newsfirstkannada.com

ಸರ್ಕಾರಿ ಬಸ್​​ನಲ್ಲಿ ಮಹಿಳೆಯರಿಗೆ ಫ್ರೀ.. ಖಾಸಗಿ ಬಸ್​​​, ಆಟೋದವರು ಏನು ಮಾಡಬೇಕು? ಎಂದು HDK ಪ್ರಶ್ನೆ

Share :

12-07-2023

    ಸರ್ಕಾರಿ ಬಸ್​​ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ

    ಶಕ್ತಿ ಯೋಜನೆಯಿಂದ ಆಟೋ, ಖಾಸಗಿ ಬಸ್​ಗೆ ಲಾಸ್​​

    ರಾಜ್ಯ ಸರ್ಕಾರದ ವಿರುದ್ಧ ಹೆಚ್​​ಡಿಕೆ ಭಾರೀ ಆಕ್ರೋಶ..!

ಬೆಂಗಳೂರು: ಶಕ್ತಿ ಯೋಜನೆಯಿಂದ ಖಾಸಗಿ ಬಸ್​​ ಮಾಲೀಕರು, ಆಟೋ ಚಾಲಕರಿಗೆ ಭಾರೀ ತೊಂದರೆ ಆಗುತ್ತಿದೆ ಎಂದು ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಇಂದು ವಿಧಾನಸಭೆ ಕಲಾಪದಲ್ಲಿ ಮಾತಾಡಿದ ಹೆಚ್​​.ಡಿ ಕುಮಾರಸ್ವಾಮಿ, ಶಕ್ತಿ ಯೋಜನೆ ಅಡಿಯಲ್ಲಿ ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿದ್ದೀರಿ. ಇದರ ಬಗ್ಗೆ ನಮಗೇನು ತಕಾರರು ಇಲ್ಲ. ಆದರೆ, ಇದರಿಂದ ನಷ್ಟ ಅನುಭವಿಸುತ್ತಿರೋ ಖಾಸಗಿ ಬಸ್​​ ಮಾಲೀಕರು, ಆಟೋ ಚಾಲಕರು ಏನು ಮಾಡಬೇಕು? ನಾವು ಇವರ ಬಗ್ಗೆಯೂ ಯೋಚಿಸಬೇಕು ಎಂದರು.

ಕಳೆದ ಜೂನ್​​​ ತಿಂಗಳಿನಿಂದಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿದೆ. ಈ ಸ್ಕೀಮ್​​ ಅಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೂ ಸರ್ಕಾರಿ ಬಸ್​ನಲ್ಲಿ ಫುಲ್​ ಫ್ರೀ. ಇಡೀ ರಾಜ್ಯದಲ್ಲಿ ಮಹಿಳೆಯರು ಎಲ್ಲಿಂದ ಎಲ್ಲಿಗೆ? ಬೇಕಾದರೂ ಹೋಗಬಹುದು. ರಾಜ್ಯ ಸರ್ಕಾರದ ಈ ಮಹತ್ವದ ಯೋಜನೆಗೆ ಮಹಿಳೆಯರಿಂದಲೂ ಅದ್ಭುತ ಸ್ಪಂದನೆ ಸಿಗುತ್ತಿದೆ.

ಸರ್ಕಾರದ ವಿರುದ್ಧ ಆಟೋ, ಖಾಸಗಿ ಬಸ್​​ ಮಾಲೀಕರು ಆಕ್ರೋಶ

ಇನ್ನೊಂದೆಡೆ ಸರ್ಕಾರಿ ಬಸ್​ನಲ್ಲಿ ಮಹಿಳೆಯರಿಗೂ ಫ್ರೀ ಎಂದು ಘೋಷಿಸಿದ ಬೆನ್ನಲ್ಲೇ ಸರ್ಕಾರದ ವಿರುದ್ಧ ಆಟೋ ಚಾಲಕರು, ಖಾಸಗಿ ಬಸ್​ ಮಾಲೀಕರು ಬೀದಿಗೆ ಇಳಿದಿದ್ದಾರೆ. ಈಗ ಇವರ ಪರವಾಗಿ ಹೆಚ್.ಡಿ ಕುಮಾರಸ್ವಾಮಿ ವಿಧಾನಸಭಾ ಕಲಾಪದಲ್ಲಿ ಧನಿ ಎತ್ತಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಬಸ್​​ನಲ್ಲಿ ಮಹಿಳೆಯರಿಗೆ ಫ್ರೀ.. ಖಾಸಗಿ ಬಸ್​​​, ಆಟೋದವರು ಏನು ಮಾಡಬೇಕು? ಎಂದು HDK ಪ್ರಶ್ನೆ

https://newsfirstlive.com/wp-content/uploads/2023/07/HDK_123.jpg

Load More