ಸಿದ್ದರಾಮಯ್ಯಗೆ ಎಷ್ಟು ದಿನ ಸಿಎಂ ಆಗಿರುತ್ತೇನೆ ಅನ್ನೋದು ಗೊತ್ತಿಲ್ಲ!
ಕುಮಾರಸ್ವಾಮಿ ನಿಗೂಢ ಶಕ್ತಿಯ ಹೇಳಿಕೆಯ ಹಿಂದಿಗೆ 65 ಟಾರ್ಗೆಟ್
ರಾಜ್ಯದಲ್ಲೊಂದು ಕಾಣದ ಶಕ್ತಿ ಕೆಲಸ ಮಾಡಲಿದೆ ಎಂದ ಹೆಚ್‌ಡಿಕೆ
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತ ಪಡೆದು ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಇಷ್ಟಾದ್ರೂ ರಾಜ್ಯದಲ್ಲಿ ಶೀಘ್ರವೇ ಸರ್ಕಾರ ಪತನವಾಗುತ್ತಾ ಅನ್ನೋ ಚರ್ಚೆ ಜೋರಾಗಿದೆ. ಮಧ್ಯಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ ಬಳಿಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೀಡಿರೋ ನಿಗೂಢ ಶಕ್ತಿಯ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮಧ್ಯಪ್ರದೇಶ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಸಿದ್ದರಾಮಯ್ಯ ಅವರಿಗೆ ನಾನೆಷ್ಟು ದಿನ ಸಿಎಂ ಆಗಿರುತ್ತೇನೆ ಅನ್ನೋದೇ ಗೊತ್ತಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದಿಂದ ಅಭಿವೃದ್ದಿ ನಿಂತು ಹೋಗಿದೆ ಎಂದಿದ್ದರು. ಮೋದಿ ಅವರ ಈ ಹೇಳಿಕೆ ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕುಮಾರಸ್ವಾಮಿ ಅವರ ಈ ನಿಗೂಢ ಶಕ್ತಿಯ ಹೇಳಿಕೆಯ ಹಿಂದೆ ಟಾರ್ಗೆಟ್ 65 ಅಡಗಿದ್ಯಾ ಅನ್ನೋ ಚರ್ಚೆ ರಾಜಕೀಯ ವಲಯದಲ್ಲಿ ನಡೀತಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಬೆನ್ನಲ್ಲೇ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ರಾಜ್ಯದಲ್ಲೊಂದು ಕಾಣದ ಶಕ್ತಿ ಕೆಲಸ ಮಾಡಲಿದೆ. ನಿಗೂಢ ಶಕ್ತಿಯಿಂದ ಏನು ಬೇಕಾದ್ರೂ ಆಗಬಹುದು ಎಂದಿದ್ದಾರೆ. ಹೆಚ್‌ಡಿಕೆ ಹೇಳಿದ ನಿಗೂಢ ಶಕ್ತಿಯಿಂದ ಹೊಸ ಸಂಚಲನ ಸೃಷ್ಟಿಯಾಗುವ ಸಾಧ್ಯತೆ ಇದೆ.
EXCLUSIVE NEWS : ರಾಜ್ಯದಲ್ಲಿ ನಿಗೂಢ ಶಕ್ತಿಯಿದೆ ಶೀಘ್ರದಲ್ಲೇ ಸಿದ್ದು ಸರ್ಕಾರ ಬೀಳುತ್ತೆ
Click Here to Watch Live Updates
LIVE Link : https://t.co/vIQrSuaVpj@hd_kumaraswamy @siddaramaiah @DKShivakumar @INCKarnataka pic.twitter.com/vo4DfdWi6D— NewsFirst Kannada (@NewsFirstKan) November 10, 2023
ಏನಿದು ಟಾರ್ಗೆಟ್ 65?
ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿ ನಾಯಕರು ತೆರೆಮರೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕುತ್ತಿದ್ದಾರೆ ಎನ್ನಲಾಗಿದೆ. ಆಪರೇಷನ್ ಕಮಲಕ್ಕೆ ಬಿಜೆಪಿ ಉನ್ನತ ಸ್ಥಾನದಲ್ಲಿರುವವರೇ ನೇತೃತ್ವ ವಹಿಸುತ್ತಿದ್ದಾರೆ. ಅಂದ್ರೆ, ಕಾಂಗ್ರೆಸ್ನ 65 ಶಾಸಕರನ್ನ ಸೆಳೆಯುವುದಕ್ಕೆ ಬಿಜೆಪಿ ‘ಹೈ’ಕಮಾಂಡ್ ರಣತಂತ್ರ ಎಣಿಯುತ್ತಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಪ್ರಮುಖವಾಗಿ ಮೊದಲ ಬಾರಿ ಶಾಸಕರಾದವರ ಮೇಲೆ ಇದೆ ಬಿಜೆಪಿ ನಾಯಕರು ಕಣ್ಣಿಟ್ಟಿದ್ದಾರೆ. ಇದರ ಜೊತೆಗೆ ಸಚಿವ ಸ್ಥಾನ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗದ ಶಾಸಕರು, ಅನುದಾನಗಳು ಸಿಗದೆ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿರುವವರು ಹೀಗೆ ಆಪರೇಷನ್ ಕಮಲಕ್ಕೆ ಕೇಸರಿ ಪಡೆ ಪಟ್ಟಿ ಮಾಡಿಕೊಂಡಿದೆ ಎನ್ನಲಾಗಿದೆ. ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ಅವರು ಹೇಳಿದ ನಿಗೂಢ ಶಕ್ತಿಯಿಂದ ಟಾರ್ಗೆಟ್ 65 ಕಾರ್ಯಾಚರಣೆಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ