newsfirstkannada.com

ಇಷ್ಟು ದಿನ ಒಂದು ಲೆಕ್ಕ, ನಾಳೆಯಿಂದ ಒಂದು ಲೆಕ್ಕ.. ವಿಜಯೇಂದ್ರಗೆ ದೇವೇಗೌಡ್ರ ಪಾಠ!

Share :

14-11-2023

    ಮಠಯಾತ್ರೆ ಬೆನ್ನಲ್ಲೇ ಗೌಡರ ಭೇಟಿಯಾದ ವಿಜಯೇಂದ್ರ!

    ದೇವೇಗೌಡರ ಆಶೀರ್ವಾದ ಪಡೆದ ಕಮಲ ನೂತನ ಸಾರಥಿ

    ಲೋಕ ಕದನ, ಮೈತ್ರಿ ಒಗ್ಗಟ್ಟಿನ ಮಂತ್ರ ಬೋಧಿಸಿದ ಗೌಡ್ರು

ಬೆಂಗಳೂರು: ಲೋಕಸಭೆ ಗೆಲ್ಲಲು ಬಿಜೆಪಿ ರಥಕ್ಕೆ ಬಲಿಷ್ಠ ಸಾರಥಿ ಆಯ್ಕೆ ಆಗಿದೆ.. ಕಾಸ್ಟ್​, ಮಾಸ್​​​ ಪ್ಲಸ್​​​ ಯಂಗ್​​​ ಎನರ್ಜೆಟಿಕ್​​​ ನೇಮಕ ಹಸ್ತಪಡೆಗೆ ಚೆಕ್​ಮೇಟ್​​ ಇಟ್ಟಿದೆ.. ಅಧಿಕಾರದ ದಂಡ ಸಿಗುತ್ತಲೇ ವಿಜಯೇಂದ್ರ ಕಾಲಿಗೆ ಚಕ್ರ ಕಟ್ಕೊಂಡು ಸಂಚಾರ ನಡೆಸ್ತಿದ್ದಾರೆ.. 2 ದಿನದಿಂದ ಮಠ ಯಾತ್ರೆ ನಡೆಸಿದ ವಿಜಯೇಂದ್ರ, ರಾಜ್ಯ ರಾಜಕಾರಣ ಆಳಿದ ಹಿರಿಯ ನಾಯಕರ ಆಶೀರ್ವಾದವನ್ನ ಪಡೆದ್ರು..

ಮಠ ಯಾತ್ರೆ ಬೆನ್ನಲ್ಲೇ ಗೌಡರ ಭೇಟಿಯಾದ ವಿಜಯೇಂದ್ರ!

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗ್ತಿದ್ದಂತೆ ಬಿ.ವೈ ವಿಜಯೇಂದ್ರ, ಹಿರಿಯರ ಆಶೀರ್ವಾದ ಪಡೆದ್ರು.. ಬಿಜೆಪಿ ಹಿರಿಯ ನಾಯಕರ ಭೇಟಿ ಜೊತೆಗೆ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಮನೆಗೂ ಭೇಟಿ ನೀಡಿದ್ದಾರೆ.. ಹೆಚ್‌ಡಿಡಿ ನಿವಾಸಕ್ಕೆ ವಿಜಯೇಂದ್ರ ಭೇಟಿ ಕುತೂಹಲ ಕೆರಳಿಸಿದೆ.

ಮನೆಗೆ ಬಂದ ವಿಜಯೇಂದ್ರಗೆ ಶುಭಾಶಯ ತಿಳಿಸಿದ ಗೌಡ್ರು, ಸರಿಯಾದ ಸಮಯದಲ್ಲಿ ನಿಮ್ಮನ್ನ ಆಯ್ಕೆ ಮಾಡಿದ್ದಾರೆ. ಮೂರು ದಿನದ ಹಿಂದೆ ಇದಿದ್ದು ಒಂದು ಲೆಕ್ಕ. ಇಂದಿನಿಂದ ಒಂದು ಲೆಕ್ಕ ಎಂದು ಪಾಠ ಮಾಡಿದ್ದಾರೆ.. ಲೋಕಸಭಾ ಎಲೆಕ್ಷನ್​​​ನಲ್ಲಿ ಬಿಜೆಪಿ-ಜೆಡಿಎಸ್ ಒಗ್ಗಟ್ಟಾಗಿ ಹೋಗುವಂತೆ ಸಲಹೆ ನೀಡಿದ್ದಾರೆ.. ಈ ಮಾತಿನ ಆಶೀರ್ವಾದ ಪಡೆದ ವಿಜಯೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ವಿಜಯೇಂದ್ರರನ್ನ ಸ್ವಾಗತಿಸಿ ಸಂಸದ ಪ್ರಜ್ವಲ್​​​ ರೇವಣ್ಣ ಬಳಿಕ ಮಾತ್ನಾಡಿದ್ರು.. ವಿಜಯೇಂದ್ರರ ಜೊತೆ ಸೇರಿ ಲೋಕಸಭೆಯಲ್ಲಿ ಒಳ್ಳೆಯ ಫಲಿತಾಂಶ ಕೊಡ್ತೀವಿ ಅಂದ್ರು.

ಮಾಜಿ ಸಿಎಂ ಎಸ್​.ಎಂ ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ ವಿಜಯೇಂದ್ರ, ದೀಪಾವಳಿ ಶುಭ ಕೋರಿ ಆಶೀರ್ವಾದ ಪಡೆದ್ರು.. ನಂತ್ರ ಒಂದಷ್ಟು ಸಲಹೆಗಳನ್ನ ಪಡೆದ್ರು.. ಬಳಿಕ ಮಾತ್ನಾಡಿದ ಎಸ್​ಎಂಕೆ, ರಾಜಕಾರಣದಲ್ಲಿ ಯುವ ಪ್ರತಿಭೆಗಳು ಹೊರಹೊಮ್ಮಬೇಕು ಅಂತ ಅಭಿಪ್ರಾಯಪಟ್ಟರು.

ಬೊಮ್ಮಾಯಿ ಹೇಳಿದ್ದೇನು..?

ಇದಕ್ಕೂ ಮುನ್ನ ಮಾಜಿ ಸಿಎಂ ಬೊಮ್ಮಾಯಿ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ರು.. ಒಳ್ಳೆಯ ನಾಯಕನನ್ನ ಆಯ್ಕೆ ಮಾಡಿದ್ದಾರೆ.. ರಾಜ್ಯ BJPಗೆ ದೊಡ್ಡ ಶಕ್ತಿ ಬಂದಿದೆ ಅಂತ ಬೊಮ್ಮಾಯಿ ಹೇಳಿದ್ದಾರೆ.. ಒಟ್ಟಾರೆ, ಬಿಜೆಪಿಯ ಸಂದಿಗ್ಧ ಕಾಲದಲ್ಲಿ ವಿಜಯೇಂದ್ರರ ಆಯ್ಕೆ ಆಗಿದೆ.. ಈ ಆಯ್ಕೆ ಇಟ್ಟ ನಿರೀಕ್ಷೆ ಹುಸಿಯಾಗದಂತೆ ವಿಜಯೇಂದ್ರ ತಮ್ಮ ನಾಯಕತ್ವದ ಛಾಪು ಮೂಡಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಷ್ಟು ದಿನ ಒಂದು ಲೆಕ್ಕ, ನಾಳೆಯಿಂದ ಒಂದು ಲೆಕ್ಕ.. ವಿಜಯೇಂದ್ರಗೆ ದೇವೇಗೌಡ್ರ ಪಾಠ!

https://newsfirstlive.com/wp-content/uploads/2023/11/HD-Devegowda-By-Vijayendra-4.jpg

Load More