ದಳಪತಿಯ 4 ದಿನಗಳ ಆಸ್ಪತ್ರೆ ವಾಸ ಅಂತ್ಯ
‘ಮೂರನೇ ಜನ್ಮವನ್ನ ಭಗವಂತ ನೀಡಿದ್ದಾನೆ’!
ಡಿಸ್ಚಾರ್ಜ್ ಬಳಿಕ ದಳಪತಿಯ ಭಾವುಕ ನುಡಿ
ಬೆಂಗಳೂರು: ಹೆಚ್ಡಿಕೆ ಅನಾರೋಗ್ಯದಿಂದ ಮೌನಕ್ಕೆ ಜಾರಿದ್ದ ದಳಕೋಟೆಯಲ್ಲೀಗ ಹೊಸ ಸಂವತ್ಸರ ಶುರುವಾಗಿದೆ. ಆಸ್ಪತ್ರೆ ವಾಸ ಮುಗಿಸಿ ದಳಪತಿ ಡಿಸ್ಚಾರ್ಜ್ ಆಗಿರೋದು ಜೆಡಿಎಸ್ ಪಾಲಿಗೆ ಮರುಜೀವ ಬಂದಂತಾಗಿದೆ. ಈ ಮಧ್ಯೆ ಮೊಮ್ಮಗನ ಸಂಸದ ಸ್ಥಾನದ ಅನರ್ಹತೆ ಬೆನ್ನಲ್ಲೇ ಹಾಸನದ ಅಖಾಡಲ್ಲಿ ದೊಡ್ಡಗೌಡ್ರು ಘರ್ಜಿಸುತ್ತಿರೋದು ಹೊಸ ರಾಜಕೀಯ ಲೆಕ್ಕಾಚಾರಕ್ಕೆ ಮುನ್ನುಡಿ ಬರೆದಿದೆ.
ದಳಪತಿಯ ಅನಾರೋಗ್ಯ ವಿಚಾರಕ್ಕೆ ದಂಗಾಗಿಸಿದ್ದ ದಳಕೋಟೆಯಲ್ಲಿ ಇಂದು ನವಚೈತನ್ಯ ಮೂಡಿದೆ.. ಕಳೆದ ನಾಲ್ಕುದಿನಗಳಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಚ್.ಡಿ ಕುಮಾರಸ್ವಾಮಿಗೆ ಇಂದು ಆಸ್ಪತ್ರೆ ವಾಸದಿಂದ ಮುಕ್ತಿ ದೊರಕಿದೆ. ಆರೋಗ್ಯದಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡಿರೋ ಹೆಚ್ಡಿಕೆಯನ್ನ ಇಂದು ಬೆಳಿಗ್ಗೆ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಡಿಸ್ಚಾರ್ಜ್ ಬಳಿಕ ಭಾವುಕ ನುಡಿಗಳನ್ನಾಡಿದ ದಳಪತಿ!
4 ದಿನಗಳ ಚಿಕಿತ್ಸೆ ಬಳಿಕ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹೆಚ್.ಡಿ ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿದ್ರು. ಈ ವೇಳೆ ಹೆಚ್ಡಿಕೆ ನುಡಿದ ಒಂದೊಂದು ಮಾತುಗಳು ಭಾವನಾತ್ಮಕವಾಗಿದ್ವು. ಭಗವಂತ ನನಗೆ ಮೂರನೇ ಜನ್ಮ ನೀಡಿದ್ದಾನೆ ಎಂದ ಹೆಚ್ಡಿಕೆ, ಸೂಕ್ತ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯರಿಗೆ ಅಭಿನಂದನೆ ತಿಳಿಸಿದ್ರು. ದೇಹದ ಎಡ ಭಾಗದಲ್ಲಿ ನಾನು ಸ್ವಾಧೀನ ಕಳೆದುಕೊಂಡಿದ್ದೆ. ಸೂಕ್ತ ಚಿಕಿತ್ಸೆಯಿಂದ ಹುಷಾರಾಗಿದ್ದೇನೆ. ಸ್ಟ್ರೋಕ್ ಬಂದಾಗ ಒಂದು ಕ್ಷಣ ಕೂಡ ವ್ಯರ್ಥ ಮಾಡಬೇಡಿ. ಅಂದು ನಾನು ನಿರ್ಲಕ್ಷ್ಯ ಮಾಡಿದಿದರೆ, ಇವತ್ತು ಸರಾಗವಾಗಿ ಮಾತಾಡೋಕೆ ಆಗ್ತಾ ಇರಲಿಲ್ಲ ಎಂದಿದ್ದಾರೆ.
ತವರು ಜಿಲ್ಲೆಯಲ್ಲಿ ಮುಂದುವರೆದ ಹೆಚ್ಡಿಡಿ ಟೆಂಪಲ್ ರನ್!
ಸಾಲು ಸಾಲು ಸಂಕಷ್ಟಗಳಿಂದ ಕಂಗಾಲಾಗಿರೋ ಹೆಚ್.ಡಿ ದೇವೇಗೌಡರ ಕುಟುಂಬ ದೇವರ ಮೋರೆಹೋಗಿದೆ. ನಿನ್ನೆ ಮನೆ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದ ದೊಡ್ಡಗೌಡರ ಕುಟುಂಬ ಇಂದು ಸಹ ಹಾಸನ ಜಿಲ್ಲೆಯಲ್ಲಿ ಟೆಂಪಲ್ ರನ್ ಮುಂದುವರೆಸಿದೆ. ಹುಟ್ಟೂರು ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯ ದೇವೇಶ್ವರ ದೇವಾಲಯದಲ್ಲಿ ಪತ್ನಿ ಚೆನ್ನಮ್ಮ ಜೊತೆಗೂಡಿ ಹೆಚ್ಡಿಡಿ ಇಂದು ಬೆಳಿಗ್ಗೆ ಪೂಜೆ ಸಲ್ಲಿಸಿದ್ರು. ನಂತರ ಹಾಸನ ತಾಲ್ಲೂಕಿನ ಬೈಲಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ಜನಾರ್ಧನಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿಯೂ ಪೂಜೆ ಸಲ್ಲಿಸಿದ್ರು.. ಈ ವೇಳೆ ಹೆಚ್ಡಿಡಿ ದಂಪತಿಗೆ ಶಾಸಕ ಎಚ್.ಪಿ ಸ್ವರೂಪ್‌ಪ್ರಕಾಶ್ ಸಾಥ್ ನೀಡಿದ್ರು.
I.N.D.I.A ಮೈತ್ರಿಕೂಟದ ವಿರುದ್ದ ಗುಡುಗಿದ ಹೆಚ್ಡಿಡಿ!
ಅವಧಿ ಪೂರ್ವ ಲೋಕಸಭಾ ಚುನಾವಣೆ ನಡೆಸಲು ಬಿಜೆಪಿ ಪ್ಲಾನ್ ಮಾಡಿದೆ ಎಂಬ ಮಮತಾ ಬ್ಯಾನರ್ಜಿ ಹೇಳಿಕೆಗೆ ಹಾಸನದಲ್ಲಿ ಹೆಚ್.ಡಿ ದೇವೇಗೌಡ್ರು ಪ್ರತಿಕ್ರಿಯೆ ನೀಡಿದ್ರು. I.N.D.I.A ಮೈತ್ರಿಕೂಟ ದಿನಕ್ಕೊಂದು ಹೇಳಿಕೆ ನೀಡ್ತಿದೆ.. ಒಂದು ಕಮಿಟಿ ಮಾಡಿದ್ದಾರೆ, ಅದರ ಲೀಡರ್ ಯಾರು.. ಪ್ರಧಾನಮಂತ್ರಿ ಅಭ್ಯರ್ಥಿ ಯಾರೆಂದು ಹೆಸರು ಹೇಳಿದ್ದಾರಾ ಅಂತ ಕಿಡಿಕಾರಿದ್ರು.
ಒಟ್ನಲ್ಲಿ ಹೆಚ್ಡಿಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗ್ತಿದ್ದಂತೆ ದಳಕೋಟೆಯಲ್ಲಿ ತಳಮಳ ದೂರಾಗಿ ಹೊಸ ಬೆಳಕು ಮೂಡಿದಂತಾಗಿದೆ. ಪ್ರಜ್ವಲ್ ರೇವಣ್ಣ ಅನರ್ಹತೆ ಬೆನ್ನಲ್ಲೇ ದೊಡ್ಡಗೌಡರು ಹಾಸನದಲ್ಲಿ ಮೊಕ್ಕಾಂ ಹೂಡಿರೋದು ಹೊಸ ತಂತ್ರದ ತಯಾರಿ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ