ಧೋನಿ ಮುಂದೆ ನಡೆಯದ ‘ಪ್ರಿನ್ಸ್’ ಆಟ
ಜಡ್ಡು ಸ್ಟ್ರೋಕ್ಗೆ ಕಿಲ್ಲರ್ ಆಗಲಿಲ್ಲ ಮಿಲ್ಲರ್
ತವರಿನ ಅಂಗಳದಲ್ಲಿ ವಿಜಯ ನೀಡಲಿಲ್ಲ ಶಂಕರ್
ಚೆನ್ನೈ ಎದುರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಗುಜರಾತ್, ನಾಲ್ಕನೇ ಬಾರಿಯೂ ಗೆಲ್ಲೋ ಉತ್ಸಾಹದಲ್ಲಿತ್ತು. ಆದ್ರೆ, ಗುಜರಾತ್ ಕನಸಿಗೆ ಮಾಸ್ಟರ್ ಸ್ಟ್ರೋಕ್ ನೀಡಿದ್ದು ಮಹೇಂದ್ರ ಸಿಂಗ್ ಧೋನಿ. ಅದರಲ್ಲೂ ಧೋನಿಯ ಟ್ರ್ಯಾಪ್ಗೆ ಸಿಲುಕಿದ ಚೇಸಿಂಗ್ ಮಾಸ್ಟರ್ ಗುಜರಾತ್, ಸೋಲಿನ ಮುಖಭಂಗ ಅನುಭವಿಸಿತ್ತು.
173 ರನ್ಗಳ ಟಾರ್ಗೆಟ್ ಚೇಸಿಂಗ್ ಮಾಸ್ಟರ್ ಗುಜರಾತ್ ಮುಂದಿತ್ತು. ನಾಲ್ಕನೇ ಬಾರಿ ಚೆನ್ನೈಗೆ ಚಮಕ್ ನೀಡೋ ಕನಸಿನಲ್ಲೇ ಪಾಂಡ್ಯ ಪಡೆ ಕಣಕ್ಕಿಳಿದಿತ್ತು. ಆದ್ರೆ, ಟ್ರಿಕ್ಕಿ ಪಿಚ್ನಲ್ಲಿ ಮಾಸ್ಟರ್ ಧೋನಿಯ ಟ್ರ್ಯಾಪ್ಗೆ ಸಿಲುಕಿ ವಿಲವಿಲ ಒದ್ದಾಡಿತು. ಧೋನಿ ಚಾಣಾಕ್ಷತನದ ನಾಯಕತ್ವಕ್ಕೆ ಗುಜರಾತ್ ಟೈಟನ್ಸ್ನ ಘಟಾನುಘಟಿ ಬ್ಯಾಟ್ಸ್ಮನ್ಗಳೇ ಪಲ್ಟಿ ಹೊಡೆದು ಸೋಲೋಪ್ಪಿಕೊಳ್ತು.
ಧೋನಿ ಮುಂದೆ ನಡೆಯದ ‘ಪ್ರಿನ್ಸ್’ ಆಟ..!
ಬ್ಯಾಕ್ ಟು ಬ್ಯಾಕ್ ಸೆಂಚೂರಿ ಸಿಡಿಸಿದ್ದ ಶುಭಮನ್ ಗಿಲ್, ಚೆನ್ನೈ ಚಮಕ್ ನೀಡೋ ಎಕ್ಸ್ಪೆಕ್ಟೇಷನ್ ಹುಟ್ಟಿಹಾಕಿದ್ದರು. ಆದ್ರೆ, ನಿಧಾನಗತಿಯ ಆಟವಾಡಿದ ಯುವರಾಜನ ಆಟ 42 ರನ್ಗೆ ಅಂತ್ಯವಾಯ್ತು.
ಗುರುವಿನ ಚಕ್ರವ್ಯೂಹಕ್ಕೆ ಶಿಷ್ಯ ಲಾಕ್..!
ಮಹತ್ವದ ಪಂದ್ಯದಲ್ಲಿ ಬೌಂಡರಿಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಹಾರ್ದಿಕ್ ಪಾಂಡ್ಯ, ಚೆನ್ನೈಗೆ ಪಂಚ್ ನೀಡೋ ಲೆಕ್ಕಚಾರದಲ್ಲಿದ್ದರು. ಆದ್ರೆ, ಗುರುವಿನ ರಣವ್ಯೂಹದ ಮುಂದೆ 8 ರನ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.
ಚೆನ್ನೈಗೆ ಶಕುನ ಆಗಲಿಲ್ಲ ಶನಕ..!
ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಕಟ್ಟೋದರಲ್ಲಿ ಲಂಕಾ ಕ್ಯಾಪ್ಟನ್ ಶನಕ ನಿಸ್ಸೀಮಾ.. ಆದ್ರೆ, ಧೋನಿ ಬಲಗೈ ಬಂಟ ಜಡ್ಡು ಜಾದೂ ಮುಂದೆ ಮಂಡಿಯೂರಿದ ಶನಕ, 17 ರನ್ಗೆ ಆಟ ಮುಗಿಸಿದರು.
ಜಡ್ಡು ಸ್ಟ್ರೋಕ್ಗೆ ಕಿಲ್ಲರ್ ಆಗಲಿಲ್ಲ ಮಿಲ್ಲರ್..!
ಸಂಕಷ್ಟಗಳಲ್ಲಿ ಗುಜರಾತ್ಗೆ ಆಧಾರವಾಗೋದೆ ಕಿಲ್ಲರ್ ಖ್ಯಾತಿಯ ಮಿಲ್ಲರ್. ಆದ್ರೆ, ಟ್ರಿಕ್ಕಿ ಪಿಚ್ನಲ್ಲಿ ತಡಬಡಾಯಿಸಿದ ಮಿಲ್ಲರ್, ಜಡ್ಡು ಎಸೆತಕ್ಕೆ ಸ್ಟನ್ ಆಗಿ ಪೆವಿಲಿಯನ್ಗೆ ಹೆಜ್ಜೆಹಾಕಿದ್ರು.
ತವರಿನ ಅಂಗಳದಲ್ಲಿ ವಿಜಯ ನೀಡಲಿಲ್ಲ ಶಂಕರ್..!
ಬೆಂಗಳೂರಿನ ಎದುರು ಮ್ಯಾಚ್ ವಿನ್ನಿಂಗ್ ಪರ್ಪಾಮೆನ್ಸ್ ನೀಡಿದ್ದ ವಿಜಯ್ ಶಂಕರ್, ತವರಿನ ಅಂಗಳದಲ್ಲಿ ಗುಜರಾತ್ಗೆ ಗೆಲುವಿನ ಉಡುಗೊರೆ ನೀಡೋ ಲೆಕ್ಕಚಾರದಲ್ಲಿದ್ದರು. ಆದ್ರೆ, ವಿಜಯ್ ಶಂಕರ್ ಆಟ 14ಕ್ಕೆ ಅಂತ್ಯವಾಯ್ತು.
ವ್ಯರ್ಥವಾಯ್ತು ರಶೀದ್ ಸ್ನೇಕ್ ಶಾಟ್ಸ್
ಕೊನೆಯಲ್ಲಿ ಸ್ಪೋಟಕ ಆಟವಾಡಿದ ರಶೀದ್, 16 ಎಸೆತಗಳಲ್ಲಿ 2 ಸಿಕ್ಸರ್, 3 ಬೌಂಡರಿ ಒಳಗೊಂಡ 30 ರನ್ ಸಿಡಿಸಿ ಗೆಲುವಿನ ಆಸೆ ಚಿಗುರಿಸಿದ್ದರು. ಆದ್ರೆ, ಫೀಲ್ಡಿಂಗ್ನಲ್ಲಿ ಬದಲಾವಣೆ ತಂದ ಧೋನಿ, ರಶೀದ್ ಓಟಕ್ಕೆ ಬ್ರೇಕ್ ಹಾಕಿದರು. ಆ ಮೂಲಕ ಗುಜರಾತ್ ಕನಸು ಭಗ್ನಗೊಳಿಸಿದರು.
ಬಲಿಷ್ಠ ಗುಜರಾತ್ಗೆ ಸ್ಪರ್ಧಾತ್ಮಕ ಮೊತ್ತವನಷ್ಟೇ ನೀಡಿದ್ದರೂ, ಕ್ಯಾಪ್ಟನ್ ಕೂಲ್ ಮಾಸ್ಟರ್ ಮೂವ್ಗಳ ಮುಂದೆ ಟೈಟನ್ಸ್ ಮಂಕಾಗಿದ್ದು ಸುಳ್ಳಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ