newsfirstkannada.com

GT vs CSK: ‘ಧೋನಿಯನ್ನು ದ್ವೇಷ ಮಾಡ್ತೀರಿ ಅಂದರೆ ನೀವು ಡೆವಿಲ್ ಆಗಿರ್ತೀರಿ’ ಹಾರ್ದಿಕ್ ಪಾಂಡ್ಯ..!

Share :

23-05-2023

    ಇಂದು ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ನಡುವೆ ಪಂದ್ಯ

    ನಾನು ಧೋನಿಯ ಅಪ್ಪಟ ಅಭಿಮಾನಿ ಎಂದ ಹಾರ್ದಿಕ್​ ಪಾಂಡ್ಯ

    ಇಂದು ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಗುರು ಮತ್ತು ಶಿಷ್ಯನ ನಡುವೆ​​ ಫೈಟ್​

ಐಪಿಎಲ್-2023 ಅಂತಿಮಘಟ್ಟ ತಲುಪುತ್ತಿದೆ. ಇಂದು ಸಂಜೆ ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ಫೈನಲ್ ಪ್ರವೇಶಕ್ಕಾಗಿ ಜಿದ್ದಾಜಿದ್ದಿನ ಸೆಣಸಾಟ ನಡೆಸಲಿವೆ.

ಗುರು-ಶಿಷ್ಯರ ಕಾಳಗ ಎಂದೇ ಬಿಂಬಿತಗೊಳ್ಳುತ್ತಿರುವ ಇವತ್ತಿನ ಪಂದ್ಯದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಕಾರಣ ಇಷ್ಟೇ ಗುರುವನ್ನು ಬಗ್ಗು ಬಡಿದು ಪಾಂಡ್ಯ ಫೈನಲ್ ಪ್ರವೇಶ ಮಾಡ್ತಾರೋ? ಇಲ್ಲ, ಶಿಷ್ಯನನ್ನು ಮಣಿಸಿ ಧೋನಿ ಫೈನಲ್​​ಗೆ ಎಂಟ್ರಿ ಕೊಡ್ತಾರೋ ಅನ್ನೋದು. ಇದರ ಮಧ್ಯೆ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ಸಂಬಂಧಗಳ ಬಗ್ಗೆ ಕ್ರಿಕೆಟ್​ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಇವತ್ತಿನ ಹೈ-ವೋಲ್ಟೇಜ್ ಪಂದ್ಯಕ್ಕೂ ಮೊದಲು ಹಾರ್ದಿಕ್ ಪಾಂಡ್ಯ, ಧೋನಿ ಬಗ್ಗೆ ಮಾತನಾಡಿದ್ದಾರೆ. ಗುಜರಾತ್​ ಟೈಟನ್ಸ್ ನಡೆಸಿದ ಸಂದರ್ಶನದಲ್ಲಿ ಧೋನಿ ಬಗ್ಗೆ ಪಾಂಡ್ಯ ಮಾತನಾಡಿ, ನಾನು ಯಾವತ್ತೂ ಎಂಎಸ್​ ಧೋನಿ ಅವರ ಅಪ್ಪಟ ಅಭಿಮಾನಿ. ಅವರೊಂದಿಗೆ ನನ್ನ ಒಡನಾಟ ಮೊದಲಿನಿಂದಲೂ ಚೆನ್ನಾಗಿಯೇ ಇದೆ.

ಅವರು ನನಗೆ ಒಳ್ಳೆಯ ಅಣ್ಣ, ಅವರು ನನಗೆ ಉತ್ತಮ ಸ್ನೇಹಿತ. ಧೋನಿ ಯಾರಿಗೆ ಇಷ್ಟ ಆಗಲ್ಲ ಹೇಳಿ. ಧೋನಿಯನ್ನು ದ್ವೇಷ ಮಾಡ್ತೀರಿ ಅಂದರೆ ನೀವು ದೆವ್ವ ಆಗಿರಬೇಕು. ಜಗತ್ತಿನ ಮೂಲೆ ಮೂಲೆಯಲ್ಲೂ ಅವರನ್ನು ಆರಾಧಿಸುವ ಅಭಿಮಾನಿಗಳ ಬಳಗ ಇದೆ. ತುಂಬಾ ಜನ ಧೋನಿ ಬಗ್ಗೆ ಯೋಚನೆ ಮಾಡ್ತಿರುತ್ತಾರೆ. ಅವರು ಯಾವಾಗಲೂ ಗಂಭೀರವಾಗಿ ಇರುತ್ತಾರೆ ಎಂದು. ಆದರೆ ನಿಜವಾಗಿಯೂ ಅವರು ಹಾಗೆ ಇಲ್ಲ ಎಂದು ಪಾಂಡ್ಯ ಬಣ್ಣಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

GT vs CSK: ‘ಧೋನಿಯನ್ನು ದ್ವೇಷ ಮಾಡ್ತೀರಿ ಅಂದರೆ ನೀವು ಡೆವಿಲ್ ಆಗಿರ್ತೀರಿ’ ಹಾರ್ದಿಕ್ ಪಾಂಡ್ಯ..!

https://newsfirstlive.com/wp-content/uploads/2023/05/DHONI_PANDYA.jpg

Load More