newsfirstkannada.com

×

ಈ ಸರ್ಕಾರ ನನ್ನನ್ನು ಏನೂ ಮಾಡೋಕೆ ಆಗಲ್ಲ -ಸಿದ್ದರಾಮಯ್ಯಗೆ ಸವಾಲೆಸೆದ HD ಕುಮಾರಸ್ವಾಮಿ

Share :

Published September 28, 2024 at 8:11am

    ಈ ಸರ್ಕಾರದಲ್ಲಿರುವ ಹಿರಿಯ ಪೊಲೀಸರು ದರೋಡೆಕೋರರು

    ಇಂದು ಅಧಿಕಾರಿಗೆ ಸಂಬಂಧಿಸಿದ ದಾಖಲೆ ರಿಲೀಸ್ ಮಾಡ್ತಾರಾ HDK?

    ಡಿ-ನೋಟಿಫಿಕೇಷನ್​- ಕೇಂದ್ರ ಸಚಿವರಿಗೆ ಲೋಕಾಯುಕ್ತ ಶಾಕ್

ಗಂಗೇನಹಳ್ಳಿ ಡಿ-ನೋಟಿಫಿಕೇಷನ್​​ ಕೇಸ್​​ ಸಂಬಂಧ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದರು. DYSP ಬಸವರಾಜ್ ಮುಗುದಂ ಮುಂದೆ ಹಾಜರಾಗಿದ್ದು ಸುಮಾರು 2 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ.

ವಿಚಾರಣೆ ಎದುರಿಸಿ ಹೊರಬರುತ್ತಲ್ಲೇ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ನನ್ನನ್ನು ದರೋಡೆಕೋರರು ಎಂದಿದ್ದಾರೆ, ಈ ಬಗ್ಗೆ ದಾಖಲೆ ಬಿಡುಗಡೆ ಮಾಡ್ತೀನಿ ಅಂತ ಗುಡುಗಿದ್ದಾರೆ. ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್​ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದು ಮೋದಿ ಪರ ಸಮರ್ಥನೆ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: ಮುಡಾ ಕೇಸ್​; ಸಿಎಂ ಸಿದ್ದರಾಮಯ್ಯ ವಿರುದ್ಧ ಯಾವ್ಯಾವ IPC ಸೆಕ್ಷನ್​ ಏನ್ ಹೇಳುತ್ತೆ?

ಲೋಕಾಯುಕ್ತ ವಿಚಾರಣೆ ಬೆನ್ನಲ್ಲೇ ಸಿಡಿದೆದ್ದ ದಳಪತಿ

ಮುಡಾ ಭೂ ಸುಳಿಯಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್​ಐಆರ್​ ಆಗಿದೆ. ಮತ್ತೊಂದೆಡೆ ಹಳೆ ಡಿ-ನೋಟಿಫಿಕೇಷನ್​ನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಲೋಕಾಯುಕ್ತ ಶಾಕ್​ ನೀಡಿದೆ. ಗಂಗೇನಹಳ್ಳಿ ಡಿ-ನೋಟಿಫಿಕೇಷನ್​ ಕೇಸ್​ನಲ್ಲಿ ಲೋಕಾ ವಿಚಾರಣೆ ಎದುರಿಸಿದ ದಳಪತಿ, ಹೊರ ಬರ್ತಿದ್ದಂತೆ ರಾಜ್ಯ ಸರ್ಕಾರದ ವಿರುದ್ಧ ನಿಗಿನಿಗಿ ಕೆಂಡಕಾರಿದ್ದಾರೆ.

2 ಗಂಟೆಗಳ ಕಾಲ ಲೋಕಾಯುಕ್ತ ವಿಚಾರಣೆ ಎದರುಸಿದ ಹೆಚ್​ಡಿಕೆ

ದೆಹಲಿಯಿಂದ ನೇರವಾಗಿ ಲೋಕಾಯುಕ್ತ ಕಚೇರಿಗೆ ಆಗಮಿಸಿದ ಹೆಚ್​ಡಿಕೆ, ತನಿಖಾಧಿಕಾರಿ ಡಿವೈಎಸ್​ಪಿ ಬಸವರಾಜ ಮುಗುದಂ ಮುಂದೆ ಹಾಜರಾದ್ರು. ಈ ವೇಳೆ ತನಿಖಾಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಹೆಚ್​.ಡಿ.ಕುಮಾರಸ್ವಾಮಿ ಉತ್ತರಿಸಿದ್ದು, ಈ ಸರ್ಕಾರದಿಂದ ನನ್ನ ಏನೂ ಮಾಡಲು ಸಾಧ್ಯವಿಲ್ಲ ಎಂದು ಠಕ್ಕರ್​ ನೀಡಿದ್ದಾರೆ.

‘ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ’

ಯಾವುದೇ ಗಂಡಾಂತರ ಬರುವ ಕೆಲಸ ಅಧಿಕಾರದಲ್ಲಿದ್ದಾಗ ಮಾಡಿಲ್ಲ. ಕಾನೂನು ಬಾಹಿರವಾಗಿ ಮಾಡುವಂತವನಲ್ಲ ನಾನು. ಎಂದೂ ಸಹ ಈ ಸರ್ಕಾರದಲ್ಲಿ ನನ್ನನ್ನು ಏನೂ ಮಾಡೋಕೆ ಆಗಲ್ಲ. ಅವರು ಏನು ಪ್ರಶ್ನೆ ಕೇಳಿದ್ದರೋ ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಬಂದಿದ್ದೇನೆ. ಇನ್ನುಳಿದ ತನಿಖೆಗಳು ಮುಂದುವರೆಸಲಿ. ಕಾನೂನು ವ್ಯಾಪ್ತಿ ಒಳಗೆ ಕ್ರಮ ತೆಗೆದುಕೊಳ್ಳಬಹುದು. ಇದನ್ನು ತೆಗೆದುಕೊಳ್ಳಲು ಸರ್ಕಾರ ಮುಕ್ತವಾಗಿದೆ.

ರಾಜ್ಯದ ಜನರಿಗೆ ಕೊಡುತ್ತಿರುವ ಒಳ್ಳೆಯ ಕಾರ್ಯಕ್ರಮಗಳನ್ನು ಸಹಿಸಲಾರದೇ ಬಿಜೆಪಿ-ಜೆಡಿಎಸ್ ಸೇರಿ ನಮ್ಮ ಸರ್ಕಾರ ತೆಗೆಯಬೇಕಂತ ಸಿದ್ದರಾಮಯ್ಯ ಪದೇ ಪದೆ ಹೇಳುತ್ತಿದ್ದಾರೆ. ಇದಕ್ಕೆ ನಾಚಿಕೆ ಆಗಬೇಕು ನಿಮಗೆ. ಮೋದಿ ಬಗ್ಗೆ ಮಾತನಾಡಲು ನಿಮಗೆ ಏನ್ ನೈತಿಕತೆ ಇದೆ. ಏನ್ ಇದೆ ಸಿದ್ದರಾಮಯ್ಯನವರಿಗೆ. ನೈತಿಕತೆ ಇದೆಯಾ?.

ಹೆಚ್​.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

ರಾಜೀನಾಮೆಗೆ ಆಗ್ರಹಿಸಿದ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮಧ್ಯೆ ರಾಜೀನಾಮೆ ಜಟಾಪಟಿ ಜೋರಾಗಿದೆ. ಬೇಲ್​ ಮೇಲೆ ಇರುವ ಕುಮಾರಸ್ವಾಮಿ ಮೊದ್ಲು ರಾಜೀನಾಮೆ ನೀಡಲಿ ಎಂಬ ಸಿದ್ದರಾಮಯ್ಯರ ಹೇಳಿಕೆಗೆ ದಳಪತಿ ಭರ್ಜರಿ ತಿರುಗೇಟು ನೀಡಿದ್ದಾರೆ. ಹಾಗೂ ಮೋದಿ ರಾಜೀನಾಮೆ ಕೇಳುವ ನೈತಿಕತೆ ನಿಮಗಿಲ್ಲ ಎಂದು ಕಿಡಿಕಾರಿದ್ದಾರೆ. ಡಿ-ನೋಟಿಫಿಕೇಷನ್​ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದ ಸಚಿವ ಕೃಷ್ಣಬೈರೇಗೌಡ ವಿರುದ್ಧವೂ ಹೆಚ್​ಡಿಕೆ ಕಿಡಿಕಾರಿದ್ದಾರೆ. ಮೈತ್ರಿ ಸರ್ಕಾರದ ವೇಳೆ ನಾನು ಸಿಎಂ ಆಗಿದ್ದಾಗ ನನ್ನ ಸಚಿವ ಸಂಪುಟದಲ್ಲಿ ಇದ್ರಲ್ಲ. ಆಗ ನಿಮಗೆ ಅಕ್ರಮದ ಬಗ್ಗೆ ನೆನಪಾಗಲಿಲ್ವ ಎಂದು ವಾಗ್ದಾಳಿ ನಡೆಸಿದ್ದಾರೆ. ಕೆಲವರು ನನ್ನನ್ನು ದರೋಡೆಕೋರ ಎಂದಿದ್ದಾರೆ. ಇದಕ್ಕೆಲ್ಲ ಇವತ್ತು ದಾಖಲೆ ಸಮೇತ ಉತ್ತರ ಕೊಡ್ತೀನಿ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: DCM ಡಿ.ಕೆ ಶಿವಕುಮಾರ್ ರಾತ್ರಿ 2 ಗಂಟೆವರೆಗೆ ಸಿಲಿಕಾನ್ ಸಿಟಿ ರೌಂಡ್ಸ್​.. ಕಾರಣವೇನು?

ಆವತ್ತು ಕುಮಾರಸ್ವಾಮಿ ಕೆಟ್ಟವರು ಇರಲಿಲ್ವಾ..?

2015ರಲ್ಲಿ ನನ್ನ ಮೇಲೆ ಕೇಸ್ ಹಾಕಿಸಿದ್ದು ಇವರೇ ಅಲ್ಲವೇ. ಯಾವ ಮುಖ ಇಟ್ಟುಕೊಂಡು ನನ್ನ ಮುಖ್ಯಮಂತ್ರಿ ಮಾಡಿಕೊಂಡಿದ್ದರು. ಕೃಷ್ಣಬೈರೇಗೌಡರಿಗೆ ಗೊತ್ತಿಲ್ವಾ, ನನ್ನ ಮಂತ್ರಿಮಂಡಲದಲ್ಲಿ ಮಂತ್ರಿ ಆಗುವುದಕ್ಕೆ. ಯಾಕೆ ಒಪ್ಪಿಗೆ ಕೊಟ್ಟರು?. ನಾನು ಇಂತಹ ಅಪರಾಧ ಮಾಡಿದ್ರೆ ಆವತ್ತು ಯಾಕೆ ನನ್ನ ಮಂತ್ರಿಮಂಡಲಕ್ಕೆ ಸೇರಿಕೊಂಡರು. ಆವತ್ತು ಕುಮಾರಸ್ವಾಮಿ ಕೆಟ್ಟವನು ಇರಲಿಲ್ಲ, ಕಾನೂನು ಬಾಹಿರ ಕೆಲಸ ಮಾಡಿರಲಿಲ್ಲ. ಈ ಸರ್ಕಾರದಲ್ಲಿರುವ ಹಿರಿಯ ಪೊಲೀಸ್ ಅಧಿಕಾರಿಗಳು ದರೋಡೆಕೋರರು. ಅದರ ದಾಖಲೆಗಳನ್ನು ರಿಲೀಸ್ ಮಾಡುತ್ತೇನೆ.

ಹೆಚ್​.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

ಗಂಗೇನಹಳ್ಳಿ ಡಿ-ನೋಟಿಫಿಕೇಷನ್​ ವಿಚಾರದಲ್ಲಿ ಲೋಕ ವಿಚಾರಣೆ ಎದುರಿಸಿದ ದಳಪತಿ, ಹೊಸ ದಾಳ ಉರುಳಿಸಲು ಮುಂದಾಗಿದ್ದಾರೆ. ಇವತ್ತು ಅಧಿಕಾರಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡ್ತಾರೆ ಅನ್ನೋದು ಕೆಲವೇ ಗಂಟೆಗಳನ್ನು ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ಸರ್ಕಾರ ನನ್ನನ್ನು ಏನೂ ಮಾಡೋಕೆ ಆಗಲ್ಲ -ಸಿದ್ದರಾಮಯ್ಯಗೆ ಸವಾಲೆಸೆದ HD ಕುಮಾರಸ್ವಾಮಿ

https://newsfirstlive.com/wp-content/uploads/2024/09/CM_SIDDU_HDK-1.jpg

Load More