newsfirstkannada.com

Video: ಮದಗಜಗಳ ಕಾಳಗದಲ್ಲಿ ಸೆರೆಯಾಗಿದ್ದ ಕಾಡಾನೆ ಭೀಮನ ದಾಳಿ.. ಅರಣ್ಯ ಸಿಬ್ಬಂದಿ ಸಾವು

Share :

31-08-2023

  ಮದಗಜಗಳ ಕಾಳಗದಿಂದ ಭೀಮನಿಗೆ ಗಾಯವಾಗಿತ್ತು

  ಕಾಡಾನೆಗಳ ದಂತ ತಾಗಿ ಭೀಮನಿಗೆ ಏಟು

  ಸೆರೆ ಹಿಡಿಯಲು ಹೋಗಿ ಅರಣ್ಯ ಸಿಬ್ಬಂದಿ ಸಾವು

ಹಾಸನ: ಗಾಯಗೊಂಡಿದ್ದ ಕಾಡಾನೆಯನ್ನು ಸೆರೆ ಹಿಡಿಯಲು ಹೋಗಿ ಅರಣ್ಯ ಸಿಬ್ಬಂದಿ ಸಾವನ್ನಪ್ಪಿದ ದಾರುಣ ಘಟನೆ ಹಾಸನದಲ್ಲಿ ನಡೆದಿದೆ. ಕಾಡಾನೆ ಭೀಮ ಅರಣ್ಯ ಸಿಬ್ಬಂದಿ ಮೇಲೆ ಏಕಾಏಕಿ ದಾಳಿ ಮಾಡಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅರಣ್ಯ ಸಿಬ್ಬಂದಿ ವೆಂಕಟೇಶ್‌ ಸಾವನ್ನಪ್ಪಿದ್ದಾರೆ.

ಮದಗಜಗಳ ಕಾಳಗದಿಂದ ಭೀಮನ ಬಾಲದ ಬಳಿ ಗಾಯವಾಗಿತ್ತು. ಕಾಡಾನೆಯ ದಂತ ತಾಗಿ ಭೀಮನಿಗೆ ಏಟು ಬಿದ್ದಿತ್ತು. ಈ ನೋವನ್ನು ತಾಳಲಾರದ ಭೀಮ ಆಲೂರು ತಾಲ್ಲೂಕಿನಲ್ಲಿ ಬೀಡು ಬಿಟ್ಟಿದ್ದನು. ಆದರೆ ಇಂದು ಅರಣ್ಯ ಸಿಬ್ಬಂದಿ ಆನೆಗೆ ಚಿಕಿತ್ಸೆ ನೀಡಲು ಮುಂದಾಗಿದ್ದರು. ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲು ಪ್ಲಾನ್​ ಹೆಣೆದಿದ್ದರು.

ವನ್ಯ ಜೀವಿ ವೈದ್ಯ ವಸೀಂ ಜೊತೆ ಅರಣ್ಯ ಸಿಬ್ಬಂದಿ ವೆಂಕಟೇಶ್ ಕೂಡ ತೆರಳಿದ್ದು, ಈ ವೇಳೆ ಭೀಮ ನೇರವಾಗಿ ವೆಂಕಟೇಶ್ ಮೇಲೆ ದಾಳಿ ಮಾಡಿದೆ. ದಾಳಿಯಿಂದಾಗಿ ಅರಣ್ಯ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ವೆಂಕಟೇಶ್ ಹಾಸನದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ವೆಂಕಟೇಶ್​​ ಸಾವನ್ನಪ್ಪಿದ್ದಾರೆ.

ಅರಣ್ಯ ಸಿಬ್ಬಂದಿ ವೆಂಕಟೇಶ್ ಈ ಹಿಂದೆ ಹತ್ತಾರು ಆನೆಗಳನ್ನು ಸೆರೆ ಹಿಡಿಯುವ ವೇಳೆ ಅರವಳಿಕೆ  ಮದ್ದು ನೀಡಿದ್ದರು. ಆದರಿಂದ ಭೀಮನ ಕೋಪಕ್ಕೆ ಬಲಿಯಾಗಿದ್ದಾರೆ. ಇನ್ನು ಭೀಮ ಕೂಡ ಶಾಂತ ಸ್ವಭಾವದವನಾಗಿದ್ದು, ಇದುವರೆಗೆ ಯಾರ ಮೇಲೂ ಅಟ್ಯಾಕ್ ಮಾಡಿರಲಿಲ್ಲ. ನೋವಿನಿಂದ ಬಳಲುತ್ತಿದ್ದ ಭೀಮ ಇಂದು ಭಯದಲ್ಲಿ ತನ್ನನ್ನು ಹಿಡಿಯಲು ಬಂದ ಅರಣ್ಯ ಸಿಬ್ಬಂದಿಯ ಮೇಲೆ ದಾಳಿ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಮದಗಜಗಳ ಕಾಳಗದಲ್ಲಿ ಸೆರೆಯಾಗಿದ್ದ ಕಾಡಾನೆ ಭೀಮನ ದಾಳಿ.. ಅರಣ್ಯ ಸಿಬ್ಬಂದಿ ಸಾವು

https://newsfirstlive.com/wp-content/uploads/2023/08/Elephant-Attack.jpg

Load More