newsfirstkannada.com

ಕಾಂಬೋಡಿಯಾ ಪ್ರವಾಸದಲ್ಲಿ ಹೆಚ್‌.ಡಿ ಕುಮಾರಸ್ವಾಮಿ; ಪರಮ ಶಿವನಿಗೆ ದಳಪತಿ ಪೂಜೆ; ಈ ದೇವಾಲಯದ ವಿಶೇಷತೆ ಏನು?

Share :

13-08-2023

    ಜಗತ್ತಿನ ಬೃಹತ್ ಹಿಂದೂ ದೇವಾಲಯಕ್ಕೆ ಭೇಟಿ ಕೊಟ್ಟ ಹೆಚ್‌ಡಿಕೆ

    ಐತಿಹಾಸಿಕ ಆಂಗ್‌ಕರ್ ವಾಟ್ ದೇವಾಲಯದಲ್ಲಿ ವಿಶೇಷ ಪೂಜೆ

    12ನೇ ಶತಮಾನದಲ್ಲಿ 30 ವರ್ಷಗಳ ಕಾಲ ಕಟ್ಟಿಸಿದ ದೇವಾಲಯ

ಕಾಂಬೋಡಿಯಾ ಪ್ರವಾಸದಲ್ಲಿರುವ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ಜಗತ್ತಿನ ಬೃಹತ್ ಹಿಂದೂ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ಇದೇ ವೇಳೆ ಆಂಗ್‌ಕರ್ ವಾಟ್‌ನಲ್ಲಿರುವ ಪರಮಶಿವನಿಗೆ ದಳಪತಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇತ್ತೀಚೆಗೆ ಕುಟುಂಬ ಸದಸ್ಯರ ಜೊತೆ ಯುರೋಪ್ ಪ್ರವಾಸ ಕೈಗೊಂಡಿದ್ದ ಹೆಚ್‌.ಡಿ ಕುಮಾರಸ್ವಾಮಿ ಅವರು ಇದೀಗ ಜೆಡಿಎಸ್ ನಾಯಕರ ಜೊತೆ ಕಾಂಬೋಡಿಯಾಗೆ ಭೇಟಿ ನೀಡಿದ್ದಾರೆ. ಕಾಂಬೋಡಿಯಾ ದೇಶದ ಐತಿಹಾಸಿಕ ಆಂಗ್‌ಕರ್ ವಾಟ್ ದೇವಾಲಯಕ್ಕೆ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿದ್ದು, ಅವರಿಗೆ ಮಾಜಿ ಸಚಿವರಾದ ಸಾ.ರಾ. ಮಹೇಶ್, ಮಾಜಿ ಶಾಸಕರಾದ ಚೌಡರೆಡ್ಡಿ ತೂಪಲ್ಲಿ ಸೇರಿದಂತೆ ಹೆಚ್‌ಡಿಕೆ ಆಪ್ತರು ಸಾಥ್ ನೀಡಿದ್ದಾರೆ.

ಆಂಗ್‌ಕರ್ ವಾಟ್ ಚರಿತ್ರೆ ಏನು?
ಕಾಂಬೋಡಿಯಾ ದೇಶದಲ್ಲಿರುವ ಆಂಗ್‌ಕರ್ ವಾಟ್ ದೇವಾಲಯ ಜಗತ್ತಿನಲ್ಲಿ ಪ್ರಸಿದ್ಧವಾದ ಹಿಂದೂ ದೇವಾಲಯ. ಇದು ಕಾಂಬೋಡಿಯಾ ದೇಶದ ಖ್ಮೇರ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಆಂಗ್‌ಕರ್ ಎಂಬಲ್ಲಿದೆ.

ಆಂಗ್‌ಕರ್ ವಾಟ್ ದೇವಾಲಯವನ್ನು ಸಾಮ್ರಾಟ ಎರಡನೇ ಸೂರ್ಯವರ್ಮಾ 12ನೇ ಶತಮಾನದಲ್ಲಿ ಕಟ್ಟಿಸಿದನು. ಇದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಹಿಂದೂ ಧಾರ್ಮಿಕ ದೇವಾಲಯವಾಗಿದೆ. ಇದು 2800 ಅಡಿ ಅಗಲ ಮತ್ತು 3800 ಅಡಿ ಉದ್ದವಿದೆ. ಮೇರುಪರ್ವತವನ್ನು ಹೋಲುವಂತೆ ಹಾಗೂ ದಕ್ಷಿಣ ಭಾರತೀಯ ವಾಸ್ತುಶಿಲ್ಪದಂತೆ ಈ ದೇವಸ್ಥಾನವನ್ನು ಕಟ್ಟಲಾಗಿದೆ. ಇದರ ನಿರ್ಮಾಣಕ್ಕೆ 30 ವರ್ಷಗಳಿಗಿಂತಲೂ ಹೆಚ್ಚಿನ ಸಮಯ ತೆಗೆದುಕೊಳ್ಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಕಾಂಬೋಡಿಯಾ ಪ್ರವಾಸದಲ್ಲಿ ಹೆಚ್‌.ಡಿ ಕುಮಾರಸ್ವಾಮಿ; ಪರಮ ಶಿವನಿಗೆ ದಳಪತಿ ಪೂಜೆ; ಈ ದೇವಾಲಯದ ವಿಶೇಷತೆ ಏನು?

https://newsfirstlive.com/wp-content/uploads/2023/08/HD-Kumaraswamy-1.jpg

Load More