ಅಧಿಕಾರಿ ಚಂದ್ರಶೇಖರ್ಗೆ ಕುಮಾರಸ್ವಾಮಿ ಏನೆಂದು ಹೇಳಿದರು?
ಕುಮಾರಸ್ವಾಮಿ ಅವಧಿಯಲ್ಲೂ ಚಂದ್ರಶೇಖರ್ ಕೆಲಸ ಮಾಡಿದ್ರು
ಕಾಂಗ್ರೆಸ್ ಸಚಿವರ ವಿರುದ್ಧವೂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ
ಕೇಂದ್ರ ಸಚಿವ ಮತ್ತು ಐಪಿಎಸ್ ಅಧಿಕಾರಿ ನಡುವೆ ನಿಲ್ಲದ ಸಮರ. ಚಂದ್ರಶೇಖರ್ ಪತ್ರಕ್ಕೆ ಟ್ವಿಟರ್ನಲ್ಲಿ ಕುಮಾರಸ್ವಾಮಿ ತಿರುಗೇಟು. ಲೋಕಾಯುಕ್ತ ಎಸ್ಐಟಿ ಎಡಿಜಿಪಿ ಹುದ್ದೆಯಲ್ಲಿರುವ ಕಳಂಕಿತ, ಕ್ರಿಮಿನಲ್ ಪ್ರವೃತ್ತಿಯ ಅಧಿಕಾರಿ ಎಂದು ಕಿಡಿ. ಇನ್ನು ಕಾಂಗ್ರೆಸ್ ಸಚಿವರಿಗೆ ತಿರುಗೇಟು ನೀಡಿದ್ದಾರೆ. ಅಮಾನತು ಮಾಡದಿದ್ದರೆ ಜೆಡಿಎಸ್ ನಾಯಕರು ಬೀದಿಗಿಳಿದು ಹೋರಾಟ ಮಾಡ್ತೀವಿ ಎಂದು ಮಾಜಿ ಶಾಸಕ ಸುರೇಶ್ಗೌಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಭೀಕರ ಪ್ರವಾಹ, ಭೂಕುಸಿತ.. ಧಾರಾಕಾರ ಮಳೆಯಿಂದ 24 ಗಂಟೆಯಲ್ಲೇ 112ಕ್ಕೂ ಅಧಿಕ ಸಾವು!
ಕೇಂದ್ರ ಸಚಿವ VS ಐಪಿಎಸ್.. ಮುಗಿಯದ ಮಾತಿನ ಸಮರ
ಹಳೆ ಬಾಟಲಿಗೆ ಹೊಸ ಮದ್ಯ ಹಾಕಿದಂತೆ. ಹಳೆ ಕೇಸ್ನಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಲಾಕ್ ಮಾಡಲು ಲೋಕಾಯುಕ್ತ ವಿಚಾರಣೆ ಅಸ್ತ್ರ ಕೈಗೊಂಡಿದೆ. ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿದ್ದ ಲೋಕಾ ಎಡಿಜಿಪಿ ವಿರುದ್ಧ ದಳಪತಿ ರಾಂಗ್ ಆಗಿದ್ದು, ವಾಕ್ಸಮರಕ್ಕೆ ಇಳಿದಿದ್ದಾರೆ. ಮೊನ್ನೆ ಲೋಕಾಯುಕ್ತ ವಿಚಾರಣೆ ಎದುರಿಸಿ ಬಂದ ಹೆಚ್.ಡಿ ಕುಮಾರಸ್ವಾಮಿ, ಎಡಿಜಿಪಿ ಚಂದ್ರಶೇಖರ್ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ಇದಕ್ಕೆ ಕೆಲ ಸಚಿವರು ಚಂದ್ರಶೇಖರ್, ಕುಮಾರಸ್ವಾಮಿಯ ಅವಧಿಯಲ್ಲೂ ಇಲ್ಲೇ ಅಧಿಕಾರಿ ಆಗಿದ್ದರು ಎಂದು ಕಾಲೆಳೆದಿದ್ದರು. ಸಚಿವರ ಮಾತಿಗೆ ತಿರುಗೇಟು ನೀಡಿರುವ ದಳಪತಿ, ಒಂದೇ ಟ್ವೀಟ್ನಲ್ಲಿ ಇಬ್ಬರಿಗೂ ಟಾಂಗ್ ನೀಡಿದ್ದಾರೆ.
ಲೋಕಾಯುಕ್ತ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಪತ್ರ ಬರೆಯುವ ಮೂಲಕ ಎಡಿಜಿಪಿ ಚಂದ್ರಶೇಖರ್, ಹೆಚ್ಡಿಕೆಯನ್ನು ಹಂದಿಗೆ ಹೋಲಿಸಿ, ಅವರೊಬ್ಬ ಆರೋಪಿ ಎಂದಿದ್ರು. ಇದೀಗ ಹೆಚ್‌ಡಿಕೆ ಕೂಡ. ಸಚಿವರಿಗೆ ಟ್ವಿಟರ್ನಲ್ಲಿ ಕುಟುಕು ರೀತಿಯಲ್ಲೇ ಐಪಿಎಸ್ ಅಧಿಕಾರಿ ಚಂದ್ರಶೇಖರ್ಗೂ ಠಕ್ಕರ್ ನೀಡಿದ್ದಾರೆ.
ಕುಮಾರಸ್ವಾಮಿ ಟ್ವಿಟರ್ ಪೋಸ್ಟ್ನಲ್ಲಿ ಏನಿದೆ..?
ಅಪ್ರಬುದ್ಧ ಅವಿವೇಕಿಗಳಿಗೆ ಏನು ಹೇಳುವುದು. ಲೋಕಾಯುಕ್ತ ಎಸ್ಐಟಿ ಎಡಿಜಿಪಿ ಹುದ್ದೆಯಲ್ಲಿರುವ ಕಳಂಕಿತ, ಕ್ರಿಮಿನಲ್ ಪ್ರವೃತ್ತಿಯ ಅಧಿಕಾರಿ ಹೆಚ್‌ಡಿಕೆ ಅಧಿಕಾರಾವಧಿಯಲ್ಲಿ ಕೆಲಸ ಮಾಡಿರಲಿಲ್ಲವೇ? ಎನ್ನುವುದು ಈ ಸರ್ಕಾರದಲ್ಲಿರುವ ಕೆಲವರ ಪ್ರಶ್ನೆ. ನನ್ನ ಸರ್ಕಾರದಲ್ಲಿಯು ಈ ಅಧಿಕಾರಿ ಕೆಲಸ ಮಾಡಿದ್ದರು, ನಿಜ. ನಾನು ಇಲ್ಲವೆನ್ನುವುದಿಲ್ಲ. ಆದರೆ, ಊರು ಮೇಯೋಕೆ, ಸಿಕ್ಕಸಿಕ್ಕ ಕೊಚ್ಚೆಯಲ್ಲಿ ಉರುಳಾಡೋಕೆ. ಹೆದರಿಸಿ ಬೆದರಿಸಿ ಸುಲಿಗೆ ಮಾಡೋಕೆ ನಾನು ಬಿಟ್ಟಿರಲಿಲ್ಲ. ಹದ್ದುಬಸ್ತಿನಲ್ಲಿ ಇಟ್ಟು ಕೆಲಸ ಮಾಡಿಸಿದ್ದೆ. ನಿಮಗೆ ಅಂತಹ ಎದೆಗಾರಿಕೆ ಇದೆಯಾ @INCKarnataka ಸಚಿವರೇ?. ಕಳಂಕಿತ ಅಧಿಕಾರಿಗಳಿಂದ ರಕ್ಷಣೆ ಪಡೆದುಕೊಳ್ಳುವ ನಿಮ್ಮ ನಿಕೃಷ್ಟ ಸ್ಥಿತಿ ನನಗೆ ಬಂದಿಲ್ಲ, ಬರುವುದೂ ಇಲ್ಲ.
ಚಂದ್ರಶೇಖರ್ರನ್ನು ಅಮಾನತು ಮಾಡದಿದ್ದರೆ ಹೋರಾಟ
ಕೇಂದ್ರ ಸಚಿವ ಹೆಚ್ಡಿಕೆಯನ್ನು ಹಂದಿಗೆ ಹೋಲಿಕೆ ಮಾಡಿದ್ದಕ್ಕೆ ಜೆಡಿಎಸ್ ನಾಯಕರು, ಸಿಡಿದೆದ್ದಿದ್ದಾರೆ. ಆತ ಕುಮಾರಸ್ವಾಮಿ ಬಗ್ಗೆ ಬಳಸಿರುವ ಪದಗಳು ಖಂಡನೀಯ, ಆತನಿಗೆ ಏನಾದ್ರೂ ನೋವಾಗಿದ್ರೆ ಕೋರ್ಟ್ ಗೆ ಹೋಗಬಹುದಿತ್ತು. ಆದರೆ ಎರಡು ಬಾರಿ ಸಿಎಂ ಆದವರಿಗೆ ಈ ರೀತಿಯ ಪದಬಳಕೆ ಮಾಡಿರೋದು ಖಂಡನೀಯ. ರಾಜ್ಯ ಸರ್ಕಾರ ಇಂತಹ ಅಧಿಕಾರಿಗಳಿಗೆ ಕಡಿವಾಣ ಹಾಕುವ ಕೆಲಸ ಮಾಡದಿದ್ರೆ ಹೋರಾಟ ಮಾಡ್ತೀವಿ ಎಂದು ಮಾಜಿ ಶಾಸಕ ಸುರೇಶ್ಗೌಡ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: KRCL Recruitment; ವಿವಿಧ ಸರ್ಕಾರಿ ಹುದ್ದೆಗಳು.. ಸಂದರ್ಶನ ಮಾತ್ರ, ಪರೀಕ್ಷೆ ಇಲ್ಲ!
ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಬಳಸಿದಂತೆ ಪದಗಳು ಬಹಳ ಖಂಡನೀಯ. ಆತನಿಗೆ ಏನಾದರೂ ನೋವಾಗಿದ್ದರೇ ಕೋರ್ಟ್ಗೆ, ಪ್ರಾಧಿಕಾರಕ್ಕೆ ಹೋಗಬಹುದಿತ್ತು. ಇದೆಲ್ಲ ಬಿಟ್ಟು ಕೇಂದ್ರ ಸಚಿವರಿಗೆ ಅಲ್ಲದೇ 2 ಬಾರಿ ಸಿಎಂ ಆದವರನ್ನ ಯಾವುದೋ ಒಂದು ಪ್ರಾಣಿಗೆ ಹೋಲಿಸಿ ಮಾತನಾಡುವುದು ಬಹಳ ತಪ್ಪು. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ಇಂತವರಿಗೆ ಕಡಿವಾಣ ಹಾಕುತ್ತಿಲ್ಲ. ಈ ರೀತಿ ಅವಹೇಳನಕಾರಿ ಹೇಳಿಕೆ ವಿರುದ್ಧ ನಮ್ಮ ಪಕ್ಷ ಹೋರಾಟ ಮಾಡುತ್ತದೆ.
ಸುರೇಶ್ಗೌಡ, ಮಾಜಿ ಶಾಸಕ
ಮುಡಾ ಮೂಲಕ ಹೊತ್ತಿಕೊಂಡ ಈ ಕಿಡಿ ಈಗ ಮತ್ತೊಂದು ರೂಪವನ್ನೇ ಪಡೆದಿದೆ. ಹೆಚ್‌ಡಿಕೆ ಈ ಕದನವನ್ನ ಮತ್ತೊಂದು ಲೆವೆಲ್‌ಗೆ ಕೊಂಡೊಯ್ದಿದ್ದಾರೆ. ಈ ಜಟಾಪಟಿ ಮುಂದಿನ ದಿನಗಳಲ್ಲಿ ಮತ್ಯಾವ ಹಂತಕ್ಕೆ ಹೋಗುತ್ತೋ ನೋಡ್ಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ