newsfirstkannada.com

ಹಾಸನಾಂಬೆ ಭಕ್ತರಿಗೆ ಕರೆಂಟ್ ಶಾಕ್.. ಫ್ಯೂಸ್​​ ತೆಗೆದು ಸಾವಿರಾರು ಜನ್ರ ಜೀವ ಉಳಿಸಿದ್ವಿ ಎಂದ ಪ್ರತ್ಯಕ್ಷದರ್ಶಿ

Share :

10-11-2023

    ವಿಐಪಿಗಳಿಗೆ ಮಾತ್ರ ದೇವಾಲಯದಲ್ಲಿ ಸರಿಯಾದ ವ್ಯವಸ್ಥೆ

    ಸಾಮಾನ್ಯ ಜನರಿಗೆ ಏನಾದ್ರೂ ಜಿಲ್ಲಾಡಳಿತ ಡೋಂಟ್​ ಕೇರ್

    ಸಿನಿಮಾ ಸ್ಟಾರ್ಸ್​, ರಾಜಕೀಯ ವ್ಯಕ್ತಿಗಳಿಗೆ ಮೊದಲ ಆದ್ಯತೆ

ಹಾಸನ: ಶಕ್ತಿ ದೇವತೆ ಹಾಸನಾಂಬೆ ದೇವಾಲಯದಲ್ಲಿ ಕರೆಂಟ್ ಶಾಕ್​ನಿಂದ ಮಹಿಳೆಯರು, ಮಕ್ಕಳು ನಡುವೆ ನೂಕು ನುಗ್ಗಲಾಗಿ ಉಂಟಾಗಿ ಹಲವರಿಗೆ ಗಾಯಗಳಾಗಿವೆ. ಈ ಸಂಬಂಧ ಜಿಲ್ಲೆಯ ಹಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳನ್ನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶಾಸಕ ಸ್ವರೂಪ್ ಪ್ರಕಾಶ್, ಕೆ.ಎಂ ಶಿವಲಿಂಗೇಗೌಡ ವಿಚಾರಿಸಿದ್ದರು. ಈ ಎಲ್ಲ ಬೆಳವಣಿಗೆ ಮಧ್ಯೆ ಘಟನೆ ನಡೆದ ವೇಳೆ ಇದ್ದ ಪ್ರತ್ಯಕ್ಷದರ್ಶಿವೊಬ್ಬರು ಮಾತನಾಡಿದ್ದಾರೆ.

ನ್ಯೂಸ್​ಫಸ್ಟ್​ ಜೊತೆ ಘಟನೆ ನಡೆದ ಸ್ಥಳದಿಂದಲ್ಲಿದ್ದ ಪ್ರತ್ಯಕ್ಷದರ್ಶಿ ವ್ಯಾಪಾರಿ ಪರುಸೊಣ್ಣ ಅವರು ಮಾತನಾಡಿ, ಜಿಲ್ಲಾಧಿಕಾರಿಗಳು ಎಲ್ಲ ವ್ಯವಸ್ಥೆಯನ್ನು ಚೆನ್ನಾಗಿ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಒಂದು ವಾರದಿಂದ ನೋಡುತ್ತಿದ್ದೇನೆ. ನನ್ನದು ಅಂಗಡಿ ಇಲ್ಲೇ ಇರೋದು. ಇಲ್ಲಿ ಯಾವುದೇ ವ್ಯವಸ್ಥೆ ಸರಿಯಾಗಿಲ್ಲ. ಕೇವಲ ವಿಐಪಿಗಳಿಗೆ ಮಾತ್ರ ಕರೆಕ್ಟ್ ಆಗಿ ಎಲ್ಲ ವ್ಯವಸ್ಥೆ ಮಾಡುತ್ತಿದ್ದಾರೆ. ಸಿನಿಮಾ ಆ್ಯಕ್ಟರ್​ಗಳಿಗೆ, ರಾಜಕೀಯ ವ್ಯಕ್ತಿಗಳಿಗೆ ಹಾಗೂ ಖಾವಿ ಬಟ್ಟೆ ಹಾಕಿರುವವರಿಗೆ ನೇರ ಒಳಗೆ ಕಳುಹಿಸುತ್ತಿದ್ದಾರೆ. ಸಾಮಾನ್ಯ ಜನರಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಹೇಳಿದ್ದಾರೆ.

ವ್ಯಾಪಾರಿ ಪರುಸೊಣ್ಣ

12 ರಿಂದ 1 ಗಂಟೆ ಸುಮಾರಿಗೆ ಎಂದಿನಂತೆ ಗಲಾಟೆ ಸೌಂಡ್ ಬರುತ್ತಿತ್ತು. ಆದರೆ, ಇವತ್ತು ಬಂದಿದ್ದ ಸೌಂಡ್​ ಇನ್ನು ಜೋರಾಗಿ ಏನೋ ಆಯಿತು ಎನ್ನುವಂತೆ ಕೇಳಿದ್ದರಿಂದ ಅಂಗಂಡಿಯಿಂದ ಓಡಿ ಬಂದು ನೋಡುತ್ತೇನೆ. 6 ತಿಂಗಳ ಮಗುವಿನಿಂದ 80 ವರ್ಷದ ಅಜ್ಜಿಯವರೆಗೆ ಎಲ್ಲ ಮಹಿಳೆಯರು, ಮಕ್ಕಳು ಒಬ್ಬರ ಮೇಲೆ ಒಬ್ಬರು ಬಿದ್ದಿದ್ದಾರೆ. ಒಬ್ಬರ ಮೇಲೆ 10 ಜನ, 15 ಜನ ಬಿದ್ದಿದ್ದಾರೆ. ಒಬ್ಬೊಬ್ಬರನ್ನೇ ಎಳೆದು ಹಾಕಿದೆ. ಇದರ ಮಧ್ಯೆ ಬ್ಯಾರಿಕೇಡ್​ಗಳು ಕೂಡ ಬಿದ್ದಿವೆ. ನನ್ನ ಕೈಲಾದಷ್ಟು ಜನರನ್ನು ರಕ್ಷಣೆ ಮಾಡಿದೆ. ಎಲ್ಲರೀಗೂ ಬ್ಯಾರಿಕೇಡ್​, ಕಬ್ಬಿಣದ ವಸ್ತುಗಳನ್ನು ಮುಟ್ಟದಂತೆ ಕೂಗಿ.. ಕೂಗಿ ಹೇಳಿದೆ. ಬಳಿಕ ಆಂಬುಲೆನ್ಸ್​ಗೆ ಫೋನ್ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿದೆ ಎಂದಿದ್ದಾರೆ.

ಎಲ್ಲರೂ ಕರೆಂಟ್​ ಶಾಕ್, ಕೆರೆಂಟ್​ ಶಾಕ್​ ಎನ್ನುತ್ತಿದ್ದರಿಂದ ತಕ್ಷಣ ನಮ್ಮ ಹುಡುಗರನ್ನು ಕರೆದು ಕರೆಂಟ್ ಫ್ಯೂಸ್​ ತೆಗೆಯುವಂತೆ ಹೇಳಿದೆ. ಇದರಿಂದ ಅವನು ಹೋಗಿ ಫ್ಯೂಸ್ ತೆಗೆದಿದ್ದಕ್ಕೆ ಇವತ್ತು ಸಾವಿರಾರು ಜನರ ಉಳಿದಿದೆ. ತುಂಬಾ ಜನಕ್ಕೆ ಗಾಯಗಳು ಆಗಿದ್ದು ಗಾಬರಿಯಲ್ಲಿ ಏನು ಕಾಣಿಸಿಲ್ಲ ಅಷ್ಟೇ. ಇದಾದ ಮೇಲೂ ನಾಲ್ಕೈದು ಜನನ್ನ ನನ್ನಂಗಡಿಗೆ ಕರೆದುಕೊಂಡು ಹೋಗಿ ಡಾಕ್ಟರ್​​ ಅನ್ನು ಕರೆಸಿ ಚಿಕಿತ್ಸೆ ಕೊಡಿಸಿ ಬಳಿಕ ಅವರನ್ನುಆಸ್ಪತ್ರೆಗೆ ಕಳುಹಿಸಿಕೊಟ್ಟೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನಾಂಬೆ ಭಕ್ತರಿಗೆ ಕರೆಂಟ್ ಶಾಕ್.. ಫ್ಯೂಸ್​​ ತೆಗೆದು ಸಾವಿರಾರು ಜನ್ರ ಜೀವ ಉಳಿಸಿದ್ವಿ ಎಂದ ಪ್ರತ್ಯಕ್ಷದರ್ಶಿ

https://newsfirstlive.com/wp-content/uploads/2023/11/HASANAMBE_CURRENT_SHOCK_1.jpg

Load More