ಗ್ಯಾರಂಟಿ ಅಸ್ತ್ರ ಪ್ರಯೋಗಿಸಿದ ಹರಿಯಾಣ ಮಾಜಿ ಸಿಎಂ
ಪಂಚರಾಜ್ಯಗಳ ಚುನಾವಣೆಯಲ್ಲಿ ಗ್ಯಾರಂಟಿಗಳ ಸದ್ದು!
ಮಧ್ಯಪ್ರದೇಶ ಬೆನ್ನಲ್ಲೇ ಹರಿಯಾಣದಿಂದ ಬಂತು ಆಫರ್
ಚಂಡೀಗಢ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕೊಟ್ಟು ಅಧಿಕಾರವನ್ನು ಹಿಡಿದದ್ದೇ ಎಲ್ಲೆಲ್ಲೂ ಗ್ಯಾರಂಟಿಗಳದ್ದೇ ದರ್ಬಾರ್. ಇದೇ ಗ್ಯಾರಂಟಿಗಳು ಬೇರೆ ರಾಜ್ಯಗಳಲ್ಲೂ ಶಂಖನಾದ ಮೊಳಗಿಸ್ತಿವೆ. ಸದ್ಯ ಮಧ್ಯಪ್ರದೇಶ ಸರ್ಕಾರ ಗ್ಯಾರಂಟಿಗಳನ್ನು ಘೋಷಿಸುತ್ತಿದ್ದಂತೆ ಹರ್ಯಾಣ ಕಾಂಗ್ರೆಸ್ ಭರಪೂರ ಗ್ಯಾರಂಟಿಗಳನ್ನು ಘೋಷಿಸಿದೆ. ರಾಜ್ಯ ಕಾಂಗ್ರೆಸ್ಗಿಂತಲೂ ಒಂದು ಕೈ ಮುಂದೆ ಹೋಗಿದೆ.
500 ರೂಪಾಯಿಗೆ ಸಿಲಿಂಡರ್, 300 ಯೂನಿಟ್ ಉಚಿತ ವಿದ್ಯುತ್
ಮಧ್ಯಪ್ರದೇಶ ಬೆನ್ನಲ್ಲೇ ಹರಿಯಾಣದಿಂದ ಭರ್ಜರಿ ಆಫರ್
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಸ್ಕೀಮ್ ಅಸ್ತ್ರವನ್ನು ಪ್ರಯೋಗಿಸಿ ರಾಜದಂಡ ಹಿಡಿದ ಬೆನ್ನಲ್ಲೇ ಮಧ್ಯಪ್ರದೇಶ ಸರ್ಕಾರವೂ ಇದೇ ದಂಡವನ್ನೂ ಪ್ರಯೋಗಿಸಿ ಅಧಿಕಾರ ಉಳಿಸಿಕೊಳ್ಳಲು ಶತಾಯಗತಾಯವಾಗಿ ಪ್ರಯತ್ನಿಸ್ತಿದೆ. ಈಗ ಇದೇ ಯಶಸ್ಸಿನ ಮಂತ್ರವನ್ನು ಇಡೀ ದೇಶದ ಉದ್ದಕ್ಕೂ ಪ್ರಯೋಗಿಸಲು ಕಾಂಗ್ರೆಸ್ ಮುಂದಾಗಿದೆ. ಅದರಂತೆಯೇ ಮುಂಬರುವ ಚುನಾವಣೆಗಾಗಿ ಹರಿಯಾಣದ ಕಾಂಗ್ರೆಸ್ ಪಕ್ಷವೂ ಗ್ಯಾರಂಟಿ ಸ್ಕೀಮ್ ಘೋಷಣೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹರಿಯಾಣದ ಹಿಸ್ಸಾರ್ನಲ್ಲಿ ಗ್ಯಾರಂಟಿ ಅಸ್ತ್ರ ಪ್ರಯೋಗಿಸಿದ್ದಾರೆ. ವಿಪಕ್ಷ ನಿಮ್ಮ ಸಮಕ್ಷ್ ಅಂದ್ರೆ ವಿಪಕ್ಷ ನಿಮ್ಮ ಮುಂದೆ ಅನ್ನೋ ಱಲಿಯಲ್ಲಿ ಹೂಡಾ ಗ್ಯಾರಂಟಿಗಳನ್ನ ಘೋಷಿಸಿದ್ದಾರೆ. ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಏನೆಲ್ಲ ಮಾಡುತ್ತೇವೆ ಅನ್ನೋ ಗ್ಯಾರಂಟಿಗಳ ಲಿಸ್ಟ್ನ್ನೇ ಕೊಟ್ಟಿದ್ದಾರೆ.
ಬೆಳೆಗಳಿಗೆ ಎಮ್ಎಸ್ಪಿ ಗ್ಯಾರಂಟಿ ಕೊಡಲಾಗುವುದು. ಸರ್ಕಾರಿ ಉದ್ಯೋಗಿಗಳಿಗೆ ಓಲ್ಡ್ಪೆನ್ಶನ್ ಸ್ಕೀಮ್ ಜಾರಿಗೆ ತರಲಾಗುವುದು. ಹಿರಿಯ ನಾಗರಿಕರ ಪೆನ್ಷನ್ 6 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗುವುದು. ಗ್ಯಾಸ್ ಸಿಲಿಂಡರ್ ಅನ್ನು 500 ರೂಪಾಯಿಗೆ ನೀಡಲಾಗುವುದು. ಬಡವರಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ದಲಿತರು, ಓಬಿಸಿಗೆ 100 ಚದರ ಅಡಿ ಸೈಟ್ ವಿತರಿಸಲಾಗುವುದು. ಓಬಿಸಿ ಕ್ರೀಮಿ ಲೇಯರ್ ಆದಾಯದ ಮಿತಿ 6 ಲಕ್ಷದಿಂದ 10 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗುವುದು. ಯುವಕರಿಗೆ 2 ಲಕ್ಷ ಸರ್ಕಾರಿ ಉದ್ಯೋಗಗಳನ್ನು ನೀಡಲಾಗುವುದು. ಒಟ್ಟಾರೆ ರಾಜ್ಯದಲ್ಲಿ ಗ್ಯಾರಂಟಿಗಳಿಂದ ಸರ್ಕಾರ ಅಧಿಕಾರಕ್ಕೆ ಬಂದದ್ದೇ ಬಂದದ್ದು ಎಲ್ಲೆಡೆ ಗ್ಯಾರಂಟಿಗಳೇ ಸದ್ದು ಮಾಡ್ತಿವೆ. ಪಂಚರಾಜ್ಯಗಳ ಚುನಾವಣೆ ಹಿನ್ನೆಲೆ ಪಂಚಗ್ಯಾರಂಟಿಗಳು ಎಲ್ಲೆಲ್ಲೂ ಸುಳಿದಾಡ್ತಿವೆ. ಜನರು ಮಾತ್ರ ಗ್ಯಾರಂಟಿಗಳನ್ನು ನೋಡಿಕೊಂಡು ಮಾತ್ರವಲ್ಲದೇ ಅಭಿವೃದ್ಧಿ ಮಾಡುವ ಪಕ್ಷಗಳನ್ನು ಗೆಲ್ಲಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ