newsfirstkannada.com

ಆದಾಯದಲ್ಲೂ ಹಾಸನಾಂಬೆ ಶ್ರೀಮಂತೆ.. 8 ಕೋಟಿಗೂ ಅಧಿಕ ರೂ. ಸಂಗ್ರಹ

Share :

16-11-2023

    ಮುಂದಿನ ವರ್ಷದ ಹಾಸನಾಂಬೆ ದರ್ಶನೋತ್ಸವಕ್ಕೂ ದಿನಾಂಕ ನಿಗದಿ

    ಬೀಗಿ ಪೊಲೀಸ್​ ಬಂದೋಬಸ್ತ್​ನಲ್ಲಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯ

    ದಾಖಲೆ ಪ್ರಮಾಣದಲ್ಲಿ ದೇಶ-ವಿದೇಶಗಳಿಂದಲೂ ಭಕ್ತಾಧಿಗಳ ಆಗಮನ

ಹಾಸನ: ಆ ತಾಯಿಯ ದರ್ಶನ ವರುಷಕ್ಕೊಮ್ಮೆ ಮಾತ್ರ. ಒಮ್ಮೆ ಹಚ್ಚಿಟ್ಟ ಮಹಾದೀಪ ವರ್ಷಪೂರ್ತಿ ಉರಿಯುತ್ತದೆ. ಮುಡಿಸಿದ ಹೂಗಳು ಬಾಡಲ್ಲ. ಇಂತಹ ಪವಾಡಗಳನ್ನು ಸೃಷ್ಟಿಸಿ ಬೇಡಿದ ವರವನ್ನ ನೀಡುವ ಹಾಸನಾಂಬೆ ದೇವಿ ಉತ್ಸವ ನವೆಂಬರ್​ 2ರಿಂದ ಶುರುವಾಗಿ ಬರೊಬ್ಬರಿ 14 ದಿನಗಳವರೆಗೆ ನಡೆದಿದೆ. ಈ ಬಾರಿ ದಾಖಲೆ ಪ್ರಮಾಣದಲ್ಲಿ ದೇಶ-ವಿದೇಶಗಳಿಂದಲೂ ಭಕ್ತಾಧಿಗಳು ಹಾಸನಾಂಬೆ ದೇವಿ ದರ್ಶನವನ್ನು ಪಡೆದುಕೊಳ್ಳಲು ಆಗಮಿಸಿದ್ದರು.

ಮೊನ್ನೆಯಷ್ಟೇ ಹಾಸನಾಂಬೆ ದೇವಿ ಉತ್ಸವ ತೆರೆ ಕಂಡಿದ್ದು, ಇಂದು ಬೀಗಿ ಪೊಲೀಸ್​ ಬಂದೋಬಸ್ತ್​ನಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದು ಮುಕ್ತಾಯವಾಗಿದೆ. ಹೌದು ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಈ ಬಾರಿ ಗರಿಷ್ಠ ಆದಾಯದ ಮೂಲಕ ದಾಖಲೆ ನಿರ್ಮಾಣವಾಗಿದೆ.

ಒಟ್ಟು 8 ಕೋಟಿ 72 ಲಕ್ಷದ 41 ಸಾವಿರದ 531 ರೂಪಾಯಿ ದಾಖಲೆಯ ಹಣ ಸಂಗ್ರಹವಾಗಿದೆ. ಅದರಲ್ಲಿ ಕಾಣಿಕೆ ರೂಪದಲ್ಲಿ 62 ಗ್ರಾಂ ಚಿನ್ನ, 161 ಗ್ರಾಂ‌ ಬೆಳ್ಳಿ ಸಂಗ್ರಹವಾದರೆ, ವಿಶೇಷ ದರ್ಶನದ ಸಾವಿರ, ಮುನ್ನೂರು ರೂಪಾಯಿ ಟಿಕೆ‌ಟ್, ಲಾಡು ಮಾರಾಟದಿಂದಲೇ ಬರೊಬ್ಬರಿ 6 ಕೋಟಿ 17 ಲಕ್ಷದ 34 ರೂಪಾಯಿ ಸಂಗ್ರಹ, ಇನ್ನು ಹುಂಡಿಯಲ್ಲಿ 2 ಕೋಟಿ 50 ಲಕ್ಷದ 77 ಸಾವಿರದ 497 ರೂಪಾಯಿ ಸಂಗ್ರಹದ ಮೂಲಕ ಒಟ್ಟು 8,72,41,531 ಕೋಟಿ ರೂಪಾಯಿ ದಾಖಲೆ ಆದಾಯ ಗಳಿಕೆಯಾಗಿದೆ.

ಇನ್ನು, ದೇವಿಯ ದರ್ಶನವನ್ನು ಮಾಡಲು ಒಟ್ಟು 14 ಲಕ್ಷ ಭಕ್ತರು ಆಗಮಿಸಿದ್ದು. ಅದರಲ್ಲಿ ಒಟ್ಟು 8 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ. ಮುಂದಿನ ವರ್ಷದ ಹಾಸನಾಂಬೆ ದರ್ಶನೋತ್ಸವಕ್ಕೂ ದಿನಾಂಕವನ್ನು ನಿಗದಿ ಮಾಡಲಾಗಿದ್ದು, 2024ರ ಅಕ್ಟೋಬರ್ 24ರಿಂದ ನವೆಂಬರ್ 3ರವರೆಗೆ ಹಾಸನಾಂಬೆ ದರ್ಶನ ಇರಲಿದೆ. ಇದರೊಂದಿಗೆ ಒಟ್ಟು 9 ದಿನಗಳ ಕಾಲ ಹಾಸನಾಂಬೆ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಮಂಡಳಿ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆದಾಯದಲ್ಲೂ ಹಾಸನಾಂಬೆ ಶ್ರೀಮಂತೆ.. 8 ಕೋಟಿಗೂ ಅಧಿಕ ರೂ. ಸಂಗ್ರಹ

https://newsfirstlive.com/wp-content/uploads/2023/11/hasanba.jpg

Load More