newsfirstkannada.com

ಕುಮಾರಸ್ವಾಮಿ ಪೆನ್‌ಡ್ರೈವ್‌ ಆರೋಪ.. ಹಾವಿನ ಬುಟ್ಟಿ ಅಂತ ಗೇಲಿ ಮಾಡಿದ ಕಾಂಗ್ರೆಸ್; ಹಿಟ್ & ರನ್​ಗೆ ಗುರಿ ಆಗ್ತಾರಾ ಮಾಜಿ ಸಿಎಂ?

Share :

10-07-2023

    ಕಾಂಗ್ರೆಸ್‌ಗೆ ಶಾಕ್ ಕೊಡ್ತಾರಾ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ?

    ಪೆನ್‌ಡ್ರೈವ್‌ ನನಗ್ಯಾವ ಕೂತುಹಲ ಇಲ್ಲ ಎಂದ ಚೆಲುವರಾಯ ಸ್ವಾಮಿ

    ಪೆನ್‌ಡ್ರೈವ್ ಪಾಲಿಟಿಕ್ಸ್, ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಬಾಂಬ್

ರಾಜ್ಯದಲ್ಲಿ ಪೆನ್‌ಡ್ರೈವ್ ಪಾಲಿಟಿಕ್ಸ್ ಜೋರಾಗಿದೆ. ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಬಾಂಬ್ ಸಿಡಿಸಿದ್ದ ದಳಪತಿ ಇದೀಗ ಪೆನ್‌ಡ್ರೈವ್ ಅಸ್ತ್ರ ಬಿಟ್ಟಿದ್ದಾರೆ. ಅದರಲ್ಲೂ ಸಿಎಂ ಪುತ್ರ ಯತೀಂದ್ರ ವಿರುದ್ಧ ವೈಎಸ್‌ಟಿ ಆರೋಪ ಮಾಡಿದ್ದಾರೆ. ಇವತ್ತು ಪೆನ್‌ಡ್ರೈವ್‌ನ ರಹಸ್ಯವನ್ನ ಹೆಚ್‌ಡಿಕೆ ರಿಲೀಸ್ ಮಾಡೋ ಸಾಧ್ಯತೆ ಇದೆ. ಆದ್ರೆ, ಕುಮಾರಸ್ವಾಮಿ ಪೆನ್‌ಡ್ರೈವ್ ಆರೋಪದ ಬಗ್ಗೆ ಕೈ ನಾಯಕರು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಪೆನ್‌ಡ್ರೈವ್ ಪಾಲಿಟಿಕ್ಸ್, ರಾಜ್ಯ ಕಾಂಗ್ರೆಸ್ ಸರ್ಕಾರವನ್ನ ತಲ್ಲಣಗೊಳಿಸಿದೆ. ಕಪ್ಪೆಚಿಪ್ಪಿನ ರೀತಿ ಇರುವ ಈ ಚಿಪ್ಪಿನಲ್ಲಿ ವರ್ಗಾವಣೆ ದಂಧೆಯ ಅಸಲಿ ಕಥೆ ಅಡಗಿದೆ ಅಂತ ಮಾಜಿ ಸಿಎಂ ಹೆಚ್‌ಡಿಕೆ ಡಂಗೂರ ಸಾರಿದ್ದಾರೆ. ಕಳೆದ ಭಾನುವಾರ ಅಧಿವೇಶನದಲ್ಲಿ ಪೆನ್‌ಡ್ರೈವ್ ಪ್ರದರ್ಶಿಸಿದ ಕುಮಾರಸ್ವಾಮಿ, ವೈಎಸ್​ಟಿ ಎಂಬ ಹೊಸ ಟ್ಯಾಕ್ಸ್ ಜಾರಿ ಆಗಿದೆ ಅಂತ ಹೇಳಿಕೆ ನೀಡಿ ಹಲ್ಚಲ್ ಎಬ್ಬಿಸಿದ್ರು. ಇದೀಗ ಇವತ್ತು ಸದನದಲ್ಲಿ ಪೆನ್‌ಡ್ರೈವ್‌ ಗದ್ದಲ ಸೃಷ್ಟಿಸುವ ಸಾಧ್ಯತೆ ಇದೆ.

ಇವತ್ತು ಸಿಡಿಯುತ್ತಾ ‘ದಳಪತಿ’ ಪೆನ್‌ಡ್ರೈವ್ ಬಾಂಬ್‌?

ಕೈಯ್ಯಲ್ಲಿ ಬ್ಲಾಕ್‌ ಅಂಡ್ ರೆಡ್‌ ಪೆನ್‌ಡ್ರೈವ್ ಹಿಡಿದು ಕುಮಾರಸ್ವಾಮಿ ವೈಎಸ್‌ಟಿ ಆರೋಪ ಮಾಡಿದ್ರು. ಸಿಎಂ ಸಿದ್ದರಾಮಯ್ಯ ಪುತ್ರನ ವಿರುದ್ಧ ವರ್ಗಾವಣೆ ದಂಧೆಯ ಮಾಹಿತಿ ಇದೆ ಅಂತಾ ಪೆನ್‌ಡ್ರೈವ್‌ ಬಾಂಬ್ ಸಿಡಿಸಿದ್ರು. ಅಲ್ಲದೇ ಸೋಮವಾರ ಅಂದ್ರೆ ಇವತ್ತು ಪೆನ್‌ಡ್ರೈವ್‌ನಲ್ಲಿರೋ ರಹಸ್ಯವನ್ನ ರಿವೀಲ್ ಮಾಡೋದಾಗಿ ಹೇಳಿದ್ರು. ಇದೀಗ ಇಂದು ಸದನದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪೆನ್ ಡ್ರೈವ್ ಬಿಡುಗಡೆ ಮಾಡ್ತಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಹಾಗಾದ್ರೆ ಇವತ್ತು ‘ವೈಎಸ್‌ಟಿ’ ಪೆನ್‌ಡ್ರೈವ್ ರಿವೀಲ್ ಆಗುತ್ತಾ? ಕಾಂಗ್ರೆಸ್‌ಗೆ ಹೆಚ್.ಡಿ. ಕುಮಾರಸ್ವಾಮಿ ಶಾಕ್ ಕೊಡ್ತಾರಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಹಲ್‌ಚಲ್ ಎಬ್ಬಿಸಿದೆ.

ಪೆನ್‌ಡ್ರೈವ್ ರಹಸ್ಯ ರಿವೀಲ್?

  • ಪೆನ್‌ಡ್ರೈವ್‌ನಲ್ಲಿ ಅಡಗಿದ್ಯಾ ವರ್ಗಾವಣೆ ದಂಧೆ ಆಡಿಯೋ..?
  • ಇವತ್ತು ಹೆಚ್‌ಡಿಕೆ ಆಡಿಯೋವನ್ನ ರಿವೀಲ್ ಮಾಡೋ ಸಾಧ್ಯತೆ
  • ಆಡಿಯೋ ಸಚಿವರದ್ದೋ, ಕೈ ನಾಯಕನದ್ದೋ ಎಂಬ ಕೌತುಕ
  • ಅಲ್ಲದೇ ಸದನದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಿರೋ ಕುಮಾರಸ್ವಾಮಿ
  • ಆಡಿಯೋ ಬಿಡುಗಡೆ ಬಳಿಕ ಜನಪ್ರತಿನಿಧಿ ರಾಜೀನಾಮೆಗೆ ಆಗ್ರಹ
  • ಹೆಚ್‌ಡಿಕೆಗೆ ಜೆಡಿಎಸ್ ನಾಯಕರು, ಬಿಜೆಪಿ ನಾಯಕರು ಸಾಥ್‌

ದಳಪತಿ ಏನೋ ಕಾಂಗ್ರೆಸ್ ವಿರುದ್ಧ ಪೆನ್‌ಡ್ರೈವ್ ಅಸ್ತ್ರ ಪ್ರಯೋಗಿಸಲು ಸಜ್ಜಾಗಿದ್ದಾರೆ. ಆದ್ರೆ, ಇದನ್ನ ನೋಡ್ತಾ ಕೈ ನಾಯಕರು ಸುಮ್ಮನೇ ಕೂತಿಲ್ಲ. ಬದಲಾಗಿ ಪೆನ್‌ಡ್ರೈವ್ ಹಿಡಿದಿರುವ ಹೆಚ್‌ಡಿಕೆಗೆ ತಿರುಗೇಟು ಕೊಡುತ್ತಲೇ ಇದ್ದಾರೆ.

ಪೆನ್‌ಡ್ರೈವ್‌ ಅಸ್ತ್ರಕ್ಕೆ ಮಿಮಿಕ್ರಿ ಎಂದ ಎಂ.ಬಿ. ಪಾಟೀಲ್‌

ವರ್ಗಾವಣೆ ದಂಧೆಯ ಆಡಿಯೋ ದಾಖಲೆ ಬಿಡುಗಡೆಗೆ ದಳಪತಿ ಸಜ್ಜಾಗಿದ್ರೆ, ಇತ್ತ ಕೈ ನಾಯಕರು ಹೆಚ್‌ಡಿಕೆ ವಿರುದ್ಧ ಮಾತಿನ ಮಳೆ ಸುರಿಸಿದ್ದಾರೆ. ಹೆಚ್‌ಡಿಕೆ ಪೆನ್‌ಡ್ರೈವ್ ಅಸ್ತ್ರ ಮಿಮಿಕ್ರಿ ಇದ್ದಂತೆ ಅಂತಾ ಸಚಿವ ಎಂ.ಬಿ. ಪಾಟೀಲ್ ವ್ಯಂಗ್ಯವಾಡಿದ್ದಾರೆ. ಇತ್ತ ಪೆನ್‌ಡ್ರೈವ್ ಬಗ್ಗೆ ನಮಗ್ಯಾವ ಕುತೂಹಲ ಇಲ್ಲ ಅಂತಾ ಹೆಚ್‌ಡಿಕೆಗೆ ಸಚಿವ ಚೆಲುವರಾಯಸ್ವಾಮಿ ಡಿಚ್ಚಿ ಕೊಟ್ಟಿದ್ದಾರೆ. ಕುಮಾರಸ್ವಾಮಿಯದ್ದು ಬರೀ ಹಿಟ್‌ ಅಂಡ್ ರನ್ ಅಂತಾ ಸಚಿವ ಶರಣು ಪ್ರಕಾಶ್ ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ.

‘ಅವರು ಮಿಮಿಕ್ರಿ ಮಾಡ್ತಾರೆ’

ಪೆನ್‌ಡ್ರೈವ್‌ನಲ್ಲಿ ಏನಾದರೂ ಸತ್ಯವಾದದ್ದು ಇತ್ತು ಎಂದರೆ ಅದರ ಸತ್ಯಾಸತೆ ತಿಳಿದುಕೊಳ್ಳಬೇಕಾಗುತ್ತದೆ. ಆ ಪೆನ್‌ಡ್ರೈವ್‌ನಲ್ಲಿನ ವಾಯ್ಸ್​ ಡಿಟಕ್ಷನ್ ಅನ್ನು ತಿಳಿದು ಆ ಮೇಲೆ ತನಿಖೆ ಮಾಡಬೇಕು ಆಗುತ್ತದೆ. ಕೆಲವೊಮ್ಮೆ ಮಿಮಿಕ್ರಿ ಮಾಡಿರುತ್ತಾರೆ. ಯಾರ ಮಾಡಿದ್ದಾರೆ, ಯಾವ ಸಂದರ್ಭದಲ್ಲಿ ಮಾಡಿದ್ದಾರೆ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಆ ಬಗ್ಗೆ ನಾವು ಉತ್ತರ ಕೊಡುತ್ತೇವೆ.

ಎಂ.ಬಿ.ಪಾಟೀಲ್‌, ಸಚಿವ

ಪೆನ್‌ಡ್ರೈವ್ ಬಗ್ಗೆ ಕುತೂಹಲ ಇಲ್ಲ

ಸರ್ಕಾರದ ವಿರುದ್ಧ ಏನಾದ್ರೂ ದಾಖಲೆಗಳಿದ್ದರೇ ಬಿಡುಗಡೆ ಮಾಡಲಿ. ಯಾರ ಬೇಡ ಅಂತಾರೆ. ಅವರು ಎಷ್ಟು ಬಾರಿ ಹೇಳಿದ್ದಾರೆ ಹೇಳಿ. ಈ ಬಗ್ಗೆ ನನಗೇನು ಕುತೂಹಲ ಇಲ್ಲ.

ಚೆಲುವರಾಯಸ್ವಾಮಿ, ಸಚಿವ

ಹೆಚ್‌ಡಿಕೆ ಪೆನ್‌ಡ್ರೈವ್‌ ಆರೋಪವನ್ನ ಹಾವಿನ ಬುಟ್ಟಿ ಅಂತ ಗೇಲಿ ಮಾಡ್ತಿರುವ ಕಾಂಗ್ರೆಸ್​ಗೆ ಮಾಜಿ ಸಿಎಂ ಹೆಚ್‌ಡಿಕೆ ಯಾವ ರೀತಿ ಉತ್ತರ ನೀಡ್ತಾರೆ ಅನ್ನೋ ಕುತೂಹಲ ಇದೆ. ಅಷ್ಟಕ್ಕೂ ಹೆಚ್‌ಡಿಕೆ ಬುಟ್ಟಿಯೊಳಗೆ ಹಾವು ಇದ್ಯಾ? ಇದ್ರೂ ಇವತ್ತೇ ಬಿಡ್ತಾರಾ? ಅಥವಾ ಮತ್ತೆ ಹಿಟ್ ರನ್ ಏಟಿಗೆ ಗುರಿ ಆಗ್ತಾರಾ ಲೆಟ್ಸ್‌ ವೇಯ್ಟ್‌ ಅಂಡ್ ವಾಚ್‌.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಮಾರಸ್ವಾಮಿ ಪೆನ್‌ಡ್ರೈವ್‌ ಆರೋಪ.. ಹಾವಿನ ಬುಟ್ಟಿ ಅಂತ ಗೇಲಿ ಮಾಡಿದ ಕಾಂಗ್ರೆಸ್; ಹಿಟ್ & ರನ್​ಗೆ ಗುರಿ ಆಗ್ತಾರಾ ಮಾಜಿ ಸಿಎಂ?

https://newsfirstlive.com/wp-content/uploads/2023/07/HDK-3.jpg

Load More