/newsfirstlive-kannada/media/post_attachments/wp-content/uploads/2024/10/haveri-Boy-Death-2.jpg)
ಹಾವೇರಿಯಲ್ಲಿ ಮಳೆ ನೀರಿನ ರಭಸಕ್ಕೆ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ 12 ವರ್ಷದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಬಾಲಕನನ್ನ ಚರಂಡಿಯಿಂದ ಎತ್ತಿ ಆಸ್ಪತ್ರೆಗೆ ಸಾಗಿಸಿದ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಪ್ರಯತ್ನ ವಿಫಲವಾಗಿದೆ.
/newsfirstlive-kannada/media/post_attachments/wp-content/uploads/2024/10/Haveri-Boy-Death.jpg)
ಫಲಿಸಲಿಲ್ಲ ಪ್ರಾರ್ಥನೆ.. ಬದುಕಿ ಬರಲೇ ಇಲ್ಲ ಬಾಲಕ
ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ ನಿವೇದನ್ ಸಾವು
ಮುದ್ದುಮುಖ.. ನೀಲಿ ಕಂಗಗಳು, ಆಕರ್ಷಕ ನೋಟ.. ಈ ಫೋಟೋದಲ್ಲಿ ಕಾಣುತ್ತಿರುವ ಈ ಬಾಲಕನ ಹೆಸರು ನಿವೇದನ್ ಗುಡಗೇರಿ ಅಂತ. ಹಾವೇರಿ ಪಟ್ಟಣದ ಶಿವಾಜಿನಗರದ ನಿವಾಸಿ. ಸಿಕ್ಕಾಪಟ್ಟೆ ಮಳೆಯಿಂದ ರಸ್ತೆ ಜಲಾವೃತವಾಗಿದ್ದು ದೊಡ್ಡ ಮೋರಿ ತುಂಬಿ ಹರಿಯುತ್ತಿತ್ತು. ಇದೇ ವೇಳೆ ಎಸ್​ಪಿ ಕಚೇರಿ ಎದುರು ಸ್ನೇಹಿತರ ಜೊತೆ ಆಟವಾಡ್ತಿದ್ದ ನಿವೇದನ್ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ.
/newsfirstlive-kannada/media/post_attachments/wp-content/uploads/2024/10/Haveri-boy-Death-1.jpg)
ವಿಷಯ ತಿಳಿದಿದ್ದೇ ತಡ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಬಾಲಕನಿಗಾಗಿ ಹರಿಯುವ ಮೋರಿಯಲ್ಲಿ ಹುಡುಕಾಡಿದ್ದರು. ಸ್ಥಳದಲ್ಲಿ ಕುಟುಂಬಸ್ಥರು ಬಾಲಕನಿಗಾಗಿ ಆಕ್ರಂದಿಸಿದ್ದರು. ಬಾಲಕ ಬದುಕಿ ಬರಲಿ ಅಂತ ಅಲ್ಲಿ ಸಾರ್ವಜನಿಕರು ಪ್ರಾರ್ಥಿಸಿದ್ದರು.
ಇದನ್ನೂ ಓದಿ: Breaking: ನಟಿ ಅಮೂಲ್ಯ ಸಹೋದರ, ಸ್ಯಾಂಡಲ್‌ವುಡ್ ನಿರ್ದೇಶಕ ದೀಪಕ್ ನಿಧನ
ಸುಮಾರು 15 ನಿಮಿಷಗಳ ಹುಡುಕಾಟದ ಬಳಿಕ ಮೆಡಿಕಲ್ ಶಾಪ್ ಮುಂಭಾಗದಲ್ಲಿದ್ದ ಸ್ಲ್ಯಾಮ್​​​ನಲ್ಲಿ ಬಾಲಕ ಪತ್ತೆಯಾದ, ಆ ಕ್ಷಣ ಬಾಲಕ ಅಲ್ಪ ಸ್ವಲ್ಪ ಉಸಿರಾಡುತ್ತಿದ್ದ. ಬಾಲಕ ಬದುಕಿದ್ದಾನೆ, ಸತ್ತಿಲ್ಲ, ಭಯ ಪಡಬೇಡಿ ಅಂತ ರಕ್ಷಣಾ ಪಡೆ ಬಾಲಕನನ್ನು ಎತ್ತಿಕೊಂಡು ಓಡಿದ್ರು. ಕೂಡಲೇ ಜಿಲ್ಲಾಸ್ಪತ್ರೆಗೆ ಕರೆತಂದ್ರು. ಆಸ್ಪತ್ರೆಯಲ್ಲಿ ವೈದ್ಯರ ಪರಿಶೀಲನೆ ವೇಳೆ ಬಾಲಕ ಮೃತನಾಗಿರೋದು ದೃಢಪಟ್ಟಿದೆ.
ಘಟನೆಗೆ ತೀವ್ರ ಮರುಕ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ವಿಜಯ​ಮಹಾಂತೇಶ್ 3 ಬಾರಿ ಪರೀಕ್ಷೆ ಮಾಡಿಸಿದ್ರೂ ಬಾಲಕ ಬದುಕಲಿಲ್ಲ, ಸರ್ಕಾರದಿಂದ ಪರಿಹಾರ ಕ್ರಮ ಕೈಗೊಳ್ತೀವಿ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us