ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವರ್ಗಾವಣೆಯ ದಂಧೆ ಆರೋಪ
ಅವರು ರಾಜಕಾರಣ ಮಾಡಲಿ, ನಮ್ಮ ರಾಜಕಾರಣ ಮಾಡುತ್ತೇವೆ!
ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಶಿವಕುಮಾರ್ ತಿರುಗೇಟು
ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವರ್ಗಾವಣೆಯ ದಂಧೆ ಆರೋಪ ಮಾಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇವತ್ತು ಪೆನ್‌ಡ್ರೈವ್ ತಂದು ಅಚ್ಚರಿ ಮೂಡಿಸಿದ್ದಾರೆ. ದಾಖಲೆ ಕೇಳುತ್ತಿದ್ದರಲ್ವಾ..? ಅದನ್ನೇ ತಂದಿದ್ದೀನಿ. ವರ್ಗಾವಣೆ ದಂಧೆಗೆ ಸಂಬಂಧಿಸಿದ ಆಡಿಯೋ ಪೆನ್ಡ್ರೈವ್ನಲ್ಲಿದೆ. ವರ್ಗಾವಣೆ ದಂಧೆಯ ಆಡಿಯೋ ಇದರಲ್ಲಿದೆ ಸಮಯ ಬಂದಾಗ ಎಲ್ಲವೂ ಹೊರಗೆ ತರುತ್ತೇನೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್‌ಡಿಕೆ ಕೆಂಡಾಮಂಡಲರಾಗಿದ್ದಾರೆ.
ನಿನ್ನೆ ಕೂಡ ಸಚಿವ ಕೆ.ಜೆ ಜಾರ್ಜ್ ಅವರ ಇಂಧನ ಇಲಾಖೆಯಲ್ಲಿ 2 ವರ್ಗಾವಣೆ ಆಗಿದೆ. ಒಂದು ವರ್ಗಾವಣೆಗೆ 10 ಕೋಟಿ ಲಂಚ ಪಡೆದಿದ್ದಾರೆ. ವರ್ಗಾವಣೆ ಆಗಿ ಹೋದವನ ದಿನದ ಆದಾಯ 50 ಲಕ್ಷ ರೂಪಾಯಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಮಾಡಿದ್ದರು. ಸರ್ಕಾರದ ವಿರುದ್ಧ ಹೆಚ್‌ಡಿಕೆ ಸಿಡಿಸಿದ್ದ ಈ ಬಾಂಬ್ ಸಂಚಲನ ಸೃಷ್ಟಿಸಿತ್ತು. ಹೆಚ್‌ಡಿಕೆ ಆರೋಪದ ಬಳಿಕ ಕಾಂಗ್ರೆಸ್ ನಾಯಕರು ಹಿಟ್ ಅಂಡ್ ರನ್ ಮಾಡೋದು ಬೇಡ. ತಾಕತ್ ಇದ್ರೆ ದಾಖಲೆಗಳನ್ನ ಹೊರಗೆ ಬಿಡಲಿ ಎಂದು ಸವಾಲು ಹಾಕಿದ್ದರು. ಈ ತಾಕತ್ತಿನ ಸವಾಲಿಗೆ ಗರಂ ಆಗಿದ್ದ ಹೆಚ್‌ಡಿಕೆ ಇಂದು ಸದನಕ್ಕೆ ಪೆನ್ ಡ್ರೈವ್ ಸಮೇತ ಆಗಮಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ನಾನು ರಾಜಕೀಯಕ್ಕೆ ಬರುವ ಮುನ್ನ ಬಾಟಲ್ ಕೊಡ್ತಿರ್ಲಿಲ್ಲ. ಹಳ್ಳಿಯಲ್ಲಿ ಬ್ಲೂ ಫಿಲಂ ತೋರಿಸಿಕೊಂಡು ಇದ್ದವನಲ್ಲ. ನನ್ನ ಆಸ್ತಿ ಬಗ್ಗೆ ಇವರದ್ದೇ ಸರ್ಕಾರ ತನಿಖೆ ಮಾಡಿಸಲಿ. ನಮ್ಮ ಕಾಲದ ವರ್ಗಾವಣೆಯನ್ನೂ ತನಿಖೆ ಮಾಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ