newsfirstkannada.com

ಸಿದ್ದರಾಮಯ್ಯ ಮೊಮ್ಮಗನನ್ನು ರಾಜಕೀಯಕ್ಕೆ ತರ್ತೀನಿ ಎಂದಿದ್ದಾರೆ, ಈ ಬಗ್ಗೆ ಯಾರೂ ಮಾತಾಡಲ್ಲ- ಕುಮಾರಸ್ವಾಮಿ

Share :

25-05-2023

  ಸಿದ್ದರಾಮಯ್ಯ ಮೊಮ್ಮಗನನ್ನು ರಾಜಕೀಯಕ್ಕೆ ತರ್ತೀನಿ

  ಈ ಬಗ್ಗೆ ಯಾರೂ ಮಾತಾಡಲ್ಲ- ಕುಮಾರಸ್ವಾಮಿ

  ಚುನಾವಣೆಯ ಸೋಲಿನ ಆತ್ಮಾವಲೋಕನ ಸಭೆ

ಬೆಂಗಳೂರಲ್ಲಿ ಜೆಡಿಎಸ್​ ಇವತ್ತು ವಿಧಾನಸಭೆ ಚುನಾವಣೆಯ ಸೋಲಿನ ಆತ್ಮಾವಲೋಕನ ಸಭೆ ನಡೆಸಿತು. ಈ ವೇಳೆ ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ತಮ್ಮ ಮೊಮ್ಮಗನನ್ನು ರಾಜಕೀಯವಾಗಿ ತರುವುದಾಗಿ ಹೇಳಿದ್ದಾರೆ. ಇದರ ಬಗ್ಗೆ ಯಾರೂ ಮಾತಾಡಲ್ಲ. ಗೌಡರ ಕುಟುಂಬ ಅಂತ ಅಪಪ್ರಚಾರ ಮಾಡ್ತಾರೆ. ಎಲ್ಲವನ್ನೂ ನನ್ನ ತಲೆಗೆ ಕಟ್ಟಬೇಡಿ. ಗೌಡರ ಕುಟುಂಬ ಎಂಬ ಕಪ್ಪುಚುಕ್ಕಿ ತರಬೇಡಿ. ಲೋಕಸಭಾ ಚುನಾವಣೆ ನಂತರ ರಾಜ್ಯದ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಭವಿಷ್ಯ ನುಡಿದರು.

ಬೆಂಗಳೂರು ಪರಿಸ್ಥಿತಿ ಏನಾಗಿದೆ? ಮಳೆಯಿಂದ ಎರಡು ಸಾವಾಗಿದೆ. ಗುಂಡಿ ಮುಚ್ಚಲು 2 ಸಾವಿರ ಕೋಟಿ ರೂಪಾಯಿ ಮಾಡ್ತಾರೆ. ಚುನಾವಣಾ ಸಮಯದಲ್ಲಿ ಟಿಕೆಟ್ ತಗೊಂಡು ಮ್ಯಾಚ್ ಫಿಕ್ಸಿಂಗ್ ಮಾಡ್ಕೋತಿರಿ. ಹೆಬ್ಬಾಳದಲ್ಲಿ ಜನ ಅಪಾರ್ಟ್ ಮೆಂಟ್ ಬಿಟ್ಟು ಬಾಡಿಗೆ ಮನೆಗೆ ಹೋಗ್ತಿದ್ದಾರೆ. ಈ ಸಮಸ್ಯೆಗಳನ್ನು ಇಟ್ಕೋಂಡು ಹೋರಾಟ ರೂಪಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದರಾಮಯ್ಯ ಮೊಮ್ಮಗನನ್ನು ರಾಜಕೀಯಕ್ಕೆ ತರ್ತೀನಿ ಎಂದಿದ್ದಾರೆ, ಈ ಬಗ್ಗೆ ಯಾರೂ ಮಾತಾಡಲ್ಲ- ಕುಮಾರಸ್ವಾಮಿ

https://newsfirstlive.com/wp-content/uploads/2023/05/HDK-2-2.jpg

Load More