newsfirstkannada.com

ಮತಬೇಟೆ ನಿಲ್ಲಿಸದ ಭವಾನಿ ರೇವಣ್ಣ.. ವೇದಿಕೆಯಲ್ಲಿ HDKಯನ್ನು ಹಾಡಿಹೊಗಳಿದ ನಾಯಕಿ

Share :

25-02-2023

    ಭವಾನಿ ರೇವಣ್ಣರ ಪ್ರಚಾರಕ್ಕೆ ಪತಿ ರೇವಣ್ಣ ಕೂಡ ಸಾಥ್

    ಟಿಕೆಟ್ ಬಿಕ್ಕಟ್ಟು ಶಮಕ್ಕೆ ಹಾಸನ ಮುಖಂಡರ ಸಭೆ

    ಕುಮಾರಸ್ವಾಮಿ ಕಚೇರಿಯಿಂದಲೇ ಸಭೆಗೆ ಆಹ್ವಾನ

ಹೈ-ವೋಲ್ಟೇಜ್ ಹಾಸನ ಕ್ಷೇತ್ರ ಮತ್ತೆ ಸದ್ದು ಮಾಡ್ತಿದೆ. ಟಿಕೆಟ್ ಗೊಂದಲಕ್ಕೆ ನಾಳೆಯೇ ತೆರೆ ಬೀಳುವ ಸಾಧ್ಯತೆ ಇದೆ. ಯಾಕಂದ್ರೆ ಕ್ಷೇತ್ರದ ಮುಖಂಡರ ಜೊತೆ ಹೆಚ್​​ಡಿಕೆ ಮಹತ್ವದ ಸಭೆ ನಡೆಸಲಿದ್ದಾರೆ. ಈ ವೇಳೆ ಯಾರಿಗೆ ಟಿಕೆಟ್ ನೀಡಬೇಕು ಅನ್ನೋದರ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಇದರ ಮಧ್ಯೆ ಹಾಸನ ಕ್ಷೇತ್ರದಲ್ಲಿ ರೇವಣ್ಣ ದಂಪತಿ ಮತಬೇಟೆಯಾಡ್ತಿದ್ದಾರೆ.

ಅದ್ಯಾಕೋ, 2023ರ ಮತಯುದ್ಧದಲ್ಲಿ ಹಾಸನ, ಹೈವೋಲ್ಟೇಜ್​ ರೂಪ ಪಡೀತಿದೆ. ಚುನಾವಣೆ ಘೋಷಣೆಗೂ ಮೊದಲೇ ದಳಪತಿಗಳ ಭದ್ರಕೋಟೆ ಸಾಕಷ್ಟು ಹಲ್ ಚಲ್ ಎಬ್ಬಿಸಿದೆ. ಟಿಕೆಟ್ ಘೋಷಣೆ ವಿಚಾರದಲ್ಲಿ ರೇವಣ್ಣ ಕುಟುಂಬ ಮತ್ತು ಹೆಚ್​ಡಿ ಕುಮಾರಸ್ವಾಮಿ ನಡುವೆ ಮಾಹಿತಿ ಯುದ್ಧವೇ ನಡೆದು ಹೋಗಿತ್ತು.

ಇಡೀ ತಿಂಗಳು ಹಾಸನ ಟಿಕೆಟ್ ದಂಗಲ್, ಮಾತಿನ ಸಮರಕ್ಕೆ ಸಾಕ್ಷಿಯಾಗಿತ್ತು. ಒಂದ್ಕಡೆ ದಳಪತಿಗಳಿಗೆ ಕೈ-ಕಮಲ ನಾಯಕರು ವ್ಯಂಗ್ಯದ ಛಾಟಿ ಬೀಸ್ತಿದ್ರೆ ಮತ್ತೊಂದ್ಕಡೆ ದೊಡ್ಡ ಗೌಡರ ಕುಟುಂಬದಲ್ಲೇ ಹೊಂದಾಣಿಯ ಬಿಕ್ಕಟ್ಟು ಸ್ಫೋಟಗೊಂಡಿತ್ತು. ವಿವಾದ ಭುಗಿಲೇಳುತ್ತಿದ್ದಂತೆ ವರಿಷ್ಠರೇ ಅಂತಿಮ ತೀರ್ಮಾನವೇ ಕೊನೆ ಎಂದು ಉರಿಯೋ ಬೆಂಕಿಯನ್ನ ರೇವಣ್ಣ ಆರಿಸಿದ್ರು. ಆದ್ರೆ ಇದಾದ ಮಧ್ಯಯೇ ಸೈಲೆಂಟ್​​ ಆಗಿಯೇ ರೇವಣ್ಣ ಮತ್ತು ಭವಾನಿ ಹಾಸನದಲ್ಲಿ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ.

ಪ್ರಚಾರದಲ್ಲಿ ಪತ್ನಿ ಭವಾನಿಗೆ ಸಾಥ್ ಕೊಟ್ಟ ರೇವಣ್ಣ
ಹಾಸನಾಂಬೆ ಕ್ಷೇತ್ರ ಈ ಬಾರಿ ಯಾರ ಪಾಲಾಗುತ್ತೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗ್ಬಿಟ್ಟಿದೆ. ಭವಾನಿ ರೇವಣ್ಣಗೆ ಟಿಕೆಟ್ ಸಿಗುತ್ತಾ ಅಥವಾ ಪ್ರಕಾಶ್​​​​ಗೆ ಟಿಕೆಟ್ ನೀಡ್ತಾರಾ ಅನ್ನೋದು ಕುತೂಹಲ ಕೆರಳಿಸಿದೆ. ಇಷ್ಟೆಲ್ಲದ ನಡುವೆ ಭವಾನಿ ಮಾತ್ರ ಟಿಕೆಟ್ ಘೋಷಣೆಗೂ ಮೊದಲೇ ಕ್ಷೇತ್ರ ಪ್ರದಕ್ಷಣೆ ಹಾಕ್ತಿದ್ದಾರೆ. ಮೊನ್ನೆ ಮೊನ್ನೆ ಹಾಸನದ ಮನೆ ಮನೆಗೂ ಹೋಗಿ ಮತ ಭಿಕ್ಷೆ ಕೇಳಿದ್ದ ಭವಾನಿ 2ನೇ ದಿನವೂ ಅಬ್ಬರದ ಪ್ರಚಾರ ಮುಂದುವರಿಸಿದ್ದಾರೆ. ಹಾಸನ ವಿಧಾನಸಭಾ ವ್ಯಾಪ್ತಿಯ ನಿಟ್ಟೂರು ಗ್ರಾಮಕ್ಕೆ ರೇವಣ್ಣ ದಂಪತಿ ಆಗಮಿಸಿದರು. ಟಿಕೆಟ್ ಗೊಂದಲದ ನಡುವೆಯೂ ಪ್ರಚಾರ ಮುಂದುವರೆಸಿರುವ ಎಚ್.ಡಿ.ರೇವಣ್ಣ ಮತ್ತು ಭವಾನಿಗೆ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದ್ರು.

ಇದನ್ನು ಓದಿ: ಮತ್ತೊಂದು ವಿವಾದ ಮೈಮೇಲೆ ಎಳ್ಕೊಂಡ CT ರವಿ; JDS ಕಾರ್ಯಕರ್ತರ ಕೆಣಕಿಬಿಟ್ರಾ ಬಿಜೆಪಿ ನಾಯಕ..!?

ಭಾಷಣದಲ್ಲಿ ಕುಮಾರಸ್ವಾಮಿಗೆ ಬಹುಫರಾಕ್

ನಿಟ್ಟೂರು ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡುವಂತೆ ಭವಾನಿ ಕೇಳಿಕೊಂಡಿದ್ದಾರೆ. ಇದೇ ವೇಳೆ ಮಾಜಿ ಸಿಎಂ H.D.ಕುಮಾರಸ್ವಾಮಿಯನ್ನೂ ಹಾಡಿ ಹೊಗಳಿಬಿಟ್ಟಿದ್ದಾರೆ.

ಪಂಚರತ್ನ ಯಾತ್ರೆ ಮೂಲಕ ಕುಮಾರಸ್ವಾಮಿ ಅವರು ಬಿಸಿಲು ಅನ್ನೋದು ಲೆಕ್ಕಿಸದೇ ಇಡೀ ರಾಜ್ಯವನ್ನ ಸುತ್ತುತ್ತಿದ್ದಾರೆ. ಅವರು ತುಂಬಾ ಒಳ್ಳೆಯ ಯೋಜನೆಗಳನ್ನ ತಂದಿದ್ದಾರೆ. ಹೆಣ್ಣುಮಕ್ಕಳಿಗಾಗಿ ಸ್ತ್ರೀಶಕ್ತಿಯ ಸಾಲ ಮನ್ನಾ ಮಾಡುವುದನ್ನ ಯೋಜನೆಯಲ್ಲಿ ಹಾಕಿಕೊಂಡು ಈಗಾಗಲೇ ತಿಳಿಸಿದ್ದಾರೆ.

2023ರ ಎಲೆಕ್ಷನ್​ ರಾಜ್ಯದಲ್ಲಿ ನಡೆಯುತ್ತದೆ. ಕುಮಾರಣ್ಣ ಅವ್ರೇ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ. ಹಾಗೇ ಹಾಸನದಲ್ಲಿ ರೇವಣ್ಣ ಅವರು ಮಂತ್ರಿ ಆಗೇ ಹಾಗ್ತಾರೆ. ರೇವಣ್ಣ ಸಾಹೇಬ್ರು ಒಳ್ಳೆಯ ಅಭಿವೃದ್ಧಿ ಕಾರ್ಯಕ್ರಮಗಳನ್ನ ಮಾಡುತ್ತಾರೆ.

ಭವಾನಿ ರೇವಣ್ಣ, ರೇವಣ್ಣ ಪತ್ನಿ

ನಾಳೆ ಹೈವೋಲ್ಟೇಜ್ ಸಭೆ

  • ರಾಜಧಾನಿಯಲ್ಲಿ ಸಂಡೇ ಹಾಸನ ಮುಖಂಡರ ಹೆಚ್​ಡಿಕೆ ಸಭೆ
  • ಹಾಸನ ಕ್ಷೇತ್ರದ ಟಿಕೆಟ್‌ ಹಂಚಿಕೆ ಕುರಿತು ಅಭಿಪ್ರಾಯ ಸಂಗ್ರಹ
  • ಜಿ.ಪಂ & ತಾ.ಪಂ ಮಾಜಿ ಸದಸ್ಯರು, ಕಾರ್ಯಕರ್ತರ ಜೊತೆ ಸಭೆ
  • ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖರ ಜೊತೆ ಹೆಚ್‌ಡಿಕೆ ಸಭೆ
  • ಎಲ್ಲರಿಗೂ ಹೆಚ್​ಡಿ ಕುಮಾರಸ್ವಾಮಿ ಕಚೇರಿಯಿಂದಲೇ ಬುಲಾವ್‌

ಇಂದು ಶೃಂಗೇರಿ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಭಾಗಿಯಾಗಲಿರೋ ಹೆಚ್​​ಡಿಕೆ ರಾತ್ರಿಯೇ ಬೆಂಗಳೂರಿಗೆ ಮರಳಲಿದ್ದಾರೆ. ನಾಳೆಯೇ ಮಹತ್ವದ ಸಭೆ ನಡೆಯಲಿದೆ. ಮಾತಿನ ಕದನ, ವಿಪಕ್ಷಗಳು ಸಿಡಿಸಿದ ಕುಟುಂಬ ರಾಜಕಾರಣದ ಆರೋಪಗಳಿಗೆ ಕುಮಾರಸ್ವಾಮಿ ಯಾವ ರೀತಿ ತಿರುಗೇಟು ನೀಡ್ತಾರೆ ಅನ್ನೋದು ಕುತೂಹಲ ಕೆರಳಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತಬೇಟೆ ನಿಲ್ಲಿಸದ ಭವಾನಿ ರೇವಣ್ಣ.. ವೇದಿಕೆಯಲ್ಲಿ HDKಯನ್ನು ಹಾಡಿಹೊಗಳಿದ ನಾಯಕಿ

https://newsfirstlive.com/wp-content/uploads/2023/02/BHAVANI_REVANNA.jpg

Load More