ಕುಮಾರಸ್ವಾಮಿ ಕುಟುಂಬ ಸಮೇತ ಯುರೋಪ ಪ್ರವಾಸ
‘JDS 19 ಸ್ಥಾನ ಗೆದ್ದರೂ ಕಾಂಗ್ರೆಸ್ಗೆ ಭಯ ಎಷ್ಟಿದೆ’ ಅಂದ್ರು
ವರ್ಗಾವಣೆ ಸಭೆಯಲ್ಲಿ YST ಟ್ಯಾಕ್ಸ್ನವರಿಗೆ ಏನ್ ಕೆಲಸ-HDK ಪ್ರಶ್ನೆ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಕುಮಾರಸ್ವಾಮಿ ಅವರು ಕುಟುಂಬ ಸಮೇತ ಯುರೋಪ್ಗೆ ಪ್ರವಾಸಕ್ಕೆ ಹೋಗಿದ್ದರು.
ಬೆಂಗಳೂರಿಗೆ ಬರುತ್ತಿದ್ದಂತೆ ಮಾಧ್ಯಮಗಳ ಜೊತೆ ಮಾತನಾಡಿರುವ ಕುಮಾರಸ್ವಾಮಿ, ರಾಜ್ಯ ಪೊಲೀಸ್ ಇಲಾಖೆಯ ಇಂಟಲಿಜೆನ್ಸ್ ಎಷ್ಟರ ಮಟ್ಟಿಗೆ ಕೆಲಸ ಮಾಡ್ತಿದೆ? ನಾವು ಕುಟುಂಬ ಸಮೇತ ಹೋಗಿದ್ದು ಯುರೋಪ್ ಕಂಟ್ರಿಗೆ. ಅದನ್ನು ಕೆಲವರು ಸರ್ಕಾರ ಕೆಡಗಲು ಸಿಂಗಾಪುರಕ್ಕೆ ಹೋಗಿದ್ದೇವೆ ಅನ್ನೋ ರೀತಿಯಲ್ಲಿ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ. ಜೆಡಿಎಸ್ ಮತ್ತು ಕುಮಾರಸ್ವಾಮಿ 19 ಸ್ಥಾನ ಗೆದ್ದರೂ ಕೂಡಾ ಅವರಿಗೆ ನಮ್ಮ ಭಯ ಎಷ್ಟಿದೆ ಎಂದು ನಾವು ಕಾಣಬಹುದು ಅಂತಾ ಕಿಡಿಕಾರಿದರು.
ಕುಮಾರಸ್ವಾಮಿ ವಿದೇಶ ಪ್ರವಾಸ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದರು. ಸಿಂಗಾಪುರಕ್ಕೆ ಹೋಗಿ ನಮ್ಮ ಸರ್ಕಾರವನ್ನು ಬೀಳಿಸುವ ಹುನ್ನಾರ ನಡೆಯುತ್ತಿದೆ ಎಂದಿದ್ದರು. ಡಿ.ಕೆ.ಶಿವಕುಮಾರ್ ಅವರ ಈ ಆರೋಪಕ್ಕೆ ಕುಮಾರಸ್ವಾಮಿ ಈ ರೀತಿ ಕೌಂಟರ್ ಕೊಟ್ಟಿದ್ದಾರೆ.
ಗೃಹ ಇಲಾಖೆಯಲ್ಲಿ ಯಾವರೀತಿ ವರ್ಗಾವಣೆ ದಂಧೆ..?
ನಾನು ವಿದೇಶದಲ್ಲಿದ್ದರೂ ಪ್ರತಿನಿತ್ಯದ ಬೆಳವಣಿಗೆಗಳನ್ನು ಗಮನಿಸಿದ್ದೇನೆ. ಗೃಹ ಇಲಾಖೆಯಲ್ಲಿ ಯಾವ ರೀತಿ ವರ್ಗಾವಣೆ ದಂಧೆ ನಡೆಯಿತು. ಪೊಲೀಸ್ ಅಧಿಕಾರಿಗಳನ್ನು ಆ ಮಟ್ಟಿಗೆ ಬಳಸಿಕೊಂಡರೆ ಅವರು ಜನ ಸಾಮಾನ್ಯರ ರಕ್ಷಣೆಯನ್ನು ಹೇಗೆ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದರು. ಗರುಡಾ ಮಾಲ್ ಬಳಿಯ ಪೊಲೀಸ್ ಮೆಸ್ನಲ್ಲಿ ಸಭೆ ನಡೆಯಬೇಕಾದ್ರೆ ಯಾರು ಇದ್ದರು? ವೈಎಸ್ಟಿ ಟ್ಯಾಕ್ಸ್ನವರು ಅಲ್ಲೇ ಇದ್ರಾ ಅಲ್ವಾ? ಅಧಿಕಾರಿಗಳ ವರ್ಗಾವಣೆ ಬಗ್ಗೆ ಮುಖ್ಯಮಂತ್ರಿಗಳು, ಗೃಹ ಸಚಿವರು ಚರ್ಚೆ ಮಾಡುವಾಗ ವೈಎಸ್ಟಿ ಟ್ಯಾಕ್ಸ್ನವರು ಯಾಕೆ ಅಲ್ಲಿದ್ದರು? ಅವರನ್ನು ಇಟ್ಕೊಂಡು ಚರ್ಚೆ ಮಾಡಿದ್ದರೆ ಈ ಆಡಳಿತ ಎಲ್ಲಿಗೆ ಬಂತು. ವರ್ಗಾವಣೆ ಮಾಡಿ ಅದನ್ನು ಮತ್ತೆ ಯಾಕೆ ವಾಪಸ್ ಪಡೆದುಕೊಂಡರು ಎಂದು ಪ್ರಶ್ನಿಸಿದರು. ಈ ಹಿಂದೆ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ವಿರುದ್ಧ ವರ್ಗಾವಣೆ ದಂಧೆ ಆರೋಪ ಹೊರಸಿದ್ದರು. ಈ ಸಂದರ್ಭದಲ್ಲಿ YST ಅಂದರೆ ಯತೀಂದ್ರ ಟ್ಯಾಕ್ಸ್ ಸರ್ವೀಸ್ ಅಲ್ಲವೇ ಎಂದು ಪ್ರಶ್ನಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ