newsfirstkannada.com

ನಿಮಗೆ ಮದುವೆ ಆಗಿಲ್ಲವೇ? ಹಾಗಾದ್ರೆ ಸರ್ಕಾರದಿಂದ ಸಿಗಲಿದೆ ತಿಂಗಳ, ತಿಂಗಳ ದುಡ್ಡು!

Share :

03-07-2023

    ಹೆಣ್ಣು ಸಿಗಲಿಲ್ಲ ಅಂತಾ ಸಪ್ತಪದಿ ತುಳಿಯದ ಗಂಡಸರಿಗೆ ಮಾಸಿಕ ಭತ್ಯೆ?

    ಗಂಡು ಸಿಗಲಿಲ್ಲ ಅಂತಾ ಮದುವೆ ಆಗದ ಹೆಣ್ಣಿಗೂ ಸಿಗುತ್ತೆ ಪಿಂಚಣಿ ಭಾಗ್ಯ

    ಬ್ರಹ್ಮಾಚಾರಿಗಳ ಕಷ್ಟಕ್ಕೆ ನೆರವಾಗೋ ಯೋಜನೆಗೆ ಬಿಜೆಪಿ ಸರ್ಕಾರ ಪ್ಲಾನ್

ಚಂಡೀಗಢ: ಒಳ್ಳೆ ಗಂಡು ಸಿಗಲಿಲ್ಲ ಅಂತಾ ಮದುವೆ ಆಗದ ಎಷ್ಟೋ ಹೆಂಗಳೆಯರಿದ್ದಾರೆ. ಒಳ್ಳೆ ಹೆಣ್ಣು ಸಿಕ್ಕಿಲ್ಲ ಅಂತಾ ಸಪ್ತಪದಿ ತುಳಿಯದ ಎಷ್ಟೋ ಗಂಡಸರೂ ಇದ್ದಾರೆ. ಇತ್ತೀಚಿಗೆ ಗುಡ್‌ ಓಲ್ಡ್‌ ಬ್ರಹ್ಮಾಚಾರಿಗಳ ಸಂಖ್ಯೆ ದೇಶಾದ್ಯಂತ ಯದ್ವಾತದ್ವಾ ಹೆಚ್ಚಾಗ್ತಿದೆ. ಈ ಬ್ರಹ್ಮಾಚಾರಿಗಳ ಕಷ್ಟಕ್ಕೆ ನೆರವಾಗಲು ಹರಿಯಾಣದಲ್ಲಿರುವ ಬಿಜೆಪಿ ಸರ್ಕಾರ ಮುಂದಾಗಿದೆ. ಮದುವೆಯಾಗದ ಗಂಡು, ಹೆಣ್ಣಿಗೆ ಪಿಂಚಣಿ ಕೊಡುವ ಯೋಜನೆಯನ್ನು ಜಾರಿಗೆ ತರಲು ತಯಾರಿಯನ್ನು ನಡೆಸಿದೆ.

ಈ ಪಿಂಚಣಿ ಭಾಗ್ಯ ಆಶ್ಚರ್ಯವಾದ್ರೂ ನಿಜ. ಹರಿಯಾಣ ಸಿಎಂ ಮನೋಹರ್‌ ಲಾಲ್ ಖಟ್ಟರ್‌ ಅವರು ಅವಿವಾಹಿತರಿಗೂ ಪಿಂಚಣಿ ಸಿಗುವ ಯೋಜನೆಯನ್ನು ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತಿದ್ದು, ರಾಜ್ಯ ಸರ್ಕಾರ ಆದಷ್ಟು ಬೇಗ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದಾಗಿ ಸಿಎಂ ಸ್ಪಷ್ಟಪಡಿಸಿದ್ದಾರೆ. 2024ಕ್ಕೆ ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನವೇ ಹರಿಯಾಣದ ಅವಿವಾಹಿತರು ಪಿಂಚಣಿ ಯೋಜನೆಯ ಫಲಾನುಭವಿಗಳಾಗುವ ಸಾಧ್ಯತೆ ಇದೆ.

ಬ್ರಹ್ಮಾಚಾರಿಗಳ ಪಿಂಚಣಿಗೆ ಷರತ್ತುಗಳು ಅನ್ವಯ
ಹರಿಯಾಣ ಸರ್ಕಾರ ತನ್ನ ರಾಜ್ಯದಲ್ಲಿ ಮದುವೆ ಆಗದವರಿಗೆ ಪಿಂಚಣಿ ಭಾಗ್ಯ ಕರುಣಿಸಲು ಮುಂದಾಗಿದೆ. ಆದರೆ ಇದು ಎಲ್ಲರಿಗೂ ಸಿಗೋದಿಲ್ಲ. ಕೆಲವು ಷರತ್ತುಗಳು ಅನ್ವಯವಾಗುತ್ತೆ. ಅಂದ್ರೆ, ಹರಿಯಾಣದಲ್ಲಿರುವ 45 ವರ್ಷ ಮೇಲ್ಪಟ್ಟ ಗಂಡು, ಹೆಣ್ಣು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. 45 ವರ್ಷದಿಂದ 60 ವರ್ಷದವರೆಗೆ ಸರ್ಕಾರದಿಂದ ಪಿಂಚಣಿ ಭಾಗ್ಯ ದೊರೆಯುತ್ತದೆ. ಇದರ ಜೊತೆಗೆ ಮುಖ್ಯಮಂತ್ರಿ ಅಂತ್ಯೋದಯ ಪರಿವಾರ್ ಉತ್ತಮ ಯೋಜನೆಯಲ್ಲಿ ಸ್ವ ಉದ್ಯೋಗಕ್ಕಾಗಿ 50 ಸಾವಿರ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಹರಿಯಾಣದಲ್ಲಿ ಈಗಾಗಲೇ ಜನ್ ಸಂವಾದ ಅನ್ನೋ ಕಾರ್ಯಕ್ರಮ ಜಾರಿಯಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಮಗೆ ಮದುವೆ ಆಗಿಲ್ಲವೇ? ಹಾಗಾದ್ರೆ ಸರ್ಕಾರದಿಂದ ಸಿಗಲಿದೆ ತಿಂಗಳ, ತಿಂಗಳ ದುಡ್ಡು!

https://newsfirstlive.com/wp-content/uploads/2023/07/Un-married.jpg

Load More