newsfirstkannada.com

ಕರ್ನಾಟಕದಲ್ಲಿ ಮತ್ತೊಬ್ಬ ಅಜಿತ್ ಪವಾರ್ ಹುಟ್ಟಿಕೊಂಡರೂ ಅಚ್ಚರಿಪಡಬೇಕಾಗಿಲ್ಲ, ಯಾಕಂದ್ರೆ.. -ಕುಮಾರಸ್ವಾಮಿ ಹೊಸ ಬಾಂಬ್

Share :

03-07-2023

  ನವೆಂಬರ್-ಡಿಸೆಂಬರ್​ನಲ್ಲಿ ರಾಜಕಾರಣದಲ್ಲಿ ಬಿರುಗಾಳಿ

  ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಹೆಚ್​ಡಿಕೆ

  ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಕ್ಷಿಪ್ರ ರಾಜಕೀಯ ಬೆಳವಣಿಗೆ?

ಕರ್ನಾಟಕದಲ್ಲಿ ಮತ್ತೊಬ್ಬ ಅಜಿತ್ ಪವಾರ್ ಹುಟ್ಟಿಕೊಂಡರೂ ಅಚ್ಚರಿಪಡಬೇಕಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್​​.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಹಾಕಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಕುಮಾರಸ್ವಾಮಿ, ಇಲ್ಲಿ ಯಾವ ಅಜಿತ್ ಪವಾರ್ ಹುಟ್ಟುಹಾಕ್ತಾರೋ ಗೊತ್ತಿಲ್ಲ. ಸಿಎಂ ಕಚೇರಿಯಿಂದ ಬಂದ ವರ್ಗಾವಣೆ ಆದೇಶವನ್ನೇ ಕೆಲವು ಸಚಿವರು ತಡೆ ಹಿಡಿದಿದ್ದಾರೆ. ಎಷ್ಟೋ ಅಧಿಕಾರಿಗಳಿಗೆ ಸಚಿವರು ಅಧಿಕಾರ ಸ್ವೀಕಾರ ಮಾಡದಂತೆ ತಡೆಹಿಡಿದಿದ್ದಾರೆ. ಬಿಜೆಪಿ ನಾಯಕರೇ ಹೇಳ್ತಿದ್ದಾರೆ, ನವೆಂಬರ್-ಡಿಸೆಂಬರ್​ನಲ್ಲಿ ಬದಲಾವಣೆ ಎಂದು. ಹೀಗಾಗಿ ಕರ್ನಾಟಕದಲ್ಲೂ ಮತ್ತೊಬ್ಬ ಅಜಿತ್ ಪವಾರ್ ಹುಟ್ಟಿಕೊಂಡರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ಗೇಲಿ ಮಾಡಿದ್ದಾರೆ.

ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯನ್ನು ಉದಾಹರಿಸಿ, ಕುಮಾರಸ್ವಾಮಿ ಈ ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ಅಂತಹ ಅಜಿತ್ ಪವಾರ್ ಯಾವಾಗ ಬರ್ತಾರೋ ನೋಡಬೇಕು. ಮಹಾರಾಷ್ಟ್ರದ ರಾಜಕೀಯ ನಾವು ಯಾರು ಊಹಿಸಿಕೊಂಡಿರಲಿಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ರಾಜ್ಯದಲ್ಲಿ ಯಾವಾಗ ಏನಾಗುತ್ತೋ ಯಾರಿಗೆ ಗೊತ್ತು ಎಂದು ಪಶ್ನೆ ಮಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರ್ನಾಟಕದಲ್ಲಿ ಮತ್ತೊಬ್ಬ ಅಜಿತ್ ಪವಾರ್ ಹುಟ್ಟಿಕೊಂಡರೂ ಅಚ್ಚರಿಪಡಬೇಕಾಗಿಲ್ಲ, ಯಾಕಂದ್ರೆ.. -ಕುಮಾರಸ್ವಾಮಿ ಹೊಸ ಬಾಂಬ್

https://newsfirstlive.com/wp-content/uploads/2023/07/HDK.jpg

Load More