newsfirstkannada.com

Breaking: ಹೆಚ್​ಡಿಕೆ, ಬೊಮ್ಮಾಯಿ ದಿಢೀರ್​ ಜಂಟಿ ಸುದ್ದಿಗೋಷ್ಠಿ; ಏನ್​ ಹೇಳಿದ್ರು ಬಿಜೆಪಿ ಮತ್ತು ಜೆಡಿಎಸ್​ ನಾಯಕರು?

Share :

21-07-2023

    ನಾವು ಬಜೆಟ್ ಮೇಲಿನ ಚರ್ಚೆಗೆ ಸಿದ್ಧತೆ ನಡೆಸಿಕೊಂಡಿದ್ವಿ

    ನಮ್ಮನ್ನ ವಿಶ್ವಗುರು ಅಂತಿದ್ದಾರೆ ನೀವೇನು ರೌಡಿ ಗುರುಗಳಾ?

    ದೇವೇಗೌಡರ ಮೇಲೆ ಮಾತೆ ಆಡದಂತೆ ಕೇಸ್ ಹಾಕಿದ್ರು

ಮಾಜಿ ಸಿಎಂ ಹೆಚ್​ಡಿಕೆ ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿವರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಹೆಚ್​ ಡಿ ಕುಮಾರಸ್ವಾಮಿಯವರು, ಕಳೆದ ಮೂರು ದಿನಗಳ ಕಲಾಪ ಯಾವ ರೀತಿ ನಡೆಯುತ್ತಿರುವುದನ್ನ ನೀವು ಗಮನಿಸಿದ್ದೀರ. ಸದನ ಮೌಲ್ಯಗಳನ್ನು ಬೊಮ್ಮಾಯಿಯವರು ನಿಮ್ಮ ಮುಂದೆ ನೀಡಿದ್ದಾರೆ. ಎರಡು ನಿಮಿಷಗಳ ಬಗೆಹರಿಯುವ ಸಮಸ್ಯೆ ಇದು ಎಂದು ಹೇಳಿದ್ದಾರೆ.

ಮದನ್ ಗೋಪಾಲ್ ಎಂಬ ಹಿರಿಯ ನಿವೃತ್ತ ಅಧಿಕಾರಿ ಇವತ್ತು ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಪತ್ರ ಬರೆದಿದ್ದಾರೆ. ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಆ ದಿನ ಮುಂದೆ ಈ ರೀತಿ ಆಗಲ್ಲವೆಂದು ಸರ್ಕಾರ ಹೇಳಬಹುದಿತ್ತು. ಸ್ವೀಕರ್ ಸಹ ಆಡಳಿತ ಪಕ್ಷದ ಸಲಹೆ ಮೇರೆಗೆ ಬಿಗಿ ನಿಲುವು ತೆಗೆದುಕೊಂಡು ವಿರೋಧ ಪಕ್ಷಗಳ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ಮಧ್ಯಾನ್ನ ಊಟಕ್ಕೂ ಬಿಡದೆ ಮಕ್ಕಳಿಗೆ ಶಿಕ್ಷೆ ಕೊಟ್ಟ ಹಾಗೆ ಮಾಡಿದ್ರೆ ಒಪ್ಪಿಕೊಳ್ಳಲು ಸಾಧ್ಯನಾ. ದೆಹಲಿಯಲ್ಲಿ ಕಾಂಗ್ರೆಸ್ ಸಹ ಪ್ರತಿಭಟನೆ ಮಾಡ್ತಾ ಇದ್ದಾರೆ. ಎನ್ ಮಾಡ್ತಾ ಇದ್ದಾರೆ. ಹಾಲಿ ಸಿಎಂ ಪೇಪರ್ ಎಸೆದಿಲ್ವಾ?. ಧರ್ಮೆಗೌಡರಿಗೆ ಎನು ಮಾಡಿದ್ರು. ನಾವು ಬಜೆಟ್ ಮೇಲಿನ ಚರ್ಚೆ ಗೆ ಸಿದ್ಧತೆ ನಡೆಸಿಕೊಂಡಿದ್ವಿ.

ಬಜೆಟ್​ನಲ್ಲಿ ನರೇಂದ್ರ ಮೋದಿ ವಿರುದ್ಧ ಆರೋಪಕ್ಕೆ ಬಳಸಿಕೊಂಡಿದ್ದಾರೆ. ಯಾರು ನೀಡದಾ ಬಜೆಟಾ ಇದು?. ಗ್ಯಾರಂಟಿ ಗಳಿಂದ ಹೊಟ್ಟೆ ಉರಿ ಅಂದ್ರಿ. ಕೃಷಿ ಸನ್ಮಾನ್ ಯೋಜನೆ ತೆಗೆದು ಹಾಕಿದ್ದಾರೆ. 57 ಲಕ್ಷ ಜನಕ್ಕೆ ಮಾತ್ರ ಸಿಕ್ತಾ ಇತ್ತು. ಅದಕ್ಕೆ ನಾವು ತೆಗೆದು ಹಾಕಿದ್ದೀವಿ ಅಂದ್ರಿ. ರೈತ ಜೀವನ ನೀವು ಹಾಳು ಮಾಡ್ತಾ ಇದ್ದೀರಾ. ಮಳೆ ಬಂದಿಲ್ಲ, ಬರಗಾಲ ಘೋಷಣೆ ಇನ್ನು ಕಾಯಬೇಕಾ. ಕುಡಿಯುವ ನೀರಿನ ಸಮಸ್ಯೆ ಇದೆ ಎಂದಿದ್ದಾರೆ.

ನಂತರ ಮಾತು ಮುಮದುವರಿಸುತ್ತಾ ಬಜೆಟ್ ಮೇಲೆ ಮಾತನಾಡಲು ಸಿದ್ದತೆ ಮಾಡಿಕೊಂಡಿದ್ವಿ. ಹೊಸ ಶಾಸಕರು ಅವಕಾಶ ಅಂತೆ. ಎರಡು ಎರಡು ನಿಮಿಷ ಮಾತ್ರ ಕೋಡೋದು. ಬಿಜೆಪಿ ರಾಜ್ಯ ಸರ್ಕಾರ ರೈತರಿಗೆ 4 ಸಾವಿರ ,ಕೇಂದ್ರ 6 ಸಾವಿರ ನೀಡುತ್ತಿತ್ತು. ಅದನ್ನು ತೆಗೆದುಹಾಕಿದ್ರು. ಕೇವಲ 52 ಲಕ್ಷಕ್ಕೆ ತಲುಪಿತ್ತು ಎಂದು ಕಾರಣ ನೀಡಿದ್ರು. ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕಾಗಿತ್ತು. ಅನ್ನದಾತನ ಜೀವನ ನಾಶ ಮಾಡುವ ಕೆಲಸ ಮಾಡಿದ್ದೀರಾ. ಕೃಷಿ ವಲಯದ ಬಗ್ಗೆ ಹೇಗೆ ಗಮನ ಕೊಡ್ತಿದ್ದಾರೆ ನೋಡ್ತಿದ್ದೇವೆ. ಇನ್ನು ಕೇಂದ್ರಕ್ಕೆ ಮೆಮೊರೆಂಡಮ್ ಕೊಡುವೆ ಕೆಲಸ ಮಾಡಿಲ್ಲ ಎಂದು ಹೆಚ್​ಡಿಕೆ ಹೇಳಿದ್ದಾರೆ

ಮಾಜಿ ಸಿಎಂ ಹೆಚ್​ಡಿಕೆ ಮಾತನಾಡುತ್ತಾ ಬಿತ್ತನೆ ಕಾರ್ಯ ನಡೆದಿಲ್ಲ. ನಮ್ಮನ್ನ ವಿಶ್ವಗುರು ಅಂತಿದ್ದಾರೆ ನೀವೇನು ರೌಡಿ ಗುರುಗಳಾ?.  ನೈಸ್ ಯೋಜನೆಯನ್ನು ಟೇಕ್ ಓವರ್ ಮಾಡಿ ಅಂತ ಜಯಚಂದ್ರ ಹೇಳಿದ್ದಾರೆ. ಅದನ್ನು ನಾನು ಅವರನ್ನು ಶ್ಲಾಘನೆ ಮಾಡ್ತೀನಿ. ನೈಸ್ ಸರ್ಕಾರ ವಿರುದ್ಧ ಎಲ್ಲ ರೀತಿ ಮಾಧುಸ್ವಾಮಿ ಅವರು ಎರಡು ಲಕ್ಷ ದಂಡ ಹಾಕಿಸಿಕೊಂಡರು. ನೈಸ್ ಅಕ್ರಮಗಳನ್ನು ನಿರಂತರ ವಾದ ಮಾಡಿ ಗೆದ್ದುಕೊಂಡು ಬಂದಿದ್ದರು. ಈ ಜಮೀನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದಿದ್ದಾರೆ.

ಬಳಿಕ ಮಾತನಾಡುತ್ತಾ, ದೇವೆಗೌಡರ ಮೇಲೆ ಮಾತೆ ಆಡದಂತೆ ಕೇಸ್ ಹಾಕಿದ್ರು. ಬೊಮ್ಮಾಯಿಯವರು ನಿರಂತರವಾಗಿ ಕೋರ್ಟ್‌ನಲ್ಲಿ ಗೆದ್ದುಕೊಂಡು ಬಂದಿದ್ರು. ಸರ್ಕಾರದ ಪರವಾಗಿ ಕೋರ್ಟ್ ಆದೇಶ ಬರುವಂತೆ ವಾದ ಮಾಡಿ ಕೊಡುಗೆ ನೀಡುವ ಕೆಲಸ ಬೊಮ್ಮಾಯಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನಾವು ಯಾಕೆ ಟೋಲ್ ಕಟ್ಟಬೇಕು ಎಂದು ಸಾರ್ವಜನಿಕರು ಕೂಡ ಈಗ ಬೈತಿದ್ದಾರೆ. ಟೋಲ್ ಕಲೆಕ್ಷನ್ ಆಗಿರುವ 1325 ಕೋಟಿಯನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಟ್ಯಾಕ್ಸ್ ಹಾಕ್ತಿವಿ ಅಂತಿರಲ್ಲ ಇದನ್ನೆಲ್ಲ ಯಾಕೆ ಬಿಟ್ಟಿದ್ದೀರಾ ಎಂದು ಸುದ್ದಿಗೋಷ್ಠಿಯಲ್ಲಿ ಹೆಚ್​​ಡಿಕೆ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ಮೈಸೂರು ಹೈವೆ ಮಾಡಬೇಕು ಅಂತ ಹೇಳಿ ಒಪ್ಪಂದ ನಿಗದಿ ಮಾಡಿದ ಜಮೀನುಗಿಂತ ಹೆಚ್ಚು ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ಹೆಚ್ಚುವರಿ ಜಾಮೀನು ಸ್ವಾಧೀನ ಮಾಡಿಕೊಂಡಿದ್ದಾರೆ ಅದನ್ನು ಲೆಕ್ಕ ಹಾಕಬೇಕು. ಹೊಸದಾಗಿ ರೈತರಿಗೆ ಈಗ ಮತ್ತೆ ನೋಟಿಸ್ ನೀಡ್ತಾ ಇದ್ದಾರೆ ಎಂದು ಹೇಳಿದ್ದಾರೆ.

ನಂತರ ಮಾತನಾಡಿದ ಅವರು, ನನ್ನ ಹತ್ರ ಹಲವಾರು ರೈತರು ಬಂದಿದ್ದರು. ಹೆಚ್ಚುವರಿ ಲ್ಯಾಂಡ್ ವಾಪಸ್ ಪಡೆಯೋಕೆ ನಮ್ಮ ಸರ್ಕಾರದಲ್ಲಿ ತೀರ್ಮಾನ ಮಾಡ್ತಾ ಇದ್ದೀವಿ. ಒಪ್ಪಂದ ಷರತ್ತು ಉಲ್ಲಂಘನೆ ಮಾಡಿದ್ದಾರೆ. ಅದಕ್ಕೆ ನಾನು ಸರ್ಕಾರಕ್ಕೆ ಹೆಚ್ಚುವರಿ ಭೂಮಿ ವಾಪಸ್ ಪಡೆಯಬೇಕು. ಟೋಲ್ ಹೆಚ್ಚು ಸಂಗ್ರಹ ಮಾಡಿರುವುದನ್ನು ಆಡಿಟ್ ಮಾಡಿ ವಾಪಸ್ ಪಡೆಯಬೇಕು. ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರದ ನಿಲುವು ಬಹಳ ಸ್ಪಷ್ಟವಾಗಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಹೆಚ್​ಡಿಕೆ, ಬೊಮ್ಮಾಯಿ ದಿಢೀರ್​ ಜಂಟಿ ಸುದ್ದಿಗೋಷ್ಠಿ; ಏನ್​ ಹೇಳಿದ್ರು ಬಿಜೆಪಿ ಮತ್ತು ಜೆಡಿಎಸ್​ ನಾಯಕರು?

https://newsfirstlive.com/wp-content/uploads/2023/07/hdk-6.jpg

Load More