newsfirstkannada.com

WATCH: ನಿನ್ಗೆ ನಾಚ್ಕೆ ಆಗ್ಬೇಕು, ನಿನ್ಗೆ ನಾಚ್ಕೆ ಆಗ್ಬೇಕು ಕೂತ್ಕೊ.. ಚಲುವರಾಯಸ್ವಾಮಿ, ಕುಮಾರಸ್ವಾಮಿ ಮಧ್ಯೆ ಭರ್ಜರಿ ವಾಗ್ಯುದ್ಧ

Share :

06-07-2023

    ಕುಮಾರಸ್ವಾಮಿಗೆ ಸವಾಲು ಹಾಕಿದ ಕೃಷಿ ಸಚಿವ ಚಲುವರಾಯಸ್ವಾಮಿ

    ಚಲುವರಾಯಸ್ವಾಮಿ ವಿರುದ್ಧ ತಾಳ್ಮೆ ಕಳೆದುಕೊಂಡ ಕುಮಾರಸ್ವಾಮಿ

    ಸದನದಲ್ಲಿ ಕೊಲೆಗಡುಕ ಆರೋಪಕ್ಕೆ ಕಾಂಗ್ರೆಸ್ ಸದಸ್ಯರ ಆಕ್ರೋಶ

ವಿಧಾನಸಭೆಯಲ್ಲಿ ಇವತ್ತು ಕಾಂಗ್ರೆಸ್, ಜೆಡಿಎಸ್‌ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಮಂಡ್ಯ ಜಿಲ್ಲೆ ನಾಗಮಂಗಲ KSRTC ಚಾಲಕನ ಆತ್ಮಹತ್ಯೆ ಯತ್ನ ಪ್ರಕರಣದಿಂದ ಶುರುವಾದ ಜಟಾಪಟಿಯಲ್ಲಿ ಮಾತಿಗೆ ಮಾತು ಬೆಳೆದು ಇಡೀ ದಿನ ಕಲಾಪದಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಕಾಂಗ್ರೆಸ್, ಜೆಡಿಎಸ್ ನಾಯಕರು ಪರಸ್ಪರ ಮಾತಿನ ಯುದ್ಧ ನಡೆಸಿದ್ರು. ಈ ಜಟಾಪಟಿಯ ಮಧ್ಯೆ ಕೃಷಿ ಸಚಿವ ಚಲುವರಾಯಸ್ವಾಮಿ ಹಾಗೂ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರ ಮಧ್ಯೆ ಭರ್ಜರಿ ಮಾತಿನ ಚಕಮಕಿಯೇ ನಡೆದಿದೆ.

ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ಮಾಡಿದ ಗಂಭೀರ ಆರೋಪಕ್ಕೆ ಕೃಷಿ ಸಚಿವ ಚಲುವರಾಯಸ್ವಾಮಿ ಕೂಡ ಕೆಂಡಾಮಂಡಲರಾದರು. ನಾನು ವರ್ಗಾವಣೆಯ ಬಗ್ಗೆ ಯಾರಿಗೂ ಕರೆ ಮಾಡಿಲ್ಲ, ಯಾವ ಪತ್ರನೂ ಕೊಟ್ಟಿಲ್ಲ. ಚಾಲಕನ ಕುಟುಂಬದವರೇ ವರ್ಗಾವಣೆ ರದ್ದು ಮಾಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆಯವರಿಗೆ ಕರೆ ಮಾಡಿ ವಿಚಾರಿಸಿದ್ದೆ. ಅನಿವಾರ್ಯ ಇದ್ದರೆ ವರ್ಗಾವಣೆ ಮಾಡಿ, ಇಲ್ಲಾಂದ್ರೆ ಬೇಡ ಎಂದಿದ್ದೆ. ಈ ಹಿನ್ನೆಲೆಯಲ್ಲಿ ಹೋಲ್ಡ್ ಮಾಡಿದ್ದಾರೆ. ವರ್ಗಾವಣೆ ಆದ ಮೂರು ದಿನಗಳ ಬಳಿಕ KSRTC ಡ್ರೈವರ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕುಮಾರಸ್ವಾಮಿ ಅವರ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದ ವಿಚಾರ. ನಾವು ಜೊತೆಯಲ್ಲೇ ಕೆಲಸ ಮಾಡಿದವರು. ಕನಿಷ್ಟ ಕೃತಜ್ಞತೆ ಇರಬೇಕು. ಕಣ್ಣಲ್ಲಿ ‌ನೀರಲ್ಲ ರಕ್ತವೇ ಬಿದ್ದಿದೆ. ಸಿದ್ದರಾಮಯ್ಯನವರು ಜೆಡಿಎಸ್ ಪಕ್ಷ ಬಿಟ್ಟು ಹೋಗಿಲ್ಲ. ಅವರನ್ನು ದೂಡಿದ್ದು, ತಳ್ಳಿದ್ದು ಎಂದು ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ಚಲುವರಾಯಸ್ವಾಮಿ ಮಾತಿಗೆ ಉತ್ತರಿಸಿದ ಹೆಚ್‌ಡಿಕೆ ಇವರು ಎಲ್ಲಾ ಹಳೇ ಚರಿತ್ರೆ ತೆಗೆದಿದ್ದಾರೆ. ಸಿದ್ದರಾಮಯ್ಯನವರ ತೆಗೆಯುವ ಬಗ್ಗೆ ಎಲ್ಲಾ ಹೇಳಿದ್ದಾರೆ. ಚಲುವರಾಯಸ್ವಾಮಿಯನ್ನು ಮಂತ್ರಿ ಮಾಡೋಕೆ ನಾವೆಲ್ಲ ಏನೇನು ಮಾಡಬೇಕಿತ್ತು. ಎಲ್ಲವನ್ನೂ ಚರ್ಚೆ ಮಾಡೋಣ. ದೇವೇಗೌಡರು ಸರ್ಕಾರ ವಿಸರ್ಜನೆ ಮಾಡಿದಾಗ ಇವ್ರು ನನ್ನ ಕಾಲು ಕಟ್ಟಿಕೊಳ್ಳೋಕೆ ಬಂದಿದ್ರು. ಇವರ ನನ್ನ ಬಗ್ಗೆ ಮಾತನಾಡುತ್ತಾರಾ. ಅಧ್ಯಕ್ಷರೇ ಒಂದು ದಿನ ಕೊಡಿ ಅದರ‌ ಬಗ್ಗೆ ಚರ್ಚೆ ಮಾಡೋಕೆ ಎಂದು ಕುಮಾರಸ್ವಾಮಿ ಛೇಡಿಸಿದರು.

ಈ ಮಾತಿನ ಚಕಮಕಿಯ ಮಧ್ಯೆ ಸಚಿವ ಚೆಲುವರಾಯಸ್ವಾಮಿ ಅವರು ಸೋಲಿನ ಹತಾಶೆಯಿಂದ ಲಘುವಾಗಿ ಮಾತನಾಡಬೇಡಿ. ಅನಾವಶ್ಯಕವಾಗಿ ನಮ್ಮನ್ನು ತೇಜೋವಧೆ ಮಾಡೋದನ್ನು ಬಿಡಬೇಕು. ನನ್ನ ಬಳಿ ಸಿಡಿ ಇದೆ, ಅದು ಇದೆ ಅನ್ನೋದನ್ನು ಬಿಡಬೇಕು. ನಾಚಿಕೆ ಆಗಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು ನಿನ್ಗೆ ನಾಚ್ಕೆ ಆಗ್ಬೇಕು ಕೂತ್ಕೊ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಇದಾದ ಬಳಿಕ ಕುಮಾರಸ್ವಾಮಿ ಅವರು ಚಲುವರಾಯಸ್ವಾಮಿ ರಾಜೀನಾಮೆಗೆ ಪಟ್ಟು ಹಿಡಿದಾಗ ಜೆಡಿಎಸ್ ಸದಸ್ಯರು ಧರಣಿ ನಡೆಸಲು ಮುಂದಾದರು. ವರ್ಗಾವಣೆ ದಂಧೆಯ ಬಗ್ಗೆ ತನಿಖೆ ನಡೆಸುವವರೆಗೂ ಸಚಿವರು ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ನಿನ್ಗೆ ನಾಚ್ಕೆ ಆಗ್ಬೇಕು, ನಿನ್ಗೆ ನಾಚ್ಕೆ ಆಗ್ಬೇಕು ಕೂತ್ಕೊ.. ಚಲುವರಾಯಸ್ವಾಮಿ, ಕುಮಾರಸ್ವಾಮಿ ಮಧ್ಯೆ ಭರ್ಜರಿ ವಾಗ್ಯುದ್ಧ

https://newsfirstlive.com/wp-content/uploads/2023/07/hd-kumaraswami.jpg

Load More