newsfirstkannada.com

ಸಿಎಂ ಪತ್ನಿಗೆ ಮುಡಾ ಸೈಟ್‌ ಹಂಚಿಕೆ.. ಮಹತ್ವದ ದಾಖಲೆ ಬಿಡುಗಡೆ ಮಾಡಿದ ಹೆಚ್‌.ಸಿ ಮಹದೇವಪ್ಪ; ಹೇಳಿದ್ದೇನು?

Share :

Published July 7, 2024 at 9:08pm

    50:50 ಆರೋಪಕ್ಕೆ ಹೆಚ್‌.ಸಿ. ಮಹದೇವಪ್ಪ ದಾಖಲೆಯ ಸ್ಪಷ್ಟನೆ

    ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಿದ್ದ ವಿಪಕ್ಷಗಳು

    ಮುಡಾದಲ್ಲಿ ನಡೆದಿದೆ ಎನ್ನಲಾದ 50:50 ಅಕ್ರಮದ ತನಿಖೆ ಎಲ್ಲಿಗೆ ಬಂತು?

ಮೈಸೂರಿನ ಮುಡಾ ಹಗರಣದ ಆರೋಪ. ಬಡ-ಮಧ್ಯಮ ವರ್ಗದ ಜನರ ಕನಸನ್ನ ನುಚ್ಚುನೂರು ಮಾಡಿರೋ ಅಕ್ರಮ ಎನ್ನಲಾಗುತ್ತಿದೆ. ಇಲ್ಲದವರಿಗೆ ಸಲ್ಲಬೇಕಾದ ಸೈಟ್‌ಗಳು ಉಳ್ಳವರ ಪಾಲಾಗಿರೋ ಹಗರಣ ಅನೋ ಆರೋಪವಿದೆ. ಇದು ಕೇವಲ ಜನಸಾಮಾನ್ಯರ ಮಧ್ಯೆ ನಡೆದ ಹಗರಣ ಆಗಿರದೇ ರಾಜ್ಯದ ಸಿಎಂ ಸುತ್ತಲೂ ಗಿರಕಿ ಹೊಡೆಯುತ್ತಿದೆ. ಇದೀಗ ಸಿಎಂ ಆಪ್ತ ಸಚಿವ ಅಕ್ರಮದ ಅಖಾಡಕ್ಕೆ ಇಳಿದು ದಾಖಲೆ ಬಿಡುಗಡೆ ಮಾಡಿದ್ದಾರೆ.

ಮುಡಾ ಅಕ್ರಮದಲ್ಲಿ ಸಿದ್ದರಾಮಯ್ಯರ ಪತ್ನಿ ಹೆಸರು ತಳುಕು
50:50 ಆರೋಪಕ್ಕೆ ಹೆಚ್‌.ಸಿ. ಮಹದೇವಪ್ಪ ‘ದಾಖಲೆ’ ಸ್ಪಷ್ಟನೆ

ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದ ಸಿದ್ದರಾಮಯ್ಯರ ಧರ್ಮಪತ್ನಿ ಪಾರ್ವತಿ ಅವರಿಗೂ ಮುಡಾ ಅಕ್ರಮ ಸೈಟ್ ಆರೋಪ ಸುತ್ತಿಕೊಂಡಿದೆ. ಎಸ್‌ಸಿ-ಎಸ್‌ಟಿ ಜಮೀನನ್ನೇ ಅಕ್ರಮವಾಗಿ ಕಬಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೇ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡ್ಬೇಕು ಅಂತ ಬಿಜೆಪಿ ಆಗ್ರಹಿಸುತ್ತಿದೆ. ಇದೀಗ ಸಿದ್ದರಾಮಯ್ಯ ಪರ ಸಚಿವ ಹೆಚ್‌.ಸಿ ಮಹದೇವಪ್ಪ ಅಖಾಡಕ್ಕೆ ಇಳಿದು ಜಮೀನಿನ ಮೂಲ ದಾಖಲೆಗಳನ್ನ ಹಿಡಿದು ಪ್ರಕರಣದ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಪೊಲೀಸ್​ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್

ಇದು ಪಿಟಿಸಿಎಲ್ ಕಾಯ್ದೆಗೆ ಸೇರಿದ ಜಮೀನಲ್ಲ ಅಂತ ಸಚಿವ ಹೆಚ್‌.ಸಿ. ಮಹದೇವಪ್ಪ ಹೇಳಿದ್ದಾರೆ. ಜೊತೆಗೆ ಸಿಎಂ ಪತ್ನಿಗೆ ಜಮೀನು ಹೇಗೆ ಬಂತು ಎಂಬ ವಿಚಾರವನ್ನ ದಾಖಲೆ ಸಮೇತ ತಿಳಿಸಿದ್ದಾರೆ.

ಏನಿದು ಜಮೀನು ವಿವಾದ?
1985ರಲ್ಲಿ ಹರಾಜಿನಲ್ಲಿ 100ರೂ.ಗೆ ಜಮೀನು ಖರೀದಿ
ಜವರ ಎಂಬುವವರಿಂದ ಜಮೀನು ಹರಾಜಲ್ಲಿ ಖರೀದಿ
1992ರಲ್ಲಿ 3 ಎಕರೆ 17 ಗುಂಟೆ ಜಮೀನು ನೋಟಿಫೈ ಆಗಿದೆ
ಮೊದಲು ಜವರ ಎಂಬುವರ ಹೆಸರಿನಲ್ಲಿ ಜಮೀನಿರುತ್ತೆ
1998ರಲ್ಲಿ ದೇವರಾಜ್ ಎಂಬುವರ ಹೆಸರಿಗೆ ಡಿನೋಟಿಫೈ
2004ರಲ್ಲಿ ಸಿಎಂ ಪತ್ನಿ ತಮ್ಮ ಮಲ್ಲಿಕಾರ್ಜುನ್‌ರಿಂದ ಖರೀದಿ
ಸರ್ವೆ ನಂ 464ರಲ್ಲಿ 3 ಎಕರೆ 16 ಗುಂಟೆ ಜಮೀನು ಖರೀದಿ
2010ರಲ್ಲಿ ಸಿಎಂ ಪತ್ನಿ ಪಾರ್ವತಿಯವರಿಗೆ ಜಮೀನು ನೀಡಿಕೆ
2005ರಲ್ಲಿ ಜಾಗವನ್ನ ಅಭಿವೃದ್ಧಿ ಪಡಿಸಿ ಮಾರಿರುವ ಮುಡಾ
ಅಕ್ರಮವಾಗಿ ಜಾಗ ಸ್ವಾಧೀನಕ್ಕೆ ತೆಗೆದುಕೊಂಡು ಮಾರಾಟ
ಗಮನಕ್ಕೆ ತಂದಾಗ ಪರ್ಯಾಯ ಜಾಗ ನೀಡಲು ತೀರ್ಮಾನ
ಬಳಿಕ ಸಿದ್ದರಾಮಯ್ಯರ ಪತ್ನಿಗೆ ಬೇರೆ ಕಡೆ ಜಾಗ ನೀಡಿಕೆ
‘ಸಿಎಂ ಪತ್ನಿ ಅವರದ್ದು 50: 50 ಅನುಪಾತದ ಜಮೀನು ಅಲ್ಲ’
ಕಾನೂನಾತ್ಮಕವಾಗಿ ಪಡೆದದ್ದು ಎಂದ ಹೆಚ್‌.ಸಿ.ಮಹದೇವಪ್ಪ

ಮುಡಾದಿಂದ ಅಕ್ರಮವಾಗಿ ಸೈಟ್ ಪಡೆದಿದ್ದಾರೆ ಎಂಬ ಆರೋಪಕ್ಕೂ ಮಹದೇವಪ್ಪ ದಾಖಲೆ ಸಮೇತ ಉತ್ತರ ನೀಡಿದ್ದಾರೆ. ಇದು 50:50ರ ಅನುಪಾತದ ಅಡಿ ಪಡೆದ ಜಮೀನು ಅಲ್ಲ. ಅನಧಿಕೃತವಾಗಿ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಪರಿಹಾರವಾಗಿ ಕೊಟ್ಟ ನಿವೇಶನ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ.

ಇನ್ನು, ಮೈಸೂರು ನಗರಾಭಿವೃದ್ಧಿ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಸೈಟ್​ ಹಂಚಿಕೆ ಗೋಲ್ಮಾಲ್​ ಬಗ್ಗೆ ನ್ಯೂಸ್​ಫಸ್ಟ್​ ದಿಟ್ಟ ವರದಿ ಮಾಡಿದ್ದೇ ಮಾಡಿದ್ದು.. ಮುಡಾದಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರವೇ ಬಯಲಾಗುತ್ತಿದೆ. ನ್ಯೂಸ್ ​ಫಸ್ಟ್​ ವರದಿಯಿಂದ ಎಚ್ಚೆತ್ತ ರಾಜ್ಯ ಸರ್ಕಾರ, ಮುಡಾದಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆಗೆ ಆದೇಶಿಸಿತ್ತು. ಇದರ ಬೆನ್ನಲ್ಲೇ ತನಿಖಾ ತಂಡ ಮುಡಾ ಕಚೇರಿಗೆ ತೆರಳಿ ಕಡತಗಳಿಗಾಗಿ ತೀವ್ರ ಶೋಧ ನಡೆಸಿದೆ.

ಇದನ್ನೂ ಓದಿ: ಮುಡಾ ಸೈಟ್‌ ಅಕ್ರಮ ಆರೋಪ; ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಬಿಚ್ಚಿಟ್ರು ಅಸಲಿ ವಿಷ್ಯ; ಏನದು? 

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 50:50 ಅನುಪಾತದಡಿ ನಿವೇಶನಯಲ್ಲಿ ಹಗರಣ ನಡೆದಿರುವ ಬಗ್ಗೆ ನ್ಯೂಸ್​ಫಸ್ಟ್​ ವಿಸ್ತೃತವಾದ ವರದಿ ಮಾಡಿತ್ತು. ಇನ್ನು ವಿಪಕ್ಷಗಳು ಕೂಡ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಿದ್ವು. ಇದರ ಬೆನ್ನಲ್ಲೇ ಮೈಸೂರಿಗೆ ದೌಡಾಯಿಸಿದ್ದ ಸಚಿವ ಭೈರತಿ ಸುರೇಶ್​, ಅಧಿಕಾರಿಗಳ ಜೊತೆ ಸಭೆ ನಡೆಸಿ, ಅಕ್ರಮದ ಬಗ್ಗೆ ತನಿಖೆಗೆ ಐಎಎಸ್ ಅಧಿಕಾರಿ ವೆಂಕಟಚಲಪತಿ ನೇತೃತ್ವದಲ್ಲಿ ತಂಡ ರಚಿಸಿ, ತಿಂಗಳೊಳಗೆ ಸಂಪೂರ್ಣ ವರದಿ ನೀಡುವಂತೆ ಸೂಚನೆ ನೀಡಿದ್ದರು. ಇನ್ನು ಕೇಂದ್ರ ಸಚಿವ ಹೆಚ್​ಡಿಕೆ, ಸಚಿವ ಭೈರತಿ ಸುರೇಶ್​ ಕಡತಗಳನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪ ಮಾಡಿದ್ರು. ಇದರ ಬೆನ್ನಲ್ಲೇ ತನಿಖೆ ಚುರುಕುಕೊಳಿಸಿದ ತನಿಖಾ ತಂಡ, ಮುಡಾ ಕಚೇರಿಯ ಮೂಲೆ ಮೂಲೆಯನ್ನು ತಡಕಾಡಿದೆ. ಒಟ್ಟು 11 ಅಧಿಕಾರಿಗಳ ತನಿಖಾ ತಂಡ, ರಾತ್ರಿಯಿಡೀ ಕಡತಗಳಿಗಾಗಿ ಕಚೇರಿಯಲ್ಲಿ ತೀವ್ರ ಶೋಧ ನಡೆಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಎಂ ಪತ್ನಿಗೆ ಮುಡಾ ಸೈಟ್‌ ಹಂಚಿಕೆ.. ಮಹತ್ವದ ದಾಖಲೆ ಬಿಡುಗಡೆ ಮಾಡಿದ ಹೆಚ್‌.ಸಿ ಮಹದೇವಪ್ಪ; ಹೇಳಿದ್ದೇನು?

https://newsfirstlive.com/wp-content/uploads/2024/07/siddu-hc-mahadevappa.jpg

Load More