newsfirstkannada.com

ತಮಿಳುನಾಡಿಗೆ ಕಾವೇರಿ ನೀರು; ಸಿಎಂ ಸಿದ್ದರಾಮಯ್ಯಗೆ ಕೊನೇ ವಾರ್ನಿಂಗ್​​ ಕೊಟ್ಟ ಹೆಚ್​ಡಿಕೆ!

Share :

28-08-2023

    ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಕಾಂಗ್ರೆಸ್​ ಸರ್ಕಾರ

    ಕಾಂಗ್ರೆಸ್​ ಸರ್ಕಾರದ ವಿರುದ್ಧ ಹೆಚ್​​.ಡಿ ಕುಮಾರಸ್ವಾಮಿ ಕಿಡಿ

    ಸಿಎಂ ಸಿದ್ದರಾಮಯ್ಯಗೆ ಕೊನೇ ವಾರ್ನಿಂಗ್​​​ ಕೊಟ್ಟ ಹೆಚ್​ಡಿಕೆ

ಮಂಡ್ಯ: ರೈತರ ಭಾರೀ ಆಕ್ರೋಶದ ಮಧ್ಯೆಯೂ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಸುಪ್ರೀಂಕೋರ್ಟ್​ ಆದೇಶಕ್ಕೆ ಮಣಿದು ತಮಿಳುನಾಡಿಗೆ ನೀರು ಬಿಟ್ಟಿತ್ತು. ಕರ್ನಾಟಕದಲ್ಲೇ ನೀರಿನ ಕೊರತೆಯಿದ್ದರೂ ತಮಿಳುನಾಡಿಗೆ ಬಿಟ್ಟಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ರೈತರು ಬೀದಿಗಿಳಿದು ಆಕ್ರೋಶ ಹೊರಹಾಕಿದ್ರು. ಈ ಬೆನ್ನಲ್ಲೇ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ವಾರ್ನಿಂಗ್​ ಕೊಟ್ಟಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಹೆಚ್​​.ಡಿ ಕುಮಾರಸ್ವಾಮಿ, ಯಾವುದೇ ಕಾರಣಕ್ಕೂ ಕಾವೇರಿ ವಿಚಾರದಲ್ಲಿ ಸರ್ಕಾರ ಹುಡುಗಾಟಿಕೆ ಮಾಡಬಾರದು. ಕಾವೇರಿ ನೀರು ನಿರ್ವಹಣಾ ಮಂಡಳಿ ಬಿಡಿ ಎಂದ ಕೂಡಲೇ ಸುಮ್ಮನೇ ಕೂರಬಾರದು. ನೀರು ಬಿಡಲ್ಲ ಎಂದು ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ಸುಪ್ರೀಂಕೋರ್ಟ್​ಗೆ ಹೋಗಬೇಕಿತ್ತು ಎಂದ ಹೆಚ್​ಡಿಕೆ

ತಮಿಳುನಾಡು ಸರ್ಕಾರ ಕಾವೇರಿ ನೀರು ರಿಲೀಸ್​ ಮಾಡಿ ಎಂದು ಕರ್ನಾಟಕ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್​ಗೆ ಹೋಗಿದೆ. ಇದರ ವಿರುದ್ಧ ರಾಜ್ಯ ಸರ್ಕಾರವೂ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಬೇಕಿತ್ತು. ನೀರು ಬಿಡುವ ಬದಲಿಗೆ ಪ್ರತಿಭಟನೆ ಮಾಡಬೇಕಿತ್ತು ಎಂದು ಹೇಳಿದರು.

ಜನಪರ ಕೆಲಸ ಮಾಡಿದ್ರೆ ನಾವು ಬೆಂಬಲ ನೀಡುತ್ತೇವೆ. ಮೊದಲೇ ಸರ್ವಪಕ್ಷಗಳ ಸಭೆ ಕರೆದು ಕಾವೇರಿ ನೀರು ಬಿಡುಗಡೆ ಸಂಬಂಧ ಮಾತಾಡಬೇಕಿತ್ತು. ಮೊದಲು ಕೋರ್ಟ್​​ ಮೆಟ್ಟಿಲೇರಿ ಸುಪ್ರೀಂಕೋರ್ಟ್​​ ನಿರ್ಧಾರ ಬದ್ಧವಾಗಿರಬೇಕಿತ್ತು ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಮಿಳುನಾಡಿಗೆ ಕಾವೇರಿ ನೀರು; ಸಿಎಂ ಸಿದ್ದರಾಮಯ್ಯಗೆ ಕೊನೇ ವಾರ್ನಿಂಗ್​​ ಕೊಟ್ಟ ಹೆಚ್​ಡಿಕೆ!

https://newsfirstlive.com/wp-content/uploads/2023/08/HDK_CM_SIDDARAMAIAH.jpg

Load More