newsfirstkannada.com

ಕಾಂಗ್ರೆಸ್​​ ಮಾತ್ರವಲ್ಲ ಬಿಜೆಪಿ ಕೂಟದಿಂದಲೂ ಜೆಡಿಎಸ್​​ಗಿಲ್ಲ ಆಹ್ವಾನ; ಕುತೂಹಲ ಮೂಡಿಸಿದ HDK ನಡೆ!

Share :

18-07-2023

  ರಾಷ್ಟ್ರ ರಾಜಕಾರಣದ ಘಟಾನುಘಟಿಗಳು ಬೆಂಗಳೂರಿನಲ್ಲಿ

  ಮೋದಿ ವಿರುದ್ಧದ ವಿಪಕ್ಷಗಳ ಸಭೆಗಿಲ್ಲ ಜೆಡಿಎಸ್​ಗೆ ಆಹ್ವಾನ

  ಎನ್​ಡಿಎ ಸಭೆಗೂ ಆಹ್ವಾನವಿಲ್ಲ.. ಯುಪಿಎ ಸಭೆಗೂ ಇಲ್ಲ..!

ಬೆಂಗಳೂರು: ರಾಷ್ಟ್ರ ರಾಜಕಾರಣದ ಘಟಾನುಘಟಿಗಳೆಲ್ಲ ಬೆಂಗಳೂರಿನಲ್ಲಿ ಟೆಂಟ್​ ಹಾಕಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ವಿಪಕ್ಷ ನಾಯಕರು ಮತ್ತೆ ಕೈ ಜೋಡಿಸಿ ಮಹಾಸಭೆ ಕರೆದಿದ್ದಾರೆ. ಇತ್ತ ಎನ್​ಡಿಎ ಮೈತ್ರಿಕೂಟ ಕೂಡ ಸಭೆ ನಡೆಸಲಿದೆ. ಆದ್ರೆ ಈ ಮಹಾಘಟಬಂಧನ್​ ಅಥವಾ ಎನ್​ಡಿಎ ಎರಡಲ್ಲೂ ಗುರುತಿಸಿಕೊಳ್ಳದ ದಳಪತಿಗಳು ಯಾವ ಟೀಮ್ ಸೇರಲಿದ್ದಾರೆ ಅನ್ನೋದೇ ದೊಡ್ಡ ಕುತೂಹಲ.

ಮಹಾಘಟಬಂಧನ್​ ರಾಷ್ಟ್ರ ರಾಜ್ಯಕಾರಣದಲ್ಲಿ ಪ್ರಧಾನಿ ಮೋದಿ ವಿರುದ್ಧ ಸಂಘಟಿತವಾದ ವಿಪಕ್ಷಗಳ ಮಹಾ ಒಕ್ಕೂಟ. ಈ ಬಂಧನ ಮೊನ್ನೆಯಷ್ಟೇ ಪಾಟ್ನಾದಲ್ಲಿ ಸಭೆ ಸೇರಿ ಒಗ್ಗಟ್ಟು ಪ್ರದರ್ಶಿಸಿದ್ದ ನಾಯಕರು ಈಗ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಮಹಾ ಸಭೆ ನಡೆಸಲು ಸೇರಿದ್ದಾರೆ. ಆದ್ರೆ ಈ ಸಭೆಯ ನಡುವೆ ಭಾರೀ ಚರ್ಚೆಗೆ ಗ್ರಾಸವಾಗಿರೋದು ತೆನೆ ಹೊತ್ತ ಪಕ್ಷ ಯಾರ ನೊಗ ಹೊರತ್ತೆ ಅನ್ನೋದು.

ಎನ್​ಡಿಎ ಸಭೆಗೂ ಆಹ್ವಾನವಿಲ್ಲ.. ಯುಪಿಎ ಸಭೆಗೂ ಇಲ್ಲ

ಜೆಡಿಎಸ್ ಪಕ್ಷ, ಎನ್​ಡಿಎ ಮೈತ್ರಿಕೂಟ ಸೇರುತ್ತೆ ಅನ್ನೋ ಗುಸು ಗುಸು ಪಿಸು ಪಿಸು ರಾಜ್ಯ ರಾಜಕಾರಣದಲ್ಲಿ ಹಲ್​ಚಲ್​ ಎಬ್ಬಿಸಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಖುದ್ದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಂಗೆ ಎನ್​ಡಿಎ ಸಭೆಗೂ ಆಹ್ವಾನವಿಲ್ಲ. ಯುಪಿಎ ಸಭೆಗೂ ಆಹ್ವಾನವಿಲ್ಲ. ನಾನು ವಿಪಕ್ಷ ನಾಯಕ ಮಾಡಿ ಅಂತ ನಾನು ಬೇಡಿಕೆ ಇಟ್ಟಿಲ್ಲ, ಕೇಂದ್ರದಲ್ಲಿ ಮಂತ್ರಿ ಸ್ಥಾನ ಕೊಡಿ ಅಂತಲೂ ಕೇಳಿಲ್ಲ. ನನ್ನ ಹೆಸರು ಯಾಕೆ ಚರ್ಚೆ ಆಗ್ತಿದೆ ಅನ್ನೋದೇ ಗೊತ್ತಿಲ್ಲ ಅಂತ ಹೇಳಿದ್ದಾರೆ.

ಮಹಾಘಟಬಂಧನ್ ಬಗ್ಗೆ ವ್ಯಂಗ್ಯವಾಡಿದ ಕೇಸರಿ ಕಲಿಗಳು

ಮಹಾಘಟ ಬಂಧನ್​ ಸಭೆ, ಮಹಾನ್ ಸಭೆಯಲ್ಲ. ಇದೊಂದು ಫೋಟೊ ಶೋ ಅಷ್ಟೆ ಅಂತ ಮಾಜಿ ಡಿಸಿಎಂ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ಯಾವಾಗಲೂ ವಿರೋಧ ಪಕ್ಷಗಳ ಬಗ್ಗೆ ಪಂಚಿಂಗ್ ಡೈಲಾಗ್ ಹೊಡೆದು ಕಾಲೆಳೆಯುವ ಶಾಸಕ ಯತ್ನಾಳ್, ಈ ಮಹಾಘಟಬಂಧನವನ್ನು ದರೋಡೆಕೋರರ ಒಕ್ಕೂಟ ಎಂದಿದ್ದಾರೆ.

ಇನ್ನು ಶಾಸಕ ವಿಜಯೇಂದ್ರ, ವಿಪಕ್ಷಗಳ ಸಭೆ ಎತ್ತು ಏರಿಗೆ ಇಳಿದ್ರೆ ಕೋಣ ನೀರಿಗೆ ಇಳಿಯಿತು ಅಂತ ವ್ಯಂಗ್ಯವಾಡಿದ್ದಾರೆ. ಇನ್ನು ಮಹಾಘಟಬಂಧನ್ ನಾಯಕರ ಸಭೆಯಲ್ಲಿ ಭಾಗವಹಿಸುವವರೆಲ್ಲಾ ಚೌ ಚೌ ಬಾತ್ ಗಿರಾಕಿಗಳು ಅಂತ ಬಿಜೆಪಿ ಎಂಎಲ್​ಸಿ ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದ್ದಾರೆ.

ಮಹಾಘಟಬಂಧನ್ ದೊಡ್ಡ ಪ್ರಾರಂಭವೆಂದ ಡಿಕೆಶಿ

ಇನ್ನು ಈ ಮಹಾಘಟಬಂಧನ್ ದೊಡ್ಡ ಪ್ರಾರಂಭ. ಎಲ್ಲ ವಿರೋಧ ಪಕ್ಷಗಳು ಒಂದಾಗಿರುವುದು ಯಶಸ್ವಿ ದಿನ ಅಂತ ಡಿಸಿಎಂ ಡಿಕೆಶಿ ಹೇಳಿದ್ದಾರೆ. ಇದರ ಜೊತೆಗೆ ಜೆಡಿಎಸ್ ಪಕ್ಷಕ್ಕೆ ಆಹ್ವಾನ ನೀಡದಿರುವ ಬಗ್ಗೆ ವೇಣುಗೋಪಾಲ್​ಗೆ ಪ್ರಶ್ನಿಸಿದ್ದಕ್ಕೆ, ಸರ್ವಾಧಿಕಾರಿ ಧೋರಣೆ ವಿರೋಧಿಸುವ ಯಾರು ಬೇಕಾದರೂ ನಮ್ಮ ಕೈ ಜೋಡಿಸಬಹುದು. ಪ್ರತ್ಯೇಕವಾಗಿ ಆಹ್ವಾನ ನೀಡುವ ಅಗತ್ಯತೆ ಇಲ್ಲ ಎಂದಿದ್ದಾರೆ.

ಒಟ್ಟಾರೆ ಪ್ರಧಾನಿ ಮೋದಿ ವಿರುದ್ಧ ವಿಪಕ್ಷಗಳ ಒಗ್ಗೂಡಿವೆ. ಮಹಾಘಟಬಂಧನ್ ಹೆಸರಲ್ಲಿ ಬೆಂಗಳೂರಿನಲ್ಲಿ ಒಟ್ಟಾಗಿ ಹಸ್ತಲಾಘವ ಮಾಡಿಕೊಂಡಿವೆ. ಒಂದೆಡೆ ಸಭೆ ನಡೆಯುತ್ತಿದ್ದರೆ, ಇನ್ನೊಂದೆಡೆ ಇದರಲ್ಲಿ ಜೆಡಿಎಸ್​ ನಡೆ ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​​ ಮಾತ್ರವಲ್ಲ ಬಿಜೆಪಿ ಕೂಟದಿಂದಲೂ ಜೆಡಿಎಸ್​​ಗಿಲ್ಲ ಆಹ್ವಾನ; ಕುತೂಹಲ ಮೂಡಿಸಿದ HDK ನಡೆ!

https://newsfirstlive.com/wp-content/uploads/2023/07/HDD_HDK.jpg

Load More