newsfirstkannada.com

ಕುಮಾರಸ್ವಾಮಿಗೆ ಕೈ ತೋರಿಸಿ ಆವಾಜ್ ಹಾಕಿದ ಕಾಂಗ್ರೆಸ್‌ ಕಾರ್ಯಕರ್ತ; ಮಂಡ್ಯದಲ್ಲಿ ರೋಷಾವೇಶ; ಆಗಿದ್ದೇನು?

Share :

Published August 28, 2024 at 3:05pm

    ವಾಮಮಾರ್ಗದಲ್ಲಿ ಅಧಿಕಾರ ಹಿಡಿದರು ಎಂದ ಕಾಂಗ್ರೆಸ್ ಶಾಸಕ

    ಸ್ಥಳೀಯ ಸಂಸ್ಥೆ ಚುನಾವಣೆಗೆ ಮತ ಹಾಕಲು ಬಂದ ಕೇಂದ್ರ ಸಚಿವ

    ಜಿದ್ದಾಜಿದ್ದಿನ ಮಂಡ್ಯ ನಗರಸಭೆಯನ್ನು ಮತ್ತೆ ವಶಕ್ಕೆ ಪಡೆದ ಜೆಡಿಎಸ್‌!

ಮಂಡ್ಯ ನಗರಸಭೆಯ ಆವರಣ ಇಂದು ಅಕ್ಷರಶಃ ರಣರಂಗವಾಗಿತ್ತು. ನಗರಸಭಾ ಅಧ್ಯಕ್ಷ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್‌ ನಾಯಕರ ಮಧ್ಯೆ ಜಿದ್ದಾಜಿದ್ದಿನ ರಾಜಕೀಯ ಹೋರಾಟ ನಡೆದಿದೆ. ನಗರಸಭೆ ಆವರಣದಲ್ಲಿ ಕಾಂಗ್ರೆಸ್ ಸದಸ್ಯರು, ಜೆಡಿಎಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಾಗ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅವರು ಕೆರಳಿ ಕೆಂಡವಾಗಿದ್ದಾರೆ.

ನಗರಸಭೆ ಆವರಣಕ್ಕೆ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಬಂದಿದ್ದರು. ಜೆಡಿಎಸ್ ಸದಸ್ಯರು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಆಗಮಿಸಿದರು. ಆಗ ಜೆಡಿಎಸ್ ಬಸ್ ಅಡ್ಡಗಟ್ಟಿದ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್‌ನ ಮೂವರು ಸದಸ್ಯರನ್ನು ಕಾಂಗ್ರೆಸ್ ಹೈಜಾಕ್ ಮಾಡಿದೆ. ಅದೇ ರೀತಿ ಕಾಂಗ್ರೆಸ್‌ನ ಓರ್ವನನ್ನು ಜೆಡಿಎಸ್‌ ಹೈಜಾಕ್ ಮಾಡಿದ ಆರೋಪದಲ್ಲಿ ಹೈಡ್ರಾಮವೇ ನಡೆಯಿತು.

ಇದನ್ನೂ ಓದಿ: ‘ಬೆಂಗಳೂರು ಜೈಲಲ್ಲೇ ಇರಲು ಅವಕಾಶ ಕೊಡಿ ಸ್ವಾಮಿ’- ದರ್ಶನ್ ಗ್ಯಾಂಗ್‌ ಮನವಿಗೆ ಕೋರ್ಟ್‌ ಹೇಳಿದ್ದೇನು? 

ಈ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡುತ್ತಿದ್ದರು. ಈ ವೇಳೆ ಕುಮಾರಸ್ವಾಮಿ ಅವರು ಮಧ್ಯ ಪ್ರವೇಶ ಮಾಡಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೆ ಮಂಡ್ಯ ನಗರಸಭೆಯಲ್ಲಿ ಜೆಡಿಎಸ್-ಬಿಜೆಪಿ ದೋಸ್ತಿಗೆ ಗೆದ್ದು ಬೀಗಿತು. ಜೆಡಿಎಸ್ ಪಾಲಾದ ಮೇಲೆ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಕುಮಾರಸ್ವಾಮಿ ಪರ ಜೈಕಾರ ಹಾಕಿ ಸತ್ಯಕ್ಕೆ ಜಯ, ಕುಮಾರಣ್ಣ ಇದ್ದ ಕಡೆ ಜಯ ಎಂದು ಘೋಷಣೆ ಕೂಗಿದರು.

ಕುಮಾರಸ್ವಾಮಿ ಹೇಳಿದ್ದೇನು?
ಮಂಡ್ಯ ನಗರಸಭೆಯಲ್ಲಿ ನಡೆದ ಗಲಾಟೆ ಬಳಿಕ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅವರು ಮಾತನಾಡಿದರು. ಕಾಂಗ್ರೆಸ್ ಶಾಸಕ ಗಣಿಗ ರವಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿದರು ಎಂದು ಆರೋಪಿಸಿದ್ದಾರೆ. ಶಾಸಕರ ಪ್ರಕಾರ ವಾಮಮಾರ್ಗದ ಅರ್ಥವೇನು? ಮತದಾನದ ವೇಳೆಯೂ ಕಣ್ಸನ್ನೆ, ಕೈಸನ್ನೆ ಮೂಲಕವೂ ಹಣದ ಆಮಿಷ ಒಡ್ಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ರಾಜಭವನದ ಕದ ತಟ್ಟಿದ ಮತ್ತೊಂದು ದೊಡ್ಡ ಹಗರಣ; ಸಿದ್ದು ಬಳಿಕ ಖರ್ಗೆ ಕುಟುಂಬ, ಎಂಬಿ ಪಾಟೀಲ್​​ಗೆ ಸಂಕಷ್ಟ..! 

ನನ್ನ ಜೀವನದಲ್ಲಿ ಮೊದಲ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಮತಹಾಕಲು ಬಂದಿದ್ದೇನೆ. ಕಳೆದ 20 ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆ ಗಮನಿಸಿ ನಾನು ಬರಬೇಕಾಯಿತು. ಕ್ಯಾಬಿನೆಟ್ ಸಭೆ ಬಿಟ್ಟು ಪ್ರಧಾನಿಮಂತ್ರಿ ಅನುಮತಿ ಪಡೆದು ಮತದಾನದಲ್ಲಿ ಭಾಗವಹಿಸಿದೆ. ಚುನಾವಣೆ ಸೋಲಿನ ಭಯದಲ್ಲಿ ಚುನಾವಣೆ ಮುಂದೂಡುವುದರಲ್ಲಿ ಕಾಂಗ್ರೆಸ್ ಎಕ್ಸ್‌ಪರ್ಟ್ ಆಗಿದೆ. ಶಾಂತಿಯುತವಾಗಿ ಚುನಾವಣೆ ನಡೆಯಲು ಅಧಿಕಾರಿಗಳು ಸಹಕರಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಹಿಂದಿನ ಅಧ್ಯಕ್ಷರು ವ್ಯಾಪಾರ ಶುರು ಮಾಡಿದ್ದರು. ನಮ್ಮ ಪಕ್ಷದಿಂದ ಗೆದ್ದು ಯಾವ ರೀತಿ ನಡೆದುಕೊಂಡಿದ್ದಾರೆ ಅನ್ನೋದು ಗೊತ್ತಿದೆ. ಕಾಂಗ್ರೆಸ್ ಕುಟುಂಬ ಸದಸ್ಯರು ಬ್ಲಾಕ್ ಮೇಲ್ ಮಾಡಿದ್ದಾರೆ. ಅದಕ್ಕಾಗಿ ಸದಸ್ಯರನ್ನ ಕುಟುಂಬಸ್ಥರನ್ನು ಇಟ್ಟುಕೊಂಡು ಚುನಾವಣೆ ಮಾಡಲು ಮುಂದಾಗಿದ್ದರು. ನಗರಸಭೆ ಅಧ್ಯಕ್ಷ ಮಹದೇವು ತೆಗೆದುಕೊಂಡು ನಿರ್ಧಾರ ಪಕ್ಷ ನಿಷ್ಠೆ ತೋರಿದೆ. ಅವರ ಮನೆಗೆ ತೆರಳಿ ಕೃತಜ್ಞತೆ ತಿಳಿಸುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಮಾರಸ್ವಾಮಿಗೆ ಕೈ ತೋರಿಸಿ ಆವಾಜ್ ಹಾಕಿದ ಕಾಂಗ್ರೆಸ್‌ ಕಾರ್ಯಕರ್ತ; ಮಂಡ್ಯದಲ್ಲಿ ರೋಷಾವೇಶ; ಆಗಿದ್ದೇನು?

https://newsfirstlive.com/wp-content/uploads/2024/08/Mandya-HDK-Galate.jpg

Load More