ಇನ್ಮುಂದೆ ನನ್ನನ್ನು ಸ್ವಲ್ಪ ಕನಿಕರದಿಂದಲೇ ನೋಡಿ ಎಂದ ಕುಮಾರಸ್ವಾಮಿ
ವಾಲ್ಮೀಕಿ ಜಯಂತಿ ದಿನವೇ ನನ್ನ ಎಡಭಾಗ ಸ್ವಾಧೀನ ಕಳೆದುಕೊಂಡಿತ್ತು
64 ವರ್ಷದ ಜೀವನದಲ್ಲಿ 4 ಬಾರಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದ HDK
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮನೆಗೆ ತೆರಳುವ ಮುನ್ನ ಅಪೋಲೊ ಆಸ್ಪತ್ರೆಯಲ್ಲೇ ಸುದ್ದಿಗೋಷ್ಠಿ ನಡೆಸಿದ ಹೆಚ್‌ಡಿಕೆ ಅವರು ಆಘಾತಕಾರಿ ವಿಚಾರಗಳನ್ನು ಬಹಿರಂಗ ಪಡಿಸಿದರು. ನನಗೆ ಸ್ಟ್ರೋಕ್ ಆಗಿರೋದು ಇದೇ ಮೊದಲಲ್ಲ. ಈ ಹಿಂದೆಯೂ ನಾನು ಪಾರ್ಶ್ವವಾಯುಗೆ ತುತ್ತಾಗಿದ್ದೆ. ಆ ಭಗವಂತ 64 ವರ್ಷದಲ್ಲಿ ನನಗೆ 3ನೇ ಜನ್ಮ ಕೊಟ್ಟಿದ್ದಾನೆ. ಇನ್ಮುಂದೆ ರಾಜ್ಯದ ಜನತೆ ಹಾಗೂ ಜೆಡಿಎಸ್ ಕಾರ್ಯಕರ್ತರು ನನ್ನ ಸ್ವಲ್ಪ ಕನಿಕರದಿಂದ ನೋಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ‘ಗೋಲ್ಡನ್ ಅವರ್‌ನಲ್ಲಿ ಎಚ್ಚೆತ್ತುಕೊಳ್ಳದಿದ್ರೆ ಪರ್ಮನೆಂಟ್ ಬೆಡ್ ಮೇಲೆ ಮಲಗುತ್ತಿದ್ದೆ’- ಹೆಚ್.ಡಿ ಕುಮಾರಸ್ವಾಮಿ
2ನೇ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನನಗೆ ಮೊದಲಿಗೆ ಪಾರ್ಶ್ವವಾಯು ಆಗಿತ್ತು. ಅಂದು ವಾಲ್ಮೀಕಿ ಜಯಂತಿ ಆಚರಣೆ ಇತ್ತು. ಟಿವಿಯಲ್ಲಿ ಒಂದು ಸ್ಟೋರಿ ನೋಡ್ತಾ ಇದ್ದೆ. ಕರ್ನಾಟಕವನ್ನು ಕತ್ತಲತ್ತ ತಳ್ಳಿದ ಕುಮಾರಣ್ಣ ಅಂತಾ ಬರ್ತಾ ಇತ್ತು. ಅದನ್ನು ನೋಡಿದ ತಕ್ಷಣ ಮನಸಿಗೆ ಆಘಾತವೇ ಆಯಿತು. ಇಷ್ಟೆಲ್ಲಾ ಹೋರಾಟ ನಡೆಸಿದ್ರೂ ನಿಂದನೆಗೆ ಗುರಿಯಾಗಿದ್ದೇನೆ ಎಂದು ನೋವಾಗಿತ್ತು. ವಾಲ್ಮೀಕಿ ಜಯಂತಿಯಂದೇ ನನ್ನ ಎಡಭಾಗ ಸ್ವಾಧೀನ ಕಳೆದುಕೊಂಡಿದ್ದೆ. ಅವತ್ತಿನ ದಿನ ತಕ್ಷಣವೇ ವೈದ್ಯರು ಚಿಕಿತ್ಸೆ ಕೊಟ್ಟಿದ್ದರಿಂದ ಅವತ್ತೂ ಸಹ ನಾನು ಗುಣಮುಖನಾಗಿದ್ದೆ. ಕೇವಲ 1 ಗಂಟೆ ಒಳಗೆ ಸರಿಯಾದ ಚಿಕಿತ್ಸೆ ಪಡೆದಿದ್ದರಿಂದ ಗುಣಮುಖನಾದೆ ಎಂದು ಹೆಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
TVಲಿ ಬರ್ತಿದ್ದ ಸ್ಟೋರಿ ನೋಡಿ ನನ್ಗೆ ಹಾರ್ಟ್ ಅಟ್ಯಾಕ್ ಆಯ್ತು..@hd_kumaraswamy#HDKumaraswamy #ApolloHospital #HDK #Discharge #Bangalore #NewsFirstKannada pic.twitter.com/iuSCm8Z2CO
— NewsFirst Kannada (@NewsFirstKan) September 3, 2023
ಕಳೆದ 5 ದಿನಗಳಲ್ಲಿ ಹಲವು ಆತಂಕ, ಅನುಕಂಪ ಭಯದ ವಾತಾವರಣವಿತ್ತು. ನನ್ನ 64 ವರ್ಷದ ಜೀವನದಲ್ಲಿ 4 ಬಾರಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ನನಗೆ ಇಂದೂ ಪುನರ್ಜನ್ಮವೇ ಸಿಕ್ಕಿದೆ ಎಂದ ಹೆಚ್.ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಕಾರ್ಯಕರ್ತರು, ಮುಖಂಡರಿಗೂ ಒಂದು ಮನವಿ ಮಾಡಿದರು. ನಿಮ್ಮಗಳ ಶುಭಾ ಹಾರೈಕೆಗಳಿಂದ ಮತ್ತೆ ಹೊರಗೆ ಬರ್ತಿರುವೆ. ನನ್ನ ಮುಂದಿನ ಪರಿಸ್ಥಿತಿಗಳನ್ನ ಗಮನಿಸಿ ಎಂದು ಅತ್ಯಂತ ಸೂಕ್ಷ್ಮವಾಗಿ ವೈದ್ಯರು ಹೇಳಿದ್ದಾರೆ. ನನ್ನ ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕಿದೆ. ಇನ್ನೂ ಸ್ವಲ್ಪ ಕಾಲ ವಿಶ್ರಾಂತಿಯಲ್ಲಿರಲು ಬಯಸಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಪ್ರತಿ ಕುಟುಂಬಕ್ಕೆ ನನ್ನ ವಂದನೆಗಳು. ಇನ್ಮುಂದೆ ನನ್ನನ್ನು ಸ್ವಲ್ಪ ಕನಿಕರದಿಂದಲೇ ನೋಡಿ ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ