newsfirstkannada.com

ಗಂಡನಿಂದ ಪದೇ ಪದೆ ಕಿರಿಕಿರಿ; ಇಬ್ಬರು ಮುದ್ದಾದ ಮಕ್ಕಳನ್ನು ಸಾಯಿಸಿಯೇ ಬಿಟ್ಟ ಪಾಪಿ ಅಮ್ಮ

Share :

02-06-2023

    ಹಾವೇರಿಯಲ್ಲಿ ಹೃದಯ ವಿದ್ರಾವಕ ಘಟನೆ

    ಪತಿ, ಅತ್ತೆ-ಮಾವ ಸೇರಿ ಹಲವರ ವಿರುದ್ಧ ಕೇಸ್

    ಸ್ಥಳೀಯರು ಬಿಚ್ಚಿಟ್ಟರು ಭಯಾನಕ ಸತ್ಯ

ಹಾವೇರಿ: ಅಪ್ಪ-ಅಮ್ಮನ ಜಗಳದಲ್ಲಿ ಇಬ್ಬರು ಮುಗ್ಧ ಪುಟಾಣಿ ಮಕ್ಕಳು ಬಾರದ ಲೋಕಕ್ಕೆ ಪ್ರಯಾಣಿಸಿದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಸಣ್ಣಸಂಗಾಪುರ ಗ್ರಾಮದಲ್ಲಿ ನಡೆದಿದೆ. ಭುವನ್ 06, ಚೇತನ್ 03 ಕೊಲೆಯಾದ ಮಕ್ಕಳು. ಹಡೆದ ತಾಯಿ ಸುನಿತಾ ಮಕ್ಕಳನ್ನೇ ಕೊಂದಿರುವ ಆರೋಪವನ್ನು ಹೊತ್ತಿದ್ದಾರೆ.

ಗಂಡ-ಹೆಂಡ್ತಿ ಜಗಳ.. ಯಾಕೆ ಕಿತ್ತಾಟ..?
ಜಿಲ್ಲೆಯ ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸುನಿತಾ ದಂಪತಿಗೆ ಇಬ್ಬರು ಮುದ್ದಾದ ಭುವನ್ ಮತ್ತು ಚೇತನ್ ಎಂಬ ಇಬ್ಬರು ಮಕ್ಕಳಿದ್ದರು. ಸುನಿತಾ ಪತಿ, ಪತ್ನಿಯ ಶೀಲದ ಮೇಲೆ ಅನುಮಾನ ಪಟ್ಟಿದ್ದನಂತೆ. ಅದರಂತೆ, ಆಕೆಗೆ ಹುಟ್ಟಿರುವ ಇಬ್ಬರು ಮಕ್ಕಳು ತನ್ನದಲ್ಲ ಎಂದು ಆಗಾಗ ಜಗಳ ಮಾಡುತ್ತಿದ್ದನಂತೆ. ಇದರಿಂದ ಬೇಸರಗೊಂಡಿದ್ದ ಸುನಿತಾ ಮಕ್ಕಳನ್ನ ಕೊಲ್ಲಲು ನಿರ್ಧಸಿದ್ದಳು ಎನ್ನಲಾಗಿದೆ.

ತನ್ನ ಕ್ರೂರ ಪ್ಲಾನ್​ನಂತೆ ಮೇ 11 ರಂದು ಮುಗ್ಧ ಇಬ್ಬರು ಮಕ್ಕಳ ಕತ್ತು ಹಿಸುಕಿ ತಾಯಿ ಕೊಂದಿದ್ದಾಳೆ. ಮಕ್ಕಳನ್ನು ಕೊಂದ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಸುನಿತಾ ಜೋರಾಗಿ ಕಿರುಚಾಡಿಕೊಂಡಿದ್ದಾಳೆ. ಆಗ ಅಲ್ಲಿಗೆ ಮನೆಯವರು ಪತಿ, ಅತ್ತೆ ಮಾತವ ಓಡಿ ಬಂದು ನೋಡಿದ್ದಾರೆ.

ಇಬ್ಬರು ಮಕ್ಕಳು ಶವವಾಗಿ ಮಲಗಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಬಳಿಕ ಬಳಿಕ ಸಾಕ್ಷಿ ನಾಶ ಮಾಡಲು ರಾತ್ರೋರಾತ್ರಿ ಶವವನ್ನು ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ. ಅಕ್ಕಪಕ್ಕದವರಿಂದ ಮಾಹಿತಿ ತಿಳಿದು ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸದ್ಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಡನಿಂದ ಪದೇ ಪದೆ ಕಿರಿಕಿರಿ; ಇಬ್ಬರು ಮುದ್ದಾದ ಮಕ್ಕಳನ್ನು ಸಾಯಿಸಿಯೇ ಬಿಟ್ಟ ಪಾಪಿ ಅಮ್ಮ

https://newsfirstlive.com/wp-content/uploads/2023/06/HVR_GIRL.jpg

Load More