newsfirstkannada.com

ಹಾರ್ದಿಕ್​ ಪಾಂಡ್ಯ ಬೆಸ್ಟ್​ ಚಾಯ್ಸ್; ಟೆಸ್ಟ್​ಗೆ ಕ್ಯಾಪ್ಟನ್​ ಆದ್ರೆ ಡಬಲ್​ ಧಮಾಕ ಗ್ಯಾರಂಟಿ..!

Share :

19-06-2023

    ವಿಶ್ವಕಪ್​ ನಂತರ ಕೋಚ್​ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ದ್ರಾವಿಡ್ ​

    ಹಾರ್ದಿಕ್​ ಪಾಂಡ್ಯ ಆಲ್​ರೌಂಡರ್​ ಜೊತೆಗೆ ಟೆಸ್ಟ್​ಗೆ ಕ್ಯಾಪ್ಟನ್ ಆಗ್ತಾರಾ?​

    ವೆಸ್ಟ್​ ಇಂಡೀಸ್​ ಟೂರ್​ ಬಳಿಕ ತಂಡದಲ್ಲಿ ಬದಲಾವಣೆಯ ಪರ್ವ ಪಕ್ಕಾ

ವೆಸ್ಟ್​ ಇಂಡೀಸ್​​ ಪ್ರವಾಸದ ಟೆಸ್ಟ್​ ತಂಡದಲ್ಲಿ ಭಾರೀ ಬದಲಾವಣೆ ಆಗೋದು ಅನುಮಾನ. ಆದ್ರೆ, ವೆಸ್ಟ್​ ಇಂಡೀಸ್​​ ಸಿರೀಸ್​ ಮುಗಿದ ಮೇಲೆ ಟೀಮ್​ ಇಂಡಿಯಾ ಟೆಸ್ಟ್​ ತಂಡದಲ್ಲಿ ಬದಲಾವಣೆ ಖಚಿತ. ಹಳೆ ಫಾರ್ಮುಲಾ, ಅದೇ ಗೇಮ್​ಪ್ಲಾನ್​- ಸ್ಟ್ರಾಟಜಿಗಳಿಂದ ಟೀಮ್​ ಇಂಡಿಯಾ ಹೊರ ಬರಬೇಕಿದೆ. ಹಾಗಾಗಬೇಕೆಂದರೆ ಮಹತ್ವದ ಬದಲಾವಣೆ ಆಗಲೇಬೇಕು.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಮುಗ್ಗರಿಸಿದ ಟೀಮ್​ ಇಂಡಿಯಾ ಇದೀಗ ಮುಂಬರೋ ವೆಸ್ಟ್​ ಇಂಡೀಸ್​ ಪ್ರವಾಸದತ್ತ ಚಿತ್ತ ನೆಟ್ಟಿದೆ. ಆದ್ರೆ, ಕೆನ್ನಿಂಗ್ಟನ್​ ಓವಲ್​ನಲ್ಲಾದ ಹೀನಾಯ ಮುಖಭಂಗದ ಅವಮಾನ ಕ್ರಿಕೆಟ್​ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಟೀಮ್​ ಇಂಡಿಯಾ ಆಟಗಾರರ ಸಾಮರ್ಥ್ಯದ ಜೊತೆಗೆ ಕ್ಯಾಪ್ಟನ್​- ಕೋಚ್​ ಕಾರ್ಯ ವೈಖರಿಯ ಬಗ್ಗೆ ಯಥೇಚ್ಛವಾಗಿ ಪರ-ವಿರೋಧ ನಡೀತಾಲೇ ಇದೆ.

ಟೀಮ್​ ಇಂಡಿಯಾದಲ್ಲಿ ಬದಲಾವಣೆಗೆ ಇದೇ ಬೆಸ್ಟ್​ ಟೈಂ..!
ಟೀಮ್​ನಲ್ಲಿ ಬದಲಾವಣೆ ಆಗಲೇಬೇಕು ಅನ್ನೋದು ಹಲ ಮಾಜಿ ಕ್ರಿಕೆಟರ್​ಗಳು, ಕ್ರಿಕೆಟ್​ ಎಕ್ಸ್​​ಪರ್ಟ್​ಗಳ ಒಕ್ಕೊರಲ ಅಭಿಪ್ರಾಯವಾಗಿದೆ. ಆದ್ರೆ, ಈ ಬದಲಾವಣೆ ಮುಂಬರೋ ಇಂಡೀಸ್​​ ಪ್ರವಾಸದಲ್ಲೇ ಆಗೋದು ಅನುಮಾನ. ಆದ್ರೆ, ಆ ಬಳಿಕ ಟೀಮ್​ ಇಂಡಿಯಾ ಟೆಸ್ಟ್​ ತಂಡಕ್ಕೆ ಮೇಜರ್​ ಸರ್ಜರಿ ಆಗೋದು ನಿಶ್ಚಿತ. ಒಂದೆಡೆ ನಾಯಕತ್ವದಿಂದ ರೋಹಿತ್​ಗೆ ಕೊಕ್​ ನೀಡೋದು ಪಕ್ಕಾ ಆಗಿದ್ರೆ, ಕೋಚ್​ ದ್ರಾವಿಡ್​ ಕಾಂಟ್ರ್ಯಾಕ್ಟ್​ ಕೂಡ ಏಕದಿನ ವಿಶ್ವಕಪ್​ ಬಳಿಕ ಮುಗಿಯಲಿದೆ. ಆ ಬಳಿಕ ತಂಡಕ್ಕೆ ಹೊಸ ಸಾರಥಿಗಳ ಆಯ್ಕೆ ಮಾಡೋದ್ರೊಂದಿಗೆ ಬದಲಾವಣೆಯ ಪರ್ವ ಆರಂಭವಾಗಲಿದೆ.

ಇಂಗ್ಲೆಂಡ್​ ಮಾದರಿ ಅನುಸರಿಸಬೇಕಾ ಟೀಮ್​ ಇಂಡಿಯಾ.?
ಕಳೆದ 2 ವರ್ಷದಿಂದ ಕ್ರಿಕೆಟ್​ ಜನಕರು ಟೆಸ್ಟ್​ ಕ್ರಿಕೆಟ್​ಗೆ ಹೊಸ ಟಚ್​ ಕೊಟ್ಟಿದ್ದಾರೆ. ಬಜ್​​ಬಾಲ್​ ಮಂತ್ರ ಪಠಿಸಿ ಕ್ರಿಕೆಟ್​ ಲೋಕವನ್ನೆ ವಿಸ್ಮಯಕ್ಕೆ ದೂಡಿದ್ದಾರೆ. ಗೆಲುವೊಂದೆ ಗುರಿ.. ಡ್ರಾ ಮಾಡಿಕೊಳ್ಳೋ ಸೀನೆ ಇಲ್ಲ ಎಂಬಂತೆ ಅಗ್ರೆಸ್ಸಿವ್​ ಆಟವಾಡ್ತಿರೋ ಇಂಗ್ಲೆಂಡ್​​ ತಂಡ ಈಗ ಸಕ್ಸಸ್​​ ಪೀಕ್​ನಲ್ಲಿದೆ. ನಾಯಕ ಬೆನ್​ ಸ್ಟೋಕ್ಸ್​, ಕೋಚ್​ ಬ್ರೆಂಡಮ್​ ಮೆಕಲಮ್​ರ ಈ ಹೊಸ ಸ್ಟ್ರಾಟಜಿಗೆ ದಿಗ್ಗಜ ತಂಡಗಳೇ ಮಕಾಡೆ ಮಲಗಿವೆ. ಇದೀಗ ಟೀಮ್​ ಇಂಡಿಯಾ ಕೂಡ ಇದೇ ನಡೆಯನ್ನ ಅನುಸರಿಸಬೇಕಿದೆ.

ಬೇಕು ಅಗ್ರೆಸ್ಸಿವ್​ ಕ್ಯಾಪ್ಟನ್​.. ಪಾಂಡ್ಯ ಬೆಸ್ಟ್​ ಚಾಯ್ಸ್​.!
ಸದ್ಯ ಟೆಸ್ಟ್​ ಕ್ರಿಕೆಟ್​ ಹಾರ್ದಿಕ್​ ಪಾಂಡ್ಯ ಕಮ್​ಬ್ಯಾಕ್​ ಬಗ್ಗೆ ಚರ್ಚೆ ನಡೀತಾ ಇದೆ. ವೈಟ್​ಬಾಲ್​ ಕ್ರಿಕೆಟ್​​ಗೆ ಮರಳಿರೋ ಹಾರ್ದಿಕ್​, ರೆಡ್​ಬಾಲ್​ ಹಿಡಿದು ಕಮಾಲ್​ ಮಾಡೋಕೂ ಸಜ್ಜಾಗಿದ್ದಾರೆ. ಒಂದು ವೇಳೆ ಪಾಂಡ್ಯ ಟೆಸ್ಟ್​ ಕ್ರಿಕೆಟ್​​ಗೆ ಕಮ್​ಬ್ಯಾಕ್​ ಮಾಡಿದ್ರೆ ಟೀಮ್​ ಇಂಡಿಯಾಗೆ ಡಬಲ್​ ಧಮಾಕ. ಬೆಸ್ಟ್​ ಆಲ್​​ರೌಂಡರ್​ ಸಿಗೋದ್ರ ಜೊತೆಗೆ ತಂಡವನ್ನ ಸಮರ್ಥವಾಗಿ ಮುನ್ನಡೆಸಬಲ್ಲ ಬೆಸ್ಟ್​​ ಕ್ಯಾಪ್ಟನ್​ ಕೂಡ ತಂಡಕ್ಕೆ ಸಿಗ್ತಾರೆ. ಭವಿಷ್ಯದ ನಾಯಕನ ಜೊತೆಗೆ ಸ್ಟೋಕ್ಸ್​​ರಂತೇ ಇಡೀ ತಂಡಕ್ಕೆ ಅಗ್ರೆಸ್ಸೀವ್​ ಟಚ್​ ನೀಡೋ ಸಾಮರ್ಥ್ಯ ಹಾರ್ದಿಕ್​ಗಿದೆ.

ಪ್ರತ್ಯೇಕ ಕೋಚ್​​ ಆಯ್ಕೆ ಮಾಡಿದ್ರೂ ತಪ್ಪಿಲ್ಲ..!
ಏಕದಿನ ವಿಶ್ವಕಪ್​ ಅಂತ್ಯದೊಂದಿಗೆ ದ್ರಾವಿಡ್​​ ಒಪ್ಪಂದ ಕೂಡ ಟೀಮ್​ ಇಂಡಿಯಾದೊಂದಿಗೆ ಅಂತ್ಯವಾಗಲಿದೆ. ಹುದ್ದೆಯಲ್ಲಿ ಮತ್ತೆ ದ್ರಾವಿಡ್​ ಮುಂದುವರೆಯೋದು ಅನುಮಾನ. ಇಂಗ್ಲೆಂಡ್​ನಂತೇ ಟೀಮ್​ ಇಂಡಿಯಾದಲ್ಲೂ ಪ್ರತ್ಯೇಕ ಕೋಚ್​ ಆಯ್ಕೆಗೆ ಇದೇ ಬೆಸ್ಟ್​ ಟೈಂ ಆಗಲಿದೆ. ಅಗ್ರೆಸ್ಸೀವ್​ ನಾಯಕನಾಗಿ ಪಾಂಡ್ಯರನ್ನ ಆಯ್ಕೆ ಮಾಡಿದ್ರೆ, ಹಾರ್ದಿಕ್​ ಜೊತೆಗೆ ಸರಿಹೊಂದೊ ಆಶಿಶ್ ನೆಹ್ರಾರಂತಹ ಅನುಭವಿಗಳಿಗೆ ಮಣೆ ಹಾಕೋದು ಉತ್ತಮ ಆಯ್ಕೆಯಾಗಲಿದೆ.

ತಂಡದಲ್ಲೂ ಆಗಬೇಕು ಬದಲಾವಣೆ.!
ಕೋಚ್​- ಕ್ಯಾಪ್ಟನ್​ ಬದಲಾವಣೆಯ ಜೊತೆಗೆ ಆಟಗಾರರ ಆಯ್ಕೆ ವಿಚಾರದಲ್ಲೂ ಬಿಸಿಸಿಐ & ಸೆಲೆಕ್ಷನ್​ ಕಮಿಟಿ ಮಹತ್ವದ ಹೆಜ್ಜೆ ಇಡಬೇಕಿದೆ. ಸೀನಿಯರ್​ ಆಟಗಾರರ ಭವಿಷ್ಯ ನಿರ್ಧರವಾಗಬೇಕಿದೆ. ಪ್ರಮುಖ ಆಟಗಾರರನ್ನ ರಿಪ್ಲೇಸ್​ ಮಾಡೋಕೆ ಯಂಗ್​ಸ್ಟರ್​ಗಳು ಕಾದು ಕುಳಿತಿದ್ದಾರೆ. ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಕಮಾಲ್​ ಮಾಡಿದ ಆಟಗಾರರಿಗೆ ಟೀಮ್​ ಇಂಡಿಯಾ ಡೋರ್​​ ಓಪನ್​ ಆದ್ರೆ, ಬೆಸ್ಟ್​​.

ಇಂಡೀಸ್​ ಪ್ರವಾಸದ ಬಳಿಕ ಟೀಮ್​ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಆರಂಭವಾಗೋದಂತೂ ನಿಶ್ಚಿತ. ಡಿಸೆಂಬರ್​ನಲ್ಲಿ ನಡೆಯೋ ಸೌತ್​​ಅಫ್ರಿಕಾ ಪ್ರವಾಸದ ವೇಳೆಗೆ ತಂಡದ ಚುಕ್ಕಾಣಿ ಯಾರ ಕೈಯಲ್ಲಿರುತ್ತೆ?. ಯಾರೆಲ್ಲಾ ಟೆಸ್ಟ್​ ತಂಡದಲ್ಲಿ ಇರುತ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹಾರ್ದಿಕ್​ ಪಾಂಡ್ಯ ಬೆಸ್ಟ್​ ಚಾಯ್ಸ್; ಟೆಸ್ಟ್​ಗೆ ಕ್ಯಾಪ್ಟನ್​ ಆದ್ರೆ ಡಬಲ್​ ಧಮಾಕ ಗ್ಯಾರಂಟಿ..!

https://newsfirstlive.com/wp-content/uploads/2023/06/HARDIK_PANDYA_CAPTAIN_3.jpg

Load More