newsfirstkannada.com

×

ಈ ವಿಷ್ಯದಲ್ಲಿ ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ರಾ ಸಿಎಂ ಸಿದ್ದರಾಮಯ್ಯ..?- ಹೆಚ್​ಡಿಕೆಯಿಂದ ಗಂಭೀರ ಆರೋಪ

Share :

Published July 21, 2023 at 4:34pm

Update July 21, 2023 at 4:36pm

    ಸದನಕ್ಕೆ ಸುಳ್ಳು ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ

    ಸ್ಪೀಕರ್ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ ಎಂದ HDK

    ಸಿದ್ದರಾಮಯ್ಯ​ ಸರ್ಕಾರಕ್ಕೆ ಹೆಚ್​ಡಿಕೆ ಸವಾಲ್​ ಹಾಕಿದ್ರು!

ಬೆಂಗಳೂರು: ಅಧಿಕಾರಿಗಳ ವಿಷಯದಲ್ಲಿ ಸಿಎಂ ಸಿದ್ಧರಾಮಯ್ಯ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹೇಳಿದರು.

ಈ ಸಂಬಂಧ ಮಾತಾಡಿದ ಹೆಚ್​ಡಿಕೆ, ನಾನು ಸಿಎಂ ಆಗಿದ್ದ ವೇಳೆ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡಿಲ್ಲ. ಅವರನ್ನು ಗೌರವದಿಂದ ನಡೆಸಿಕೊಂಡಿದ್ದೇನೆ. ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ಕೂಡ ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡಿಲ್ಲ. ಯಾವುದೇ ಸಂದರ್ಭದಲ್ಲಿಯೂ ಅಧಿಕಾರಿಗಳಿಂದ ಯಾರಿಗೂ ಅಥಿತ್ಯ ಕೊಡಿಸಿಲ್ಲ. ಹೀಗೆ ಸುಳ್ಳು ಹೇಳುವುದಕ್ಕೆ ನಾಚಿಕೆ ಆಗಬೇಕು ಇವರಿಗೆ. ನನ್ನ ವಿರುದ್ಧ ದಾಖಲೆ ಇದ್ದರೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.

2018ರಲ್ಲಿ ನನ್ನ ನೇತೃತ್ವದ ಮೈತ್ರಿ ಸರಕಾರ ಪ್ರಮಾಣ ವಚನ ಸ್ವೀಕರಿಸಿದ ವೇಳೆ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಆಗ ರಾಜ್ಯಪಾಲರ ಆದೇಶದ ಮೇರೆಗೆ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಎಲ್ಲಾ ವ್ಯವಸ್ಥೆಯನ್ನು ಮಾಡಿತ್ತು. ಆದರೆ, ಮೊನ್ನೆ ನಡೆದ ಸಭೆಗೆ ಸ್ವತಃ ಮುಖ್ಯಮಂತ್ರಿಗಳ ಅಧೀನದಲ್ಲಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯೇ ಅಧಿಕಾರಿಗಳಿಗೆ ಆದೇಶ ನೀಡಿದೆ. ತಪ್ಪು ತಪ್ಪೇ ಅಲ್ಲವೇ? ಇದನ್ನು ಒಪ್ಪಿಕೊಳ್ಳಲು ಪ್ರತಿಷ್ಠೆ ಏಕೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಸರಕಾರವೇ ನೇರ ಕಾರಣ ಎಂದ ಹೆಚ್​ಡಿಕೆ

ವಿಧಾನಸಭೆಯಲ್ಲಿ ಬುಧವಾರ ನಡೆದ ಗೊಂದಲಕ್ಕೆ ರಾಜ್ಯ ಕಾಂಗ್ರೆಸ್ ಸರಕಾರವೇ ನೇರ ಕಾರಣ. ಸಭಾಧ್ಯಕ್ಷರ ಪೀಠವನ್ನು ದುರ್ಬಳಕೆ ಮಾಡಿಕೊಂಡಿದೆ. ಎರಡು ನಿಮಿಷದಲ್ಲಿ ಬಗೆಹರಿಸುವ ವಿಷಯವನ್ನು ಇಷ್ಟು ದೂರ ಎಳೆದು ತರಲಾಗಿದೆ ಎಂದು ಹೇಳಿದರು.

ಘಟಬಂಧನ್ ಸಭೆಗೆ ಬಂದಿದ್ದ ಹೊರರಾಜ್ಯದ ಗಣ್ಯರಿಗೆ ಉಪಚಾರ ಮಾಡಲು ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡಿದ್ದು ತಪ್ಪು. ಈ ಸದನದಲ್ಲಿ ಪ್ರಸ್ತಾಪ ಮಾಡಿದ ಪ್ರತಿಪಕ್ಷಗಳ ಮನವಿಯ ಬಗ್ಗೆ ಸರಕಾರ ಭಂಡತನ ತೋರಿದೆ. ಸ್ವೀಕರ್ ಕಚೇರಿಯಲ್ಲಿ ಸಂಧಾನ ಸಭೆ ನಡೆಸಿದ ವೇಳೆಯಲ್ಲೂ ಕಾಂಗ್ರೆಸ್ ನಾಯಕರು, ನಾವೇನೂ ಎನು ತಪ್ಪು ಮಾಡಿಲ್ಲವೆಂದು ಪ್ರತಿಷ್ಠೆ ತೋರಿದರು ಎಂದರು ಮಾಜಿ ಮುಖ್ಯಮಂತ್ರಿಗಳು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ವಿಷ್ಯದಲ್ಲಿ ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ರಾ ಸಿಎಂ ಸಿದ್ದರಾಮಯ್ಯ..?- ಹೆಚ್​ಡಿಕೆಯಿಂದ ಗಂಭೀರ ಆರೋಪ

https://newsfirstlive.com/wp-content/uploads/2023/07/Siddaramaiah_2.jpg

Load More