ಸದನದಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ ಮಧ್ಯೆ ವಾಕ್ಸಮರ
ಆಡಳಿತ ಸಿಬ್ಬಂದಿಗಳನ್ನು ನೇಮಿಸ್ತೀರಾ? ಇದು ದೇಶಪ್ರೇಮನಾ?
ನಿಮ್ಮ ರಾಜಕೀಯ ಲಾಭಕ್ಕಾಗಿ ಮಾನ ಹರಾಜು ಹಾಕುತ್ತಿದ್ದೀರಿ
ಬೆಂಗಳೂರಲ್ಲಿ ನಿನ್ನೆ ನಡೆದ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಸಭೆಯಲ್ಲಿ ಐಎಎಸ್ ಅಧಿಕಾರಿಗಳ ಬಳಕೆ ಮಾಡಿಕೊಂಡಿರುವ ವಿಚಾರ ವಿಧಾನಸಭೆಯಲ್ಲಿ ಭಾರೀ ಗದ್ದಲ, ಕೋಲಾಹಲಕ್ಕೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್ ಸದಸ್ಯರು ಮುಗಿಬಿದ್ದು ಘೋಷಣೆಗಳನ್ನ ಕೂಗಿದ್ದಾರೆ.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಒಂದು ರಾಜಕೀಯ ಸಭೆಗೆ ಆಡಳಿತ ಸಿಬ್ಬಂದಿಗಳನ್ನು ನೇಮಿಸ್ತೀರಾ? ಇದು ದೇಶಪ್ರೇಮನಾ? ಇವರು ರಾಜ್ಯದಲ್ಲಿ ಯಾವ ರೀತಿ ಆಡಳಿತ ನಡೆಸ್ತಿದ್ದಾರೆ? ಸಂವಿಧಾನದ ವ್ಯವಸ್ಥೆಯಲ್ಲಿ ಯಾರು ಏನು ಕೆಲಸ ಮಾಡಬೇಕೋ ಅದನ್ನೇ ಮಾಡಬೇಕು. ರಾಜಕೀಯ ಕಾರ್ಯಕ್ರಮಕ್ಕೆ ಅಧಿಕಾರಿಗಳನ್ನ ನಿಯೋಜನೆ ಮಾಡೋದು ಅಂದ್ರೆ ಏನು ಅಂತಾ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಸದನದ ಬಾವಿಗಿಳಿದು ಧರಣಿ ನಡೆಸಿದ ಬಿಜೆಪಿ ಸದಸ್ಯರು, ಶಿಷ್ಟಾಚಾರದಂತೆ ಅಧಿಕಾರಿಗಳನ್ನ ನಿಯೋಜಿಸಲಿ. ಅದಕ್ಕೆ ನಮ್ಮ ತಕರಾರು ಇಲ್ಲ. ಸಂಸದರು, ಶಾಸಕರಾಗದವರಿಗೆಲ್ಲಾ ಅಧಿಕಾರಿಗಳನ್ನ ನಿಯೋಜಿಸಿದ್ದಾರೆ. ಎರಡು ದಿನ ಅಧಿಕಾರಿಗಳು ಏರ್‌ಪೋರ್ಟ್, ಹೋಟೆಲ್‌ನ ಬಾಗಿಲು ಕಾದಿದ್ದಾರೆ. ನಿಮ್ಮ ರಾಜಕೀಯ ಲಾಭಕ್ಕಾಗಿ ಮಾನ ಹರಾಜು ಹಾಕುತ್ತಿದ್ದೀರಿ. ಕರ್ನಾಟಕಕ್ಕೆ ಬಂದಿದ್ದ ಹಲವರಿಗೆ ಅವರ ರಾಜ್ಯಗಳಲ್ಲಿ ಯಾವುದೇ ರಾಜ ಮರ್ಯಾದೆ ಇಲ್ಲ. ಇಲ್ಲಿ ಅಂತಹವರಿಗೆಲ್ಲಾ ರಾಜ ಮರ್ಯಾದೆ ಕೊಡುತ್ತೀರಾ ಎಂದು ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದನದಲ್ಲಿ ಧರಣಿ ನಡೆಸುತ್ತಿರುವಾಗ ಬಿಜೆಪಿ ಸದಸ್ಯರಿಗೆ ಸ್ಪೀಕರ್ ಖಾದರ್ ಕೂಡ ತರಾಟೆ ತೆಗೆದುಕೊಂಡಿದ್ದಾರೆ. ಸಣ್ಣ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದೀರಿ. ನಿಮ್ಮನ್ನು ಕ್ಷಮಿಸಲು ಸಾಧ್ಯವಿಲ್ಲ. ಸದನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಇಷ್ಟಾದ್ರೂ ಸದನದ ಬಾವಿಗಿಳಿದು ಬಿಜೆಪಿ, ಜೆಡಿಎಸ್ ಸದಸ್ಯರು ಒಟ್ಟಿಗೆ ಧರಣಿ ನಡೆಸಿದ್ದಾರೆ.
ಸದನದಲ್ಲಿ ಘೋಷಣೆ ಕೂಗುವಾಗ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಪಕ್ಷಗಳ ಮೇಲೆ ಗುಡುಗಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಐಎಎಸ್ ಅಧಿಕಾರಿಗಳನ್ನ ನಿಯೋಜಿಸಿರಲಿಲ್ಲವಾ? ಇಂತಹದಕ್ಕೆಲ್ಲಾ ನಾವು ಹೆದರೋದಿಲ್ಲ. ಶಿಷ್ಟಾಚಾರದಂತೆ ನಾವು ನಿಯೋಜಿಸಿದ್ದೇವೆ. ಇದರಲ್ಲಿ ಯಾವುದೇ ಉಲ್ಲಂಘನೆ ಆಗಿಲ್ಲ. ಈಗ ಬೇಕಂತಲೇ ರಾಜಕೀಯ ಕಾರಣಕ್ಕೆ ಧರಣಿ ಮಾಡುತ್ತಿದ್ದಾರೆ. ಇವರಿಗೆ ಮಾತನಾಡಲು ಏನೂ ಉಳಿದಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ