newsfirstkannada.com

KSRTC ಚಾಲಕನ ಆತ್ಮಹತ್ಯೆ ಯತ್ನದ ಹಿಂದೆ ಚಲುವರಾಯಸ್ವಾಮಿ ರಾಜಕೀಯ; ಸದನದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಕೆಂಡಾಮಂಡಲ

Share :

Published July 6, 2023 at 2:19pm

Update July 6, 2023 at 2:24pm

    ನೀವು ಏನ್ ಹೋಮ್ ಮಿನಿಸ್ಟರ್ ಏನ್ರೀ? ಕೂತ್ಕೊಳ್ರೀ ಆಯ್ತು..

    ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿನೇ ಟಾರ್ಗೆಟ್‌

    ರಾಜಕೀಯ ಮಾಡಲು KSRTC ಚಾಲಕನ ವರ್ಗಾವಣೆ ಆರೋಪ

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿ ಸಂಭವಿಸಿದ KSRTC ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದೆ. ಇದೇ ವಿಚಾರ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಸದನದಲ್ಲಿ ಗದ್ದಲ, ವಾಕ್ಸಮರಕ್ಕೆ ಕಾರಣವಾಗಿದೆ. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ನಾಯಕರು ಸರ್ಕಾರವನ್ನು ಕಟ್ಟಿಹಾಕಲು ಪ್ರಯತ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಹೆಚ್‌.ಡಿ ಕುಮಾರಸ್ವಾಮಿ ಅವರು ಆಡಳಿತ ಪಕ್ಷದ ನಾಯಕರ ಜೊತೆ ಏರು ಧ್ವನಿಯಲ್ಲಿ ವಾಗ್ಯುದ್ಧ ನಡೆಸಿದ್ದಾರೆ.

ಸದನದಲ್ಲಿ ಸರ್ಕಾರದ ಮೇಲೆ ರೊಚ್ಚಿಗೆದ್ದ ಕುಮಾರಸ್ವಾಮಿ ಅವರು ನಾವು ಆರೋಪ ಮಾಡಬೇಕೆಂದು ಮಾಡ್ತಿಲ್ಲ. KSRTC ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ರಾಜಕೀಯ ಬೆರೆತಿದೆ. 24 ಗಂಟೆಯಾದ್ರೂ ಇನ್ನೂ‌ ಎಫ್‌ಐಆರ್ ಹಾಕಿಲ್ಲ. ನಾನು ಅಧಿಕಾರಿಗಳಿಗೆ ಫೋನ್ ಮಾಡಿದ್ದೆ. ಇನ್ನೂ ಸತ್ತಿಲ್ಲ ಸಾರ್, ಅದಕ್ಕೆ ಕೇಸ್‌ ಹಾಕಿಲ್ಲ ಅಂದ್ರು. ಹಂಡಿಬಾಗ್ ಒಬ್ಬ ಶಾಲಾ ಶಿಕ್ಷಕರ ಮಗ, ಬಡವರು. ಅಂತಹವರು ಇಂತಹ ವ್ಯವಸ್ಥೆಗೆ ಬಲಿಯಾಗಬಾರದು.

KSRTC ಡಿಪೋದ ಸಿಬ್ಬಂದಿ ನೀಡಿರುವ ಹೇಳಿಕೆಗಳು ನನ್ನ ಬಳಿ ಇದೆ. ಕೆಲಸಕ್ಕೆ ಹೋದಾಗ ಇಟಿಎಂ ಯಂತ್ರ ವಾಪಸ್ ಕೇಳಿದ್ದಾರೆ. ಎಡಬ್ಲ್ಯೂ ಎಸ್ ಅಧಿಕಾರಿ ಮಂಜುನಾಥ್ ನಿನ್ನನ್ನು ಮದ್ದೂರಿಗೆ ವರ್ಗಾಯಿಸಿದ್ದೇವೆ ಅಂತಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರಿಂದ ರಾಜಕೀಯ ಪ್ರೇರಿತ ವರ್ಗಾವಣೆ ನಡೆಸಲಾಗಿದೆ. ರಾಜಕೀಯ ಮಾಡಬೇಕಾದರೆ ರಾಜಕೀಯ ಮಾಡೋಣ. ಆದರೆ ಪಂಚಾಯ್ತಿ ಸ್ಥಾನಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ರೀತಿ ಟಾರ್ಗೆಟ್ ಮಾಡಿದ್ರೆ ಏನು ಸಾಧನೆ ಮಾಡ್ತೀರಿ. ಆ ವ್ಯಕ್ತಿ ಸತ್ತ ಮೇಲೆ ನೀವು ಚರ್ಚೆಗೆ ಕೊಡ್ತೀರಾ? ಎಫ್ಐಆರ್ ಬಗ್ಗೆ ಕೇಳಿದ್ರೆ ಇನ್ನೂ ಸತ್ತಿಲ್ಲ ಸರ್ ಅದಕ್ಕಾಗಿ ಎಫ್ಐಆರ್ ಆಗಿಲ್ಲ ಅಂತಾರೆ ಅಧಿಕಾರಿಗಳು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇದೇ ವೇಳೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಪ್ರಕರಣವನ್ನು ಉದಾಹರಿಸಿದ ಕುಮಾರಸ್ವಾಮಿ, ಈಶ್ವರಪ್ಪ ಹೆಸರು ವಾಟ್ಸಾಪ್‌ನಲ್ಲಿ ಬಂತು ಅಂತಾ ರಾಜೀನಾಮೆ ಪಡೆದಿಲ್ವಾ? ಎಂದರು. ಈ ವೇಳೆ ಸಚಿವ ಚೆಲುವರಾಯಸ್ವಾಮಿ ಬೆನ್ನಿಗೆ ಶಾಸಕ ರಮೇಶ್ ಬಂಡಿ ಸಿದ್ದೇಗೌಡ, ನರೇಂದ್ರ ಸ್ವಾಮಿ ನಿಲ್ಲುತ್ತಾರೆ. ಇವನು ಬಸ್ ಡ್ರೈವರ್ ಕಮ್ ಕಂಡಕ್ಟರ್. ಯಾವ ಕಾರಣಕ್ಕೆ ಅವ್ರು ವರ್ಗಾವಣೆ ಮಾಡಿದ್ರು. ಇದನ್ನ ಮೊದಲು ಹೇಳಿ ಸರ್ ಎಂದು ರಮೇಶ್ ಬಂಡಿ ಸಿದ್ದೇಗೌಡ ಕೇಳುತ್ತಾರೆ. ಆಗ ಕುಮಾರಸ್ವಾಮಿ ಅವರು ನೀವು ಏನ್ ಹೋಮ್ ಮಿನಿಸ್ಟರ್ ಏನ್ರೀ? ಕೂತ್ಕೊಳ್ರೀ ಆಯ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನುಚಿತವಾಗಿ ವರ್ತನೆ ಮಾಡಿದ ಅಂತಾ KSRTC ಚಾಲಕನ ವರ್ಗಾವಣೆಗೆ ನೀವು ಕೊಟ್ಟಿರೋದು. KSRTC ಎಂಡಿಯೇ ಹೇಳಿದ್ದಾರೆ ಸಚಿವರು ಹೇಳಿದ್ರು ಅದಕ್ಕಾಗಿ ವರ್ಗಾವಣೆ ಮಾಡಿದೆ ಅಂತಾ ಎಂದು ಕುಮಾರಸ್ವಾಮಿ ಹೇಳಿದರು. ಆಗ ಉತ್ತರ ಕೊಡಲು ಸಚಿವ ಚಲುವರಾಯಸ್ವಾಮಿ ಅವರು ಮುಂದಾಗಿದ್ದಾರೆ. ನಾನು ಮಾತಾಡ್ತಿದ್ದೇನೆ, ನೀವು ಆಮೇಲೆ ಮಾತಾಡ್ರಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ವಾಕ್ಸಮರದ ಮಧ್ಯೆ KSRTC ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣ ವಿಧಾನಸಭೆಯಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KSRTC ಚಾಲಕನ ಆತ್ಮಹತ್ಯೆ ಯತ್ನದ ಹಿಂದೆ ಚಲುವರಾಯಸ್ವಾಮಿ ರಾಜಕೀಯ; ಸದನದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಕೆಂಡಾಮಂಡಲ

https://newsfirstlive.com/wp-content/uploads/2023/07/Hd-Kumaraswamy-1.jpg

Load More