newsfirstkannada.com

ಸಿದ್ದು, ಡಿಕೆಶಿ ಜೋಡೆತ್ತಿನ ವಿರುದ್ಧ ಹೆಚ್​​ಡಿಕೆ ಒಂಟಿ ಸಲಗ; ಕಾಂಗ್ರೆಸ್​ ವಿರುದ್ಧ ಮಾಜಿ ಸಿಎಂ ಮತ್ತೆ ಆರೋಪ

Share :

06-08-2023

    ‘ಕೈ’ ಸರ್ಕಾರದ ವಿರುದ್ಧ ದಳಪತಿ ದಶಾವತಾರ

    ಯಕ್ಷ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಮಾಜಿ ಸಿಎಂ

    ಕಾಂಗ್ರೆಸ್​ನವರೇ ಪೆನ್​​​ಡ್ರೈವ್​ ಸಿದ್ಧಪಡಿಸಿ ಕೊಟ್ರಾ?

ಬೆಂಗಳೂರು: ಹೆಚ್​​ಡಿ ಕುಮಾರಸ್ವಾಮಿ ತೋರಿಸಿದ್ದ ಪೆನ್​​ಡ್ರೈವ್​​​ ಏನಾಯ್ತು? ಆ ಪೆನ್​​​ಡ್ರೈವ್​ ಕಾಂಗ್ರೆಸ್​ನವರೇ ಸಿದ್ಧಪಡಿಸಿ ಕೊಟ್ರಾ? ಬ್ರ್ಯಾಂಡ್​ ಬೆಂಗಳೂರು ಹೆಸರಲ್ಲಿ ಏನಾಗ್ತಿದೆ? ಗೃಹಜ್ಯೋತಿಯ ಹಕೀಕತ್ತು ಏನು? ಈ ಎಲ್ಲಾ ಪ್ರಶ್ನೆಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಉತ್ತರ ಕೊಟ್ಟಿದ್ದಾರೆ. ಹಿಟ್​ ಆ್ಯಂಡ್​​ ರನ್​ ಎಂಬ ತಮ್ಮ ವಿರುದ್ಧದ ಆರೋಪಕ್ಕೆ ಸಿಡಿದೆದ್ದಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ ಜೋಡೆತ್ತಿನ ವಿರುದ್ಧ ಹೆಚ್​ಡಿಕೆ ಒಂಟಿ ಸಲಗದ ಸಮರಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಯುರೋಪ್​​ನಿಂದ ರಿಟರ್ನ್​ ಆಗುತ್ತಲೇ ಮಾಜಿ ಸಿಎಂ ಹೆಚ್​ಡಿಕೆ, ದಿಢೀರ್​ ಭ್ರಷ್ಟಾಚಾರ ಬಾಂಬ್​ ಎಸೆದಿದ್ದಾರೆ. ದಶದಿನದ ಬಳಿಕ ಮರಳಿದ ದಳಪತಿ, ಸರ್ಕಾರದ ವಿರುದ್ಧ ದಶಾವತಾರ ತಾಳಿದಂತೆ ಕಾಣಿಸುತ್ತಿದೆ. ಸುದ್ದಿಗೋಷ್ಠಿ ನಡೆಸಿದ ಹೆಚ್​ಡಿ ಕುಮಾರಸ್ವಾಮಿ, ಸರ್ಕಾರದ ಮೇಲೆ ಗಂಭೀರ ಆರೋಪಗಳ ಪಟ್ಟಿಯನ್ನೆ ಹೊರೆಸಿದ್ದಾರೆ.

ಹಿಟ್​ ಆ್ಯಂಡ್​ ರನ್​ ವ್ಯಕ್ತಿ ನಾನಲ್ಲ.. 40% ದಾಖಲೆ ಕೊಡಿ!

ನಿನ್ನೆ ತಮ್ಮ ಹೇಳಿಕೆಗೆ ಸಿಎಂ ಕೊಟ್ಟ ಉತ್ತರ ಹೆಚ್​ಡಿಕೆ ಪಿತ್ತ ನೆತ್ತಿಗೇರಿಸಿತ್ತು. ಕೆಲ ವಿಚಾರ ಪ್ರಸ್ತಾಪ ಮಾಡೋದು ಹುಡುಕಾಟಿಕೆ ಅಲ್ಲ. ನಾನು ಹಿಟ್ ಅಂಡ್ ರನ್ ವ್ಯಕ್ತಿಯಲ್ಲ. 40% ಗುತ್ತಿಗೆದಾರ ಪತ್ರ, 40% ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್​ ಈವರೆಗೆ ಒಂದಾದ್ರೂ ದಾಖಲೆ ಕೊಟ್ರಾ? ಹಾಗಾದ್ರೆ ಯಾರು ಹಿಟ್​ ಆಂಡ್​ ರನ್​ ಅನ್ನೋದು ಹೆಚ್​ಡಿಕೆ ಪ್ರಶ್ನೆ ಆಗಿತ್ತು.

ಇವರೇ ನನಗೆ ಪೆನ್​ಡ್ರೈವ್​ ತಯಾರಿ ಮಾಡಿಕೊಡ್ತಿದ್ದಾರೆ!

ಪೆನ್​ಡ್ರೈವ್​​​ ವಿಚಾರ ಪ್ರಸ್ತಾಪಿಸಿದ ಹೆಚ್​​ಡಿ ಕುಮಾರಸ್ವಾಮಿ ಪೆನ್​ಡ್ರೈವ್​ಗಾಗಿ ಎಸ್​ಪಿ ರೋಡ್​ಗೆ ಯಾಕ್​ ಹೋಗಲಿ, ಇವರೇ ನನಗೆ ಪೆನ್ ಡ್ರೈವ್ ತಯಾರಿ ಮಾಡಿಕೊಡ್ತಿದ್ದಾರೆ. ಒಂದು ಪೆನ್​ಡ್ರೈವ್​ ತೋರಿಸಿದ್ದಕ್ಕೆ ಎಷ್ಟು ಮಂತ್ರಿಗಳು ನಿದ್ದೆಗೆಟ್ಟರು? ಆಯ್ತು ಪೆನ್​ಡ್ರೈವ್​ ರಿಲೀಸ್​ ಮಾಡುತ್ತೇನೆ. ಸರ್ಕಾರಕ್ಕೆ ಧಮ್​ ತಾಕತ್​ ಇದ್ರೆ ತನಿಖೆ ಮಾಡಿ ಕ್ರಮ ತಗೊಳ್ತಿರಾ? ಎಂದರು.

ಯಾವ ರೀತಿ ನುಡಿದಂತೆ ನಡೆದಿದ್ದೀರಿ ತೋರಿಸಿ?

ಇನ್ನು, ಕಾಂಗ್ರೆಸ್​ನ ನುಡಿದಂತೆ ನಡೆದಿದ್ದೇವೆ ಎಂಬ ಜಾಹಿರಾತನ್ನ ಕುಟುಕಿದ ಕುಮಾರಸ್ವಾಮಿ ಅಲ್ಲೂ ಕೂಡ ಪ್ರಶ್ನೆ ಎತ್ತಿದ್ದರು. ನೀವು ಕರೆಂಟ್ ಕೊಟ್ಟ ನಂತರ ಪಾಪ ಅವರು. ಬೆಳಕು ಕಾಣುತ್ತಿದ್ದಾರೆ ಅಲ್ವಾ ಅಂತ ಗೈಡ್​ಲೈನ್ಸ್​​ಗಳ ಬಗ್ಗೆ ತಕರಾರು ಇಲ್ಲ ಅಂತಾನೆ ಆಕ್ಷೇಪ ಮುಂದಿಟ್ಟರು.

200 ಯುನಿಟ್ ಉಚಿತ, ಟೋಪಿ ಹಾಕೋಕೆ ಇತಿಮಿತಿ ಇದೆ

ಇನ್ನು, ಗೃಹಜ್ಯೋತಿ ಬಗ್ಗೆ ಕುಮಾರಸ್ವಾಮಿ ತಗಾದೆ ತೆಗೆದರು. 200 ಯುನಿಟ್ ಉಚಿತ ಅಂತ ಹೇಳಿದರು. 230, 235 ಯುನಿಟ್ ಅವರಿಗೂ ಬಿಲ್ ನೀಡಿದ್ದೀರಾ? 10% ಹೆಚ್ಚುವರಿ ಅವಕಾಶ ನೀಡಿದರು. ಅವರಿಗೆ ಬಿಲ್ ಕಳಿಯಿಸಿದ್ದೀರಾ? ಟೋಪಿ ಹಾಕೋಕೆ ಒಂದು ಇತಿಮಿತಿ ಇದೆ ಅಂತ ತರಾಟೆಗೆ ತೆಗೆದುಕೊಂಡರು. ಗ್ಯಾರಂಟಿಗಾಗಿ ಅಭಿವೃದ್ಧಿ ಕೆಲಸಗಳಿಗೆ ಹಣ ಇಲ್ಲ ಅಂತಿದ್ದಾರೆ ಅಂತ ಟೀಕಿಸಿದ್ದರು.

ಬ್ರ್ಯಾಂಡ್​ ಬೆಂಗಳೂರು ಹೆಸರಲ್ಲಿ ಕಮಿಷನ್ ಶುರುವಾಗಿದೆ

ಬೆಂಗಳೂರನ್ನು ಸಿಂಗಾಪುರ ಮಾಡಲು ಕೃಷ್ಣ ಕಂಡ ಕನಸಿನ ಹಿಂದೆ ಬಿದ್ದಿರುವ ಡಿಸಿಎಂ ಡಿಕೆ ಶಿವಕುಮಾರ್​ಗೆ ಡಿಚ್ಚಿ ಕೊಟ್ಟ ಹೆಚ್​ಡಿ ಕುಮಾರಸ್ವಾಮಿ ಬ್ರ್ಯಾಂಡ್​​ ಬೆಂಗಳೂರು ಹೆಸರಲ್ಲಿ ಕಮಿಷನ್​​ ಶುರುವಾಗಿದೆ ಅಂತ ಹೊಸ ಬಾಂಬ್​​ ಎಸೆದಿದ್ದಾರೆ. 15-20 ವರ್ಷ ಕೆಲಸ ಮಾಡಿದ ಒಬ್ಬ ಚೀಫ್ ಇಂಜಿನಿಯರ್​ನ್ನ ಇರಿಸಲಾಗಿದೆ. ಫೈಲ್ ಟ್ರಾನ್ಸ್‌ಫರ್ ಮಾಡೋದಕ್ಕೆ 15% ಕೊಡಬೇಕಿದೆ ಅಂತ ಹೇಳಿದರು.

ಈ ಜನ್ಮದಲ್ಲಿ ಡಿಕೆಶಿಗೆ ನಾನು ಅಣ್ಣನಾಗಲು ಸಾಧ್ಯವಿಲ್ಲ

ಇನ್ನು, ಡಿಕೆಶಿ ಮಾಡಿದ್ದ ವ್ಯಂಗ್ಯಕ್ಕೆ ಇವತ್ತು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಈ ಜನ್ಮದಲ್ಲಿ ಡಿಕೆಶಿಗೆ ನಾನು ಅಣ್ಣನಾಗಲು ಸಾಧ್ಯವಿಲ್ಲ ಎಂದಿದ್ದಾರೆ. ಒಟ್ಟಾರೆ, ಕಾಂಗ್ರೆಸ್​​​ ವಿರುದ್ಧ ವಿಪಕ್ಷ ಬಿಜೆಪಿ ಸೈಲೆಂಟ್​​​ ಆಗಿದೆ. ಆದರೆ ದಳಪತಿ ಮಾತ್ರ ವೈಲೆಂಟ್​​​ ಆಗಿದ್ದಾರೆ. ಸದ್ಯ ಕುಮಾರಸ್ವಾಮಿ ಹೇಳಿಕೆಯಿಂದ ಕಾಂಗ್ರೆಸ್​ನಲ್ಲಿ ಮತ್ತೆ ತಳಮಳ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿದ್ದು, ಡಿಕೆಶಿ ಜೋಡೆತ್ತಿನ ವಿರುದ್ಧ ಹೆಚ್​​ಡಿಕೆ ಒಂಟಿ ಸಲಗ; ಕಾಂಗ್ರೆಸ್​ ವಿರುದ್ಧ ಮಾಜಿ ಸಿಎಂ ಮತ್ತೆ ಆರೋಪ

https://newsfirstlive.com/wp-content/uploads/2023/08/hd-kumarsami.jpg

Load More