿದ ಕಲ್ಕಿ.. ಸ್ಟಾರ್ ದಿಗ್ಗಜರ ಕಂಡು ಸಿನಿ ರಸಿಕರು ಫುಲ್ ಖುಷ್..!

ಇಂಡೋ-ಇಂಗ್ಲೆಂಡ್​ ಮದಗಜಗಳ ಕಾಳಗಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಸೋಲಿಲ್ಲದ ಸರದಾರನಂತೆ ಸೆಮಿಪೈನಲ್​ಗೆ ಎಂಟ್ರಿಕೊಟ್ಟಿರೋ ಟೀಮ್​ ಇಂಡಿಯಾ ಸೆಮಿಸ್​​ ಸಮರ ವಿಜಯಪತಾಕೆ ಹಾರಿಸಲು ತುದಿಗಾಲಲ್ಲಿ ನಿಂತಿದೆ. ಆದ್ರೆ, ಅಫ್ಘಾನ್​ ತಂಡದಲ್ಲಿ ಯುದ್ಧಕ್ಕೂ ಮೊದಲೇ ಆತಂಕ ಶುರುವಾಗಿದೆ.

ಇದನ್ನೂ ಓದಿ: ಕಾವೇರಿ ಒಡಲು ಬಗೆದು ಲೂಟಿಗೆ ಸ್ಕೆಚ್​.. ನ್ಯೂಸ್​ ಫಸ್ಟ್​ ವರದಿ ಬೆನ್ನಲ್ಲೇ ಅಧಿಕಾರಿಗಳು ಅಲರ್ಟ್​, ಭೂಗಳ್ಳ ಶಾಕ್..!

ಸೆಮಿಸ್​ಗೂ ಮುನ್ನ ಹಾಲಿ ಚಾಂಪಿಯನ್ಸ್​ಗೆ ತಲೆನೋವು.!

ಬ್ಯಾಟ್ಸ್​ಮನ್​ಗಳು ಆಂಗ್ಲರ ಮ್ಯಾಚ್​ ವಿನ್ನರ್​ ಆಗಿದ್ದಾರೆ. ಇಂಗ್ಲೆಂಡ್​ ಸಮಸ್ಯೆ ಇರೋದು ಬೌಲಿಂಗ್​ನಲ್ಲಿ. ಸ್ಪಿನ್​ ಮಾಂತ್ರಿಕ ಆದಿಲ್​ ರಶೀದ್​ ಬಿಟ್ರೆ, ಉಳಿದೆಲ್ಲ ಬೌಲರ್​ಗಳು ಎಕ್ಸ್​ಪೆನ್ಸಿವ್​ & ಇನ್​ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಇದೀಗ ಟೀಮ್​ ಇಂಡಿಯಾ ವಿರುದ್ಧ ಆದಿಲ್ ರಶೀದ್​ ಪರ್ಫಾಮೆನ್ಸ್​ ವಿಚಾರದಲ್ಲೂ ಕಾನ್ಫಿಡೆನ್ಸ್​ ತಂಡದಲ್ಲಿಲ್ಲ. ಈ ತಲೆನೋವಿಗೆ ಕಾರಣ ರಿಷಬ್​ ಪಂತ್​, ಸೂರ್ಯ ಕುಮಾರ್​, ಹಾರ್ದಿಕ್​ ಪಾಂಡ್ಯ..!

ಇಂಗ್ಲೆಂಡ್​​ಗೆ ರಿಷಭ್​ ಪಂತ್​ ‘ಪಂಚ್’​​​ ಚಿಂತೆ.!

ಡೇರ್​ ಡೆವಿಲ್​ ಪಂತ್ ಕ್ರಿಸ್​ಗಿಳಿದ​ ಆರಂಭದಲ್ಲೇ ಎದುರಾಳಿಗಳನ್ನ ಡಾಮಿನೇಟ್​ ಮಾಡ್ತಾರೆ. ಪಂತ್​​ ಸೆಟಲ್​ ಆಗ್ತಿನಿ ಆಮೇಲೆ ಹೊಡೀತಿನಿ ಅನ್ನೋ ಜಾಯಮಾನದವರಲ್ಲ. ಬಂದ ಬಂದಾಗೆ ದಂಡಂ ದಶಗುಣಂ ಮಂತ್ರ ಪಠಿಸ್ತಾರೆ. ಪಂತ್ ಈ ಅಟ್ಯಾಂಕಿಗ್​ ಸ್ಟ್ರೈಲ್​ ಆಫ್​ ಬ್ಯಾಟಿಂಗ್​​ನಿಂದ,​ ಇಂಗ್ಲೆಂಡ್​ಗೆ ಪಂಚ್​ ಕೊಡಬಹುದು ಅನ್ನೋದು ಇಂಗ್ಲೆಂಡ್​ ನಾಯಕ ಜೋಸ್​ ಬಟ್ಲರ್​ ಆತಂಕವಾಗಿದೆ.

ಸೂರ್ಯನ ‘ಶಾಖ’.. ಇಂಗ್ಲೆಂಡ್​ಗೆ ಕಾದಿದ್ಯಾ​​ ಶಾಕ್​.?

ಸೂರ್ಯನಿಗೆ ಟಾರ್ಚ್​​​ ಹಾಕೋಕೆ ಹೇಗೆ ಯಾರ ಕೈಲೂ ಸಾಧ್ಯವಿಲ್ವೋ ಹಾಗೇ ಈ ಟೀಮ್​ ಇಂಡಿಯಾದ ಸೂರ್ಯಕುಮಾರ್​ಗೆ ಫೀಲ್ಡ್​ ಪ್ಲೇಸ್​ಮೆಂಟ್​, ಗೇಮ್​ಪ್ಲಾನ್​ ಮಾಡೋದು ಸಿಕ್ಕಾಪಟ್ಟೆ ಕಷ್ಟ. ಈಗ ಸಾಲಿಡ್​ ಫಾರ್ಮ್​ನಲ್ಲಿದ್ದಾರೆ ಕೂಡ. ಹೀಗಾಗಿಯೇ ಸೆಮಿಫೈನಲ್​​ಗೂ ಮುನ್ನ ಇಂಗ್ಲೆಂಡ್​ ಕ್ಯಾಂಪ್​ನಲ್ಲಿ ಸೂರ್ಯನ ಶಾಖದ ಶಾಕ್​ನ ಭಯ ಕಾಡ್ತಿದೆ.

ಇದನ್ನೂ ಓದಿ: ಟಾಸ್ ಗೆದ್ದು ತಪ್ಪು ನಿರ್ಣಯ ತೆಗೆದುಕೊಂಡ ರಶೀದ್ ಖಾನ್.. ಕೋಚ್ ಮುಂದೆ ಹೋಗಿ ಗಳಗಳನೇ ಕಣ್ಣೀರಿಟ್ಟ ನಾಯಕ..!

ಪಾಂಡ್ಯ ಪವರ್​, ಇಂಗ್ಲೆಂಡ್​ಗೆ ಢವ.. ಢವ..!

ಹಾರ್ದಿಕ್​ ಪಾಂಡ್ಯ ಡೇಂಜರಸ್​ ಬ್ಯಾಟ್ಸ್​ಮನ್​. ಮ್ಯಾಚ್​ ಫಿನೀಷ್​ ಮಾಡೋ ತಾಕತ್ತೇ ಪಾಂಡ್ಯನ ಸ್ಟ್ರೆಂಥ್​. ಈ ಟೂರ್ನಿಯ ಡೆತ್​ ಓವರ್​ಗಳಲ್ಲಿ ಅಬ್ಬರಿಸಿರೋ ರೀತಿಯೇ ಪಾಂಡ್ಯ ಪವರ್​ ಏನು ಅನ್ನೋದು ವಿಶ್ವಕ್ಕೆ ಗೊತ್ತಾಗಿದೆ. ಪಾಂಡ್ಯ ಫ್ಲೋ ಅಲ್ಲಿದ್ರೆ, ಮುಗೀತು ಎದುರಾಳಿ ಬೌಲರ್​​ಗಳು ರನ್​ ಸುನಾಮಿಯಲ್ಲಿ ಕೊಚ್ಚಿ ಹೋಗ್ತಾರೆ. ಸದ್ಯ ಪಾಂಡ್ಯ ಒಳ್ಳೆ ರಿಧಮ್​ನಲ್ಲಿದ್ದು, ಈ ಫಾರ್ಮ್​ ನಾಯಕ ಬಟ್ಲರ್​, ಸೇರಿದಂತೆ ಇಂಗ್ಲೆಂಡ್​ ಟೀಮ್​ ಮ್ಯಾನೇಜ್​ಮೆಂಟ್​ಗೆ​ ತಲೆ ನೋವಾಗಿದೆ.

ಇದನ್ನೂ ಓದಿ: ನ್ಯೂಸ್ ​ಫಸ್ಟ್ ಇಂಫ್ಯಾಕ್ಟ್​; ಆರೋಪಿ ರವಿ ಕುಟುಂಬಕ್ಕೆ ಹರಿದು ಬಂದ ನೆರವಿನ ಹಸ್ತ.. ಶಾಲೆಗೆ ಹೊರಟ ಮಕ್ಕಳು

ಡಿಫೆಂಡಿಂಗ್​ ಚಾಂಪಿಯನ್ಸ್​ ಪಟ್ಟವನ್ನ ಉಳಿಸಿಕೊಳ್ಳಲು ಹೊರಟಿರೋ ಇಂಗ್ಲೆಂಡ್​ಗೆ ಸೆಮಿಫೈನಲ್​​ಗೂ ಮುನ್ನ ಆತ್ಮವಿಶ್ವಾಸದ ಕೊರತೆ ಕಾಡ್ತಿದೆ. ಮೊದಲೇ ವಿಂಡೀಸ್​ ಕಂಡೀಷನ್ಸ್​ ಇಂಗ್ಲೆಂಡ್​ಗೆ ವಿಲನ್​ ಆಗಿದೆ. ಇದ್ರ ಜೊತೆಗೆ ಪಂತ್​, ಸೂರ್ಯಕುಮಾರ್​​, ಹಾರ್ದಿಕ್​ ಪಾಂಡ್ಯ, ಬಟ್ಲರ್​ ಬಳಗದ ಕಾನ್ಫಿಡೆನ್ಸ್​ ಪೂರ್ತಿಯಾಗಿ ಕುಗ್ಗಿಸಿದ್ದಾರೆ. ಮೇಲ್ನೋಟಕ್ಕೆ ಇಂಗ್ಲೆಂಡ್​ ಬಲಿಷ್ಠವಾಗಿ ಕಾಣ್ತಿದ್ರೂ, ಇಂದಿನ ಪಂದ್ಯದಲ್ಲಿ ಆತಂಕದಲ್ಲೇ ಕಣಕ್ಕಿಳಿತಾ ಇದೆ. ಸೆಮಿಸ್​ ಸಮರದಲ್ಲಿ ಆಂಗ್ಲ ಪಡೆ ಈ ತ್ರಿಮೂರ್ತಿಗಳನ್ನ ಹೇಗೆ ಕಟ್ಟಿಹಾಕ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕ್ಯಾಪ್ಟನ್​ ರೋಹಿತ್​, ಕೊಹ್ಲಿ ಅಲ್ವೇ ಅಲ್ಲ.. ಟೀಮ್ ಇಂಡಿಯಾದ ಈ ತ್ರಿಮೂರ್ತಿಗಳೇ ಇಂಗ್ಲೆಂಡ್​ಗೆ ಭಯ

https://newsfirstlive.com/wp-content/uploads/2024/06/ROHIT-SHARMA-9.jpg

Load More