newsfirstkannada.com

ಪಕ್ಷ ಬಿಟ್ಟು ಹೋಗಲ್ಲ ಎಂದು ದೇವತೆ ಮೇಲೆ ಪ್ರಮಾಣ? ಆಪರೇಷನ್​ಗೆ ಬ್ರೇಕ್​ ಹಾಕಲು JDS ನಾಯಕರು ಹೀಗೆ ಮಾಡಿದ್ರಾ?

Share :

10-11-2023

  ಒಂದು ಕಲ್ಲಲ್ಲಿ ಎರಡು ಹಕ್ಕಿಗಳನ್ನು ಹೊಡೆದರೇ ಹೆಚ್​.ಡಿ ಕುಮಾರಸ್ವಾಮಿ

  ಆಪರೇಷನ್​ಗೆ ಬ್ರೇಕ್​ ಹಾಕಿ ದಳಕ್ಕೆ ಶಕ್ತಿ ನೀಡ್ತಾಳಾ ದೇವತೆ ಹಾಸನಾಂಬೆ?

  ಡಿಸಿಎಂ ಡಿಕೆ ಶಿವಕುಮಾರ್​ ಬೇಟೆಗೆ ಚೆಕ್​ಮೇಟ್​ ಕೊಟ್ರಾ ಮಾಜಿ ಸಿಎಂ.?

ಆಪರೇಷನ್ ಹಸ್ತ ಅನ್ನೋ ಪದ ಕೇಳಿದ್ರೆ ಸಾಕು ದಳಪತಿಗಳಿಗೆ ಭೀತಿ ಶುರುವಾಗಿದೆ. ಜೆಡಿಎಸ್ ಶಾಸಕರ ಆಪರೇಷನ್​ಗೆ ಲಗಾಮು ಹಾಕಲು ಮಾಜಿ ಸಿಎಂ ಹೆಚ್​ಡಿಕೆ ಮಾಸ್ಟರ್​ ಪ್ಲಾನ್ ಮಾಡಿದ್ದಾರೆ. ಈ ಆಪರೇಷನ್ ಭೀತಿಯನ್ನು ಹೋಗಲಾಡಿಸಲು ದಳಪತಿಗಳು ಮೊರೆ ಹೋಗಿದ್ದು, ಹಾಸನಾಂಬೆಯನ್ನ. ಅಧಿದೇವತೆ ಮೂಲಕವೇ ಡಿಕೆ ಬೇಟೆಗೆ ಚೆಕ್​ಮೇಟ್ ಇಟ್ಟಿದ್ದಾರೆ.

ಕೇಸರಿ ಹಾಗೂ ಹಸಿರಿನ ಮಹಾ ಸಮ್ಮಿಲನ. ತೆನೆ ಹೊತ್ತ ಮಹಿಳೆ ಕಮಲ ಮುಡಿಯುತ್ತಿದ್ದಂತೆ ದಳಪತಿಗಳು ಹೈಅಲರ್ಟ್‌ ಆಗಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋದು ಆಪರೇಷನ್. ಹಸ್ತಪಾಳಯ 135 ಸ್ಥಾನಗಳನ್ನು ಗಳಿಸಿ ಬಹುಮತದೊಂದಿಗೆ ಸರ್ಕಾರ ರಚಿಸಿದ್ರೂ ಕೈ ನಾಯಕರು ಆಗಾಗ್ಗೆ ಆಪರೇಷನ್ ಎಂಬ ಬಾಣವನ್ನು ಎದುರಾಳಿಗಳ ಮೇಲೆ ಪ್ರಯೋಗಿಸ್ತಿದ್ದಾರೆ. ಹೀಗೆ ಹಸ್ತ ಪಡೆ ಆಪರೇಷನ್ ಟೂಲ್​ ಹಿಡ್ಕೊಂಡು ಶಸ್ತ್ರಚಿಕಿತ್ಸೆಗೆ ಮುಂದಾಗಿದೆ ಅನ್ನೋವಾಗಲೇ ಆಪರೇಷನ್ ಆಟಕ್ಕೆ ಬ್ರೇಕ್ ಹಾಕಲು ಜೆಡಿಎಸ್ ನಾಯಕರು ಮಹಾ ಪ್ಲಾನ್ ಮಾಡಿದ್ದಾರೆ.

ಕಾಂಗ್ರೆಸ್​ನ ಆಪರೇಷನ್ ಎಂಬ ಭೂತ ದಳಪತಿಗಳನ್ನು ಇನ್ನಿಲ್ಲದಂತೆ ಕಾಡ್ತಿದೆ. ಈ ಪೆಡಂಭೂತವನ್ನು ಹೊಡೆದೋಡಿಸಲು ಜೆಡಿಎಸ್​ ನಾಯಕರು ಶಕ್ತಿದೇವತೆ ಹಾಸನಾಂಬೆಯ ಮೊರೆ ಹೋಗಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಮಾಜಿ ಸಿಎಂ ಹೆಚ್​ಡಿಕೆ ಸೇರಿದಂತೆ ಜೆಡಿಎಸ್ ಶಾಸಕರೆಲ್ಲ ಹಾಸನ ಜಿಲ್ಲೆಗೆ ಭೇಟಿ ನೀಡಿದ್ದರು. ಇದಕ್ಕೆ ಕಾರಣಗಳು ಎರಡು. ಒಂದು ಶಕ್ತಿ ದೇವತೆ ಹಾಸನಾಂಬೆಯ ದರ್ಶನ ಪಡೆಯೋದು. ಮತ್ತೊಂದು ಆಪರೇಷನ್ ಹಸ್ತದಿಂದ ತಮ್ಮ ಶಾಸಕರನ್ನು ರಕ್ಷಿಸಿಕೊಂಡು ಡಿಕೆಶಿ ಬೇಟೆಗೆ ಚೆಕ್​ಮೇಟ್​ ಕೊಡೋದು. ಅದುವೇ ಪಕ್ಷ ಬಿಡಲ್ಲ ಅಂತ ಜೆಡಿಎಸ್​ ಶಾಸಕರಿಂದ ಹಾಸನಾಂಬೆ ಮೇಲೆ ಮಾಡಿದ ಆಣೆ ಪ್ರಮಾಣ.

ಹಾಸನಾಂಬೆಯ ಸನ್ನಿಧಿಯಲ್ಲಿ ಜೆಡಿಎಸ್ ಶಾಸಕರು ಜೆಡಿಎಸ್ ಬಿಡಲ್ಲವೆಂದು ದಳಪತಿಗಳೆದುರು ಆಣೆ ಮಾಡಿದ್ದಾರೆ ಎನ್ನಲಾಗಿದೆ. ಹಾಸನಾಂಬೆಯ ಮೇಲೆ ಆಣೆ ಮಾಡಿ ಪಕ್ಷಕ್ಕೆ ನಿಷ್ಠೆಯಿಂದ ಇರೋದಾಗಿ ಕುಮಾರಸ್ವಾಮಿಗೆ ಭರವಸೆ ಸಿಕ್ಕಿದೆ. ಈ ಆಣೆ ಪ್ರಮಾಣದಿಂದ ಕಾಂಗ್ರೆಸ್ ಆಪರೇಷನ್ ಆಟಕ್ಕೆ ದಳಪತಿಗಳು ಬ್ರೇಕ್ ಹಾಕುವ ಲೆಕ್ಕಾಚಾರದಲ್ಲಿದ್ದಾರೆ.

ಹಾಸನಾಂಬೆ ಸನ್ನಿಧಿಯಲ್ಲಿ ಅಭಯ!?

 • ಹಾಸನದಲ್ಲಿ ನಡೆದಿದ್ದ ಜೆಡಿಎಸ್ ಶಾಸಕರ ಜೊತೆಗಿನ ಸಭೆ
 • ಸಭೆಯಲ್ಲಿ ಕುಮಾರಸ್ವಾಮಿ ಸೇರಿ 18 ಶಾಸಕರು ಹಾಜರು
 • ಎಲ್ಲ ಶಾಸಕರ ಜೊತೆ ಒನ್ ಟು ಒನ್ ಚರ್ಚೆ ನಡೆಸಿದ ಹೆಚ್​ಡಿಕೆ
 • ಮೈತ್ರಿ ಏಕೆ ಅನಿವಾರ್ಯ ಅಂತ ಮನವರಿಕೆ ಮಾಡಿಕೊಟ್ಟಿದ್ದಾರೆ
 • ಜೊತೆಗೆ ಕಾಂಗ್ರೆಸ್​ನಲ್ಲಿರುವ ಆಂತರಿಕ ಕಚ್ಚಾಟದ ಬಗ್ಗೆ ಚರ್ಚೆ
 • ಲೋಕಸಭೆ ಬಳಿಕ ರಾಜ್ಯ ರಾಜಕೀಯದಲ್ಲಿ ಏನಾದ್ರೂ ಆಗಬಹುದು
 • ಆದ್ದರಿಂದ ದುಡುಕಿನ ನಿರ್ಧಾರ ತಗೋಬೇಡಿ ಅಂತ ಕಿವಿಮಾತು
 • ಕಾಂಗ್ರೆಸ್ ನಾಯಕರ ಆಮಿಷಕ್ಕೆ ಒಳಗಾಗಬೇಡಿ ಅಂತ ತಿಳುವಳಿಕೆ
 • ಹಾಸನಾಂಬೆಯ ಸನ್ನಿಧಿಯಿಂದಲೇ ಒಗ್ಗಟ್ಟು ಪ್ರದರ್ಶನ ಮಾಡೋಣ
 • ಹೆಚ್.ಡಿ. ಕುಮಾರಸ್ವಾಮಿ ಕಿವಿಮಾತಿಗೆ ಸೈ ಅಂದಿರುವ ಶಾಸಕರು
 • ನೀವು ತಗೊಳ್ಳೋ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಅಂದಿದ್ದಾರೆ

ಆಪರೇಷನ್ ಹಸ್ತದಿಂದ ಜೆಡಿಎಸ್​ ಶಾಸಕರನ್ನು ಉಳಿಸಿಕೊಳ್ಳಲು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಮಾಸ್ಟರ್‌ ಪ್ಲಾನ್‌ ಮಾಡಿದ್ದಾರೆ. ಜೆಡಿಎಸ್ ಬಿಡಲ್ಲವೆಂದು ಶಾಸಕರು ಹಾಸನಾಂಬೆಯ ಮೇಲೆ ಆಣೆ ಮಾಡಿ ದಳಪತಿಗಳಿಗೆ ಭರವಸೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಈ ಮೂಲಕ ಹೆಚ್​ಡಿಕೆ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೆದಿದ್ದಾರೆ. ವಲಸೆ ಶಾಸಕರಿಗೆ ಬ್ರೇಕ್‌ ಹಾಕುವ ಜೊತೆಗೆ ಡಿಕೆ ರಣತಂತ್ರಕ್ಕೆ ಪ್ರತಿ ತಂತ್ರ ಹೆಣೆಯುವ ಮೂಲಕ ಕಾಂಗ್ರೆಸ್‌ಗೆ ಕುಮಾರಸ್ವಾಮಿ ಚೆಕ್‌ಮೇಟ್‌ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಕ್ಷ ಬಿಟ್ಟು ಹೋಗಲ್ಲ ಎಂದು ದೇವತೆ ಮೇಲೆ ಪ್ರಮಾಣ? ಆಪರೇಷನ್​ಗೆ ಬ್ರೇಕ್​ ಹಾಕಲು JDS ನಾಯಕರು ಹೀಗೆ ಮಾಡಿದ್ರಾ?

https://newsfirstlive.com/wp-content/uploads/2023/07/HDD_HDK.jpg

Load More