newsfirstkannada.com

ಕೊಡವ ಸಂಪ್ರದಾಯದಂತೆ ನೆರವೇರಿದ ಹರ್ಷಿಕಾ-ಭುವನ್ ಮದುವೆ; ಫೋಟೋಗಳು ಇಲ್ಲಿವೆ

Share :

24-08-2023

    ಕಳೆದ ದಿನ‌ ಊರುಕೊಡು ಶಾಸ್ತ್ರ ಮುಗಿದಿದೆ

    ತಾಳಿ ಕಟ್ಟುವ ಶಾಸ್ತ್ರವೂ ನಿನ್ನೆಯೇ ಮುಗಿದಿದೆ

    ಹರ್ಷಿಕಾ ಕೊರಳಿಗೆ ತಾಳಿ ಕಟ್ಟಿದ್ದ ತಾಯಿ

ಸ್ಯಾಂಡಲ್​ವುಡ್​ನ ಕ್ಯೂಟ್​ ಜೋಡಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಅವರ ಮದುವೆ ಶಾಸ್ತ್ರಗಳು ಅದ್ಧೂರಿಯಾಗಿ ಸಾಗುತ್ತಿವೆ. ಕೊಡಗಿನ ವಿರಾಜಪೇಟೆಯ ಅಮ್ಮತ್ತಿ ಕೊಡವ ಸಮಾಜದಲ್ಲಿ ವಿವಾಹ ಮಹೋತ್ಸವವು ಸಡಗರದಿಂದ ನೆರವೇರುತ್ತಿದ್ದು, ಕೊಡವ ಸಂಪ್ರದಾಯದಂತೆ ಈ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದೆ.

ಬಿಎಸ್​ ಯಡಿಯೂರಪ್ಪ ಅವರಿಂದ ನವಜೋಡಿಗೆ ಆಶೀರ್ವಾದ

ಕಳೆದ ದಿನ‌ ಊರುಕೊಡು ಶಾಸ್ತ್ರ ಮುಗಿದಿತ್ತು. ತಾಳಿ ಕಟ್ಟುವ ಶಾಸ್ತ್ರವೂ ನಿನ್ನೆಯೆ ಮುಗಿದಿದೆ. ಹರ್ಷಿಕಾ ಕೊರಳಿಗೆ ತಾಳಿ ಅವರ ತಾಯಿ ಕೊಟ್ಟಿದ್ದರು. ಕೊಡವ ಸಂಪ್ರದಾಯದಲ್ಲಿ ಗಂಡು-ಹೆಣ್ಣಿಗೆ ತಾಳಿ ಕಟ್ಟುವ ಶಾಸ್ತ್ರ ಇರುವುದಿಲ್ಲ. ವಧುವಿನ ತಾಯಿಯೇ ತಾಳಿ ಕಟ್ಟುತ್ತಾರೆ.

ಆಶೀರ್ವಾದ ಮಾಡಿದ ಯಡಿಯೂರಪ್ಪ

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ವಧು ಹರ್ಷಿಕಾ ಪೂಣಚ್ಚ ಮತ್ತು ವರ ಭುವನ್ ಪೊನ್ನಣ್ಣ ಮದುವೆ ಸಮಾರಂಭದಲ್ಲಿ ಸ್ಯಾಂಡಲ್​ವುಡ್​ನ ಖ್ಯಾತ ತಾರೆಯರು ಹಾಗೂ ರಾಜಕೀಯ ಗಣ್ಯರು ಭಾಗವಹಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮುರುಗೇಶ್ ನಿರಾಣಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಶುಭಾಶಯ ಕೋರಿದ್ದಾರೆ. ರಾತ್ರಿಯಿಂದಲೇ ಎರಡು ಕುಟುಂಬದವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು ಸ್ನೇಹಿತರು, ಬಂಧುಗಳು ಹಾಗೂ ಆತ್ಮೀಯರನ್ನು ವಿವಾಹಕ್ಕೆ ಸ್ವಾಗತಿಸುತ್ತಿದ್ದಾರೆ.

ಲವ್ ಬರ್ಡ್ಸ್​ ಮದುವೆ

ಮೊನ್ನೆ ಮೊನ್ನೆಯಷ್ಟೇ ಕೊಡಗಿನ ಇಗ್ಗುತ್ತಪ್ಪ ದೇವಾಲಯದಲ್ಲಿ ಹರ್ಷಿಕಾ ಮತ್ತು ಭುವನ್ ಲಗ್ನಪತ್ರಿಕೆ ಕಾರ್ಯ ನಡೆದಿತ್ತು. ಇದರಲ್ಲಿ ಎರಡು ಕುಟುಂಬದ ಸದಸ್ಯರು ಭಾಗಿಯಾಗಿದ್ದರು. ಕೊಡಗು ಭಾಷೆಯಲ್ಲೇ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿತ್ತು. ಕೊಡಗು ಸಂಪ್ರದಾಯದಂತೆ ಮದುವೆ ಆಗುತ್ತಿದ್ದು, ಮುಹೂರ್ತ ಕಾರ್ಯಗಳು ಬಹುತೇಕವಾಗಿ ಕೊಡಗಿನಲ್ಲಿ ನಡೆಯಲಿವೆ.

ಭುವನ್ ಮತ್ತು ಹರ್ಷಿಕಾ ಇಬ್ಬರೂ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಆಗಾಗ ಹಲವು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಇವತ್ತು ಬೆಳ್ಳಗ್ಗೆ ಶುಭ ಮೂಹರ್ತದಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಎರಡು ಕುಟುಂಬದ ಸದಸ್ಯರಲ್ಲಿ ಸಂತಸ ಮನೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಡವ ಸಂಪ್ರದಾಯದಂತೆ ನೆರವೇರಿದ ಹರ್ಷಿಕಾ-ಭುವನ್ ಮದುವೆ; ಫೋಟೋಗಳು ಇಲ್ಲಿವೆ

https://newsfirstlive.com/wp-content/uploads/2023/08/HARSHIKA-6.jpg

Load More