newsfirstkannada.com

ಹ್ಯಾರಿಸ್ ರೌಫ್​ಗೆ ಭಾರೀ ಅವಮಾನ.. ನೀನು ‘ಇಂಡಿಯನ್​’​ ಅಂತ ಹಲ್ಲೆಗೆ ಮುಂದಾದ ಪಾಕ್​ ಪೇಸರ್; ಆಗಿದ್ದೇನು?

Share :

Published June 18, 2024 at 4:35pm

  ರೌಫ್ ಹಲ್ಲೆ ಮಾಡಲು ಮುಂದಾದಾಗ ಬಿಡಿಸಲು ಬಂದ ಪತ್ನಿ

  ವಿಶ್ವಕಪ್​​ನಿಂದ ಹೊರ ಬಿದ್ರು ತವರಿಗೆ ಮರಳದ ಪ್ಲೇಯರ್ಸ್​

  ಭಾರತದ ವಿರುದ್ಧ ಸೋತ ಮೇಲೆ ಪಾಕ್ ಪ್ಲೇಯರ್ಸ್​ಗೆ ಕಿರಿಕಿರಿ

T20 ವರ್ಲ್ಡ್​​ಕಪ್​​ನಿಂದ ಪಾಕಿಸ್ತಾನ ತಂಡ ಹೊರ ಬೀಳುತ್ತಿದ್ದಂತೆ ಆಟಗಾರರಿಗೆ ಎಲ್ಲಿ ಹೋದರು ಅಭಿಮಾನಿಗಳ ಕಾಟ ತಡೆಯಲಾಗುತ್ತಿಲ್ಲ. ಅದರಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಸೋತ ಮೇಲಂತೂ ಪ್ಲೇಯರ್ಸ್​ಗೆ ಫ್ಯಾನ್ಸ್​ ಮಾತಿನ ಮೂಲಕವೇ ಚುಚ್ಚುತ್ತಿದ್ದಾರೆ. ಸದ್ಯ ಇದೀಗ ಇಂತಹದ್ದೆ ಒಂದು ಸಂಗತಿಗೆ ಪಾಕ್​​ ಪೇಸ್ ಬೌಲರ್ ಹ್ಯಾರಿಸ್ ರೌಫ್,​ ವ್ಯಕ್ತಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್​ನಿಂದ ಕೊಲೆಯಾದ ಯುವಕನ ಪತ್ನಿಗೆ ಸರ್ಕಾರಿ ಕೆಲಸ? ರೇಣುಕಾಸ್ವಾಮಿ ತಾಯಿ ಏನಂದ್ರು?

ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಸದ್ಯ ಫ್ಲೋರಿಡಾದಲ್ಲೇ ಇದ್ದು ತನ್ನ ಪತ್ನಿ ಜೊತೆ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಇದೇ ವೇಳೆ ಹೋಟೆಲ್​​ವೊಂದಕ್ಕೆ ಹೋಗುವಾಗ ಪಾಕಿಸ್ತಾನ ಮೂಲದ ವ್ಯಕ್ತಿ ಒಬ್ಬರು ಹ್ಯಾರಿಸ್ ರೌಫ್​ಗೆ ಏನೋ ಬೈದಿದ್ದಾನೆ. ಇದರಿಂದ ಕೋಪಗೊಂಡ ರೌಫ್​, ಆ ವ್ಯಕ್ತಿ ಮೇಲೆ ಹಲ್ಲೆ ಮಾಡಲು ಹೋಗುತ್ತಿರುತ್ತಾರೆ. ಈ ವೇಳೆ ಪತ್ನಿ, ಮ್ಯಾನೇಜರ್ ಹಾಗೂ ಕೆಲ ಜನರು ತಡೆದು ನಿಲ್ಲಿಸಿದ್ದಾರೆ. ಇವನ್ಯಾರೋ ಇಂಡಿಯನ್ ಇರಬೇಕು ಎಂದು ರೌಫ್ ಹೇಳಿದ್ದಕ್ಕೆ ಎದುರುತ್ತರ ಕೊಟ್ಟ ಆ ವ್ಯಕ್ತಿ ನಾನೂ ಪಾಕಿಸ್ತಾನದವನು ಎಂದು ಖಡಕ್​ ಆಗಿ ಹೇಳಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ರೋಹಿತ್-ರಶೀದ್​​​ಗೆ ವರ್ಲ್ಡ್​​ಕಪ್​ನಲ್ಲಿ ಆಗಿ ಬರೋದಿಲ್ಲ.. ಯಾಮಾರಿದ್ರೆ ‘ದೋಸ್ತ್’​ಗಳೇ ವಿಲನ್ ಆಗ್ತಾರಾ?

ರೌಫ್​ ಹಲ್ಲೆ ಮಾಡಲು ಹೋಗುತ್ತಿದ್ದರು ಆ ವ್ಯಕ್ತಿ ಸ್ವಲ್ಪನೂ ಭಯ ಬೀಳದೆ ಹೊಡ್ತೀಯಾ, ಹೊಡ್ತೀಯಾ ಎಂದು ಎದುರುತ್ತರ ಕೊಡುತ್ತಲಿದ್ದ. ನಾನು ಭಾರತದವನಲ್ಲ, ಪಾಕಿಸ್ತಾನದವನು ಏನು ಮಾಡ್ತೀಯಾ ಮಾಡ್ಕೋ ಹೋಗು ಎಂದು ರೌಫ್​ಗೆ ಆವಾಜ್ ಹಾಕಿ ಹೋಗಿದ್ದಾನೆ. ಸದ್ಯ ಈ ಸಂಬಂಧದ ದೃಶ್ಯಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕಮೆಂಟ್ಸ್ ಮಾಡುತ್ತಿದ್ದಾರೆ.

T20 ವರ್ಲ್ಡಕಪ್​​ನಲ್ಲಿ ಸೋತಿರುವ ಪಾಕಿಸ್ತಾನದ ಕೆಲ ಆಟಗಾರರು ಫ್ಲೋರಿಡಾದಲ್ಲಿ ಉಳಿದುಕೊಂಡು ಹಾಲಿಡೇಯನ್ನು ಎಂಜಾಯ್ ಮಾಡುತ್ತಿದ್ದಾರೆ. ಪಾಕ್ ಕ್ಯಾಪ್ಟನ್ ಬಾಬರ್ ಅಜಾಮ್ ಕೂಡ ತವರಿಗೆ ಇನ್ನು ಮರಳಿಲ್ಲ. ಆದರೆ ಇವರು ಎಲ್ಲಿ ಹೋಗ್ತಾರೋ ಅಲ್ಲಿ ಒಬ್ಬರಲ್ಲ, ಒಬ್ಬರು ಕೆಣುಕುತ್ತಿರುವುದದಂತು ನಿಗಕ್ಕೂ ಆಟಗಾರರಿಗೆ ಬೇಸರದ ಸಂಗತಿ ಎಂದು ಹೇಳಬಹುದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹ್ಯಾರಿಸ್ ರೌಫ್​ಗೆ ಭಾರೀ ಅವಮಾನ.. ನೀನು ‘ಇಂಡಿಯನ್​’​ ಅಂತ ಹಲ್ಲೆಗೆ ಮುಂದಾದ ಪಾಕ್​ ಪೇಸರ್; ಆಗಿದ್ದೇನು?

https://newsfirstlive.com/wp-content/uploads/2024/06/haris_rauf.jpg

Load More