‘ಕಮಲ-ದಳ’ ದೋಸ್ತಿ ಕನ್ಫರ್ಮ್ ಮಾಡಿದ ಬಿಎಸ್ವೈ
ಮೈತ್ರಿಯ ರಣಕಹಳೆ ಮೊಳಗಿಸಿದ ಕೇಸರಿ ನಾಯಕರು
ಜೆಡಿಎಸ್ ಜೊತೆ ಬಿಜೆಪಿ ಮೈತ್ರಿಗೆ ಮುಹೂರ್ತ ಫಿಕ್ಸ್
ರಾಜ್ಯದಲ್ಲಿ ಮತ್ತೆ ಮೈತ್ರಿಗೆ ಕಾಲ ಬಂದಿದೆ. ಈ ಹಿಂದೆ ಕಾಂಗ್ರೆಸ್ ಜೊತೆಗೆ ಹಸ್ತಲಾಘವ ಮಾಡಿಕೊಂಡು ಅಧಿಕಾರ ಅನುಭವಿಸಿದ್ದ ದಳಪತಿಗಳು ಈಗ ಕೇಸರಿ ಕಲಿಗಳತ್ತ ಮುಖ ಮಾಡಿದ್ದಾರೆ. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಪ್ರಧಾನಿ ಮೋದಿ, ಅಮಿತ್ ಶಾ ಭೇಟಿ ಮಾಡಿ ಖಾಸ್ಬಾತ್ ಕೂಡ ಆಡಿದ್ದಾರೆ. ಈ ನಡುವೆ ಈ ಮೈತ್ರಿ ಕೂಟದ ನೆಕ್ಸ್ಟ್ ಲೆವೆಲ್ ಮೀಟಿಂಗ್ ನಡೆದಿದೆ.
ಲೋಕ ಸಮರ ಸಮೀಪಿಸ್ತಿದೆ. ಎಲ್ಲಾ ಪಕ್ಷಗಳು ಅಖಾಡದಲ್ಲಿ ಕತ್ತಿ ಹಿಡಿದು ಹೋರಾಡಲು ಅಣಿಯಾಗುತ್ತಿವೆ. ಕೇಸರಿ ಪಾಳಯ, ಕೈ ಪಾಳಯ ಹಾಗೂ ದಳಪತಿಗಳು ಲೋಕದ ರಣೋತ್ಸಾಹದಿಂದ ಯುದ್ಧಕ್ಕೆ ಶಸ್ತ್ರಾಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಮುಂದಾಗ್ತಿದ್ದಾರೆ. ಅತ್ತ ಕಾಂಗ್ರೆಸ್ ಪಾಳಯ ಎಲ್ಲಾ ವಿಪಕ್ಷಗಳನ್ನು ಒಗ್ಗೂಡಿಸಿಕೊಂಡು ಇಂಡಿಯಾ ಮೂಲಕ ಅಖಾಡಕ್ಕಿಳಿದ್ರೆ ಇತ್ತ ಕಮಲ ಹಾಗೂ ದಳಗಳು ಒಂದಾಗೋ ಸುದ್ದಿ ಗುಲ್ಲೆಬ್ಬಿಸಿದೆ. ಅದರಲ್ಲೂ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಭೇಟಿಯಾಗಿದ್ದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಹೀಗಿರುವಾಗ ಮೈತ್ರಿಯ ನೆಕ್ಸ್ಟ್ ಲೆವೆಲ್ ಎಂಬಂತೆ ಮಾಜಿ ಸಿಎಂ ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದಾರೆ.
ಲೋಕಸಭೆ ಚುನಾವಣೆಗೆ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ
ಹೆಚ್.ಡಿ ದೇವೇಗೌಡರನ್ನ ಭೇಟಿ ಮಾಡಿದ ಕುಮಾರಸ್ವಾಮಿ
ಲೋಕಸಭೆ ಚುನಾವಣೆಗೆ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿಗೆ ಮುಹೂರ್ತ ಫಿಕ್ಸ್ ಆದಂತಿದೆ. ಮೈತ್ರಿ ಬಗ್ಗೆ ದಳಪತಿಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ನಡುವೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ಮಾಡಿ ಮೈತ್ರಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಬೆಂಗಳೂರಿನ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಮಾತುಕತೆಯಾಗಿದ್ದು ಈ ನಡೆ ತೀವ್ರ ಕುತೂಹಲ ಮೂಡಿಸಿದೆ.
ಇನ್ನು, ನಾಳೆ ಜೆಡಿಎಸ್ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಈ ವೇಳೆ ಹೆಚ್.ಡಿ. ಕುಮಾರಸ್ವಾಮಿ ಕಮಲ ಪಾಳಯದ ಜೊತೆಗಿನ ಮೈತ್ರಿ ಬಗ್ಗೆ ಕಾರ್ಯಕರ್ತರ ಅಭಿಪ್ರಾಯವನ್ನ ಆಲಿಸಲಿದ್ದಾರೆ. ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿವೆ ಎನ್ನಲಾಗ್ತಿದೆ. ಒಟ್ಟಾರೆ ದೋಸ್ತಿಗೆ ಮುಹೂರ್ತ ಫಿಕ್ಸ್ ಆಗಿದೆ. ಅಂತಿಮವಾಗಿ ಹಣಾಹಣಿಯೊಂದೇ ಬಾಕಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ