newsfirstkannada.com

ಬಿ.ವೈ ವಿಜಯೇಂದ್ರಗೆ ಇವತ್ತು ಡಬಲ್ ಖುಷಿ.. ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೇವೇಗೌಡರು ಹೇಳಿದ ಕಿವಿಮಾತು ಏನು?

Share :

13-11-2023

    ಹೋರಾಟ ಅಂದ್ರೆ ನೆನಪಾಗೋದು ಯಡಿಯೂರಪ್ಪ ಮತ್ತು ದೇವೇಗೌಡರು

    ಆಶೀರ್ವಾದದ ಜೊತೆಗೆ ಬಿ.ವೈ ವಿಜಯೇಂದ್ರಗೆ ಕಿವಿಮಾತು ಹೇಳಿದ ಹೆಚ್‌ಡಿಡಿ

    ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಹೋಗುವಂತೆ ಸಲಹೆ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗ್ತಿದ್ದಂತೆ ಬಿ.ವೈ ವಿಜಯೇಂದ್ರ ಅವರು ಹಿರಿಯರ ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ. ಬಿಜೆಪಿ ಹಿರಿಯ ನಾಯಕರ ಭೇಟಿ ಜೊತೆಗೆ ಇಂದು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಮನೆಗೂ ಭೇಟಿ ನೀಡಿದ್ದಾರೆ. ಹೆಚ್‌ಡಿಡಿ ನಿವಾಸಕ್ಕೆ ಬಿ.ವೈ ವಿಜಯೇಂದ್ರ ಅವರ ಭೇಟಿ ಕುತೂಹಲ ಕೆರಳಿಸಿದೆ.

ಮನೆಗೆ ಬಂದ ಬಿ.ವೈ ವಿಜಯೇಂದ್ರಗೆ ಶುಭಾಶಯ ತಿಳಿಸಿದ ಮಾಜಿ ಪ್ರಧಾನಿ ಕಿವಿಮಾತೊಂದನ್ನ ಹೇಳಿದ್ದಾರೆ. ಆತ್ಮೀಯವಾಗಿ ಮಾತನಾಡಿದ ದೇವೇಗೌಡರು ಸರಿಯಾದ ಸಮಯದಲ್ಲಿ ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಮೂರು ದಿನದ ಹಿಂದೆ ಇದಿದ್ದು ಒಂದು ಲೆಕ್ಕ. ಇಂದಿನಿಂದ ಒಂದು ಲೆಕ್ಕ ಎಂದು ಹೇಳಿದ್ದಾರೆ. ದೇವೇಗೌಡರ ಈ ಮಾತುಗಳನ್ನ ಕೇಳಿದ ವಿಜಯೇಂದ್ರ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ದೇವೇಗೌಡರ ಭೇಟಿ ಬಳಿಕ ಮಾತನಾಡಿದ ವಿಜಯೇಂದ್ರ ಅವರು ಇವತ್ತು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಅವರು ಬಹಳ ಹೆಮ್ಮೆ ಪಟ್ಟರು. ನಿಮ್ಮದು ಒಂದು ದೊಡ್ಡ ರಾಷ್ಟ್ರೀಯ ಪಕ್ಷ. ಇಂತಹ ಪಕ್ಷದಲ್ಲಿ ಕಿರಿಯವನಾದ ನಿನಗೆ ನರೇಂದ್ರ ಮೋದಿಯವರು ಅವಕಾಶ ಕೊಟ್ಟಿದ್ದಾರೆ. ತಂದೆಯವರಂತೆ ನೀನು ಯಶಸ್ಸು ಕಾಣುತ್ತೀಯಾ. ಅವರ ದಾರಿಯಲ್ಲಿ ಹೋಗು ನಿನಗೂ ಒಳ್ಳೆಯ ಯಶಸ್ಸು ಸಿಗುತ್ತದೆ ಎಂದಿದ್ದಾರೆ ಎಂದರು.

ಇನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಹೋಗುವಂತೆ ಸಲಹೆ ನೀಡಿದ್ದಾರೆ. ಏನೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಿಕೊಂಡು ಹೋಗಬೇಕು. ಏನೇ ವ್ಯತ್ಯಾಸಗಳಿದ್ದರೂ ಅದನ್ನು ಸರಿಪಡಿಸಿಕೊಂಡು ಮುಂದೆ ಹೋಗುವಂತೆ ಮಾರ್ಗದರ್ಶನ ಮಾಡಿದ್ದಾರೆ. ಅವರ ಮಾತಿಂದ ನನಗೆ ತುಂಬಾ ಸಂತೋಷ ಆಯ್ತು. ಇದೇ ವೇಳೆ‌ ಅವರ ಹೋರಾಟ ಮತ್ತು ನಮ್ಮ ತಂದೆಯವರ ಹೋರಾಟಗಳನ್ನು ನೆನಪು ಮಾಡಿಕೊಂಡ್ರು. ಪಾದಯಾತ್ರೆ ಮತ್ತು ಹೋರಾಟ ಅಂದರೆ ನನಗೆ ನೆನಪಾಗುವುದೇ ಎರಡು ಹೆಸರು ಅದು ಯಡಿಯೂರಪ್ಪ ಮತ್ತು ದೇವೇಗೌಡ್ರು. ಅವರ ಸಲಹೆಗಳನ್ನು ನಾನು ಅಳವಡಿಸಿಕೊಂಡು ಪಕ್ಷದಲ್ಲಿ ಕೆಲಸ ಮಾಡ್ತೀನಿ ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿ.ವೈ ವಿಜಯೇಂದ್ರಗೆ ಇವತ್ತು ಡಬಲ್ ಖುಷಿ.. ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೇವೇಗೌಡರು ಹೇಳಿದ ಕಿವಿಮಾತು ಏನು?

https://newsfirstlive.com/wp-content/uploads/2023/11/HD-Devegowda-By-Vijayendra-3.jpg

Load More