newsfirstkannada.com

ಸೂರಜ್​ ರೇವಣ್ಣ ಅರೆಸ್ಟ್​.. ಯಾಕೆ ನೀವು ನನಗೆ ಬೆದರಿಕೆ ಹಾಕುತ್ತಿದ್ದೀರಿ? ಎಂದ H D ಕುಮಾರಸ್ವಾಮಿ

Share :

Published June 23, 2024 at 12:57pm

  ನರೇಂದ್ರ ಮೋದಿ‌ ಕಾರಣವಲ್ಲ, ನಾನೂ ಕಾರಣವಲ್ಲ

  ಯಾವ ಅಭ್ಯರ್ಥಿ ಅಂತ‌ ಚರ್ಚೆ ಮಾಡೊಲ್ಲ ಎಂದ ಹೆಚ್​ಡಿಕೆ

  ಪಕ್ಷದಿಂದ ಉಚ್ಚಾಟನೆ ವಿಚಾರವಾಗಿ ಹೆಚ್​ಡಿಕೆ ಏನಂದ್ರು?

ಅಸಹಜ ಲೈಂಗಿಕ‌ ದೌರ್ಜನ್ಯ ಆರೋಪದಡಿ ಜೆಡಿಎಸ್​​ ಎಮ್​ಎಲ್​ಸಿ ಸೂರಜ್​ ರೇವಣ್ಣ ಅರೆಸ್ಟ್​ ಆಗಿದ್ದಾರೆ. ಈ ಕುರಿತಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವ ಹೆಚ್​ ಡಿ ಕುಮಾರಸ್ವಾಮಿಯವರು ನನಗೆ ಯಾಕೆ‌ ಆ ಪ್ರಶ್ನೆ ಕೇಳ್ತೀರಾ?. ಯಾಕೆ ನೀವು ನನಗೆ ಬೆದರಿಕೆ ಹಾಕುತ್ತಿದ್ದೀರಿ? ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಹೆಚ್​ ಡಿ ಕುಮಾರಸ್ವಾಮಿ, ‘ಈ ರೀತಿಯ ವಿಚಾರಗಳಿಗೆ ನಾನು ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ. ಕಾನೂನು ಅದರ ಕ್ರಮ ತೆಗೆದುಕೊಳ್ಳುತ್ತೆ ಎಂದಿದ್ದಾರೆ.

ಪತ್ರಕರ್ತರು ಸೂರಜ್​ರನ್ನ ಪಕ್ಷದಿಂದ ಉಚ್ಚಾಟನೆ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ, ಯಾರನ್ನ? ನನಗೇನು ಸಂಬಂಧ?. ಅದೆಲ್ಲ‌ ಆಮೇಲೆ ಮಾತಾಡೋಣ ಬನ್ನಿ ಎಂದು ಹೆಚ್​ಡಿಕೆ ಹೇಳಿದ್ದಾರೆ.

ಇದನ್ನೂ ಓದಿ:ಸೂರಜ್ ರೇವಣ್ಣ ವಿರುದ್ಧದ ಪ್ರಕರಣ CID ತನಿಖೆಗೆ ಕೊಡ್ತೀವಿ; ಗೃಹ ಸಚಿವ ಜಿ. ಪರಮೇಶ್ವರ್​

ಯಾವ ಅಭ್ಯರ್ಥಿ ಅಂತ‌ ಚರ್ಚೆ ಮಾಡೊಲ್ಲ

ಚನ್ನಪಟ್ಟಣಕ್ಕೆ ಭೇಟಿ ಹಾಗೂ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿಯವರು, ಯಾವ ಅಭ್ಯರ್ಥಿ ಅಂತ‌ ಚರ್ಚೆ ಮಾಡೊಲ್ಲ. ನಿಧಾನವಾಗಿ ಆಯ್ಕೆ ಮಾಡೋಣ. ನನಗೇನು ಆತುರ ಇಲ್ಲ, ನಿಧಾನವಾಗಿ ಮಾಡೋಣ. ಹಿಡಿದುಕೊಂಡಿರುವವರು ಯಾರು? ಹೋದರೆ ತಪ್ಪೇನಿದೆ?. ಅವರೊಬ್ಬ ಮಂತ್ರಿಗಳಿದ್ದಾರೆ, ಉಪಮುಖ್ಯಮಂತ್ರಿಗಳು ಬೇರೆ. ಡಿಫ್ಯಾಕ್ಟರ್ ಚೀಫ್ ಮಿನಿಸ್ಟರ್ ಬೇರೆ. ಅವರನ್ನ ಹೋಗಬೇಡಿ‌ ಅಂತ ಹೇಳೋಕೆ‌ ಆಗುತ್ತಾ?. ಚನ್ನಪಟ್ಟಣಕ್ಕೆ ಈಗಲಾದ್ರೂ ಗಮನಹರಿಸಿದ್ದಕ್ಕೆ ಅವರಿಗೆ ಅಭಿನಂದಿಸೋಣ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಮ್ಮ ಪ್ರಜ್ವಲ್​ ಬಳಿಕ ಅಣ್ಣ ಸೂರಜ್​ ಬಂಧನ.. ರೇವಣ್ಣ ಕುಟುಂಬದ ಮೇಲಿರುವ ಆರೋಪಗಳು ಹೀಗಿವೆ

ನರೇಂದ್ರ ಮೋದಿ‌ ಕಾರಣವಲ್ಲ, ನಾನೂ ಕಾರಣವಲ್ಲ

HMT ಅಧಿಕಾರಿಗಳ ಜೊತೆ ನಿನ್ನೆ ಸಭೆ ನಡೆಸಿದ ವಿಚಾರವಾಗಿ ಮಾತನಾಡಿದ ಹೆಚ್​ಡಿಕೆ, ಸಾವಿರಾರು ಜನ ಉದ್ಯೋಗ ಮಾಡಿಕೊಳ್ಳುವ ಮುಖಾಂತರ ಕುಟುಂಬಗಳು ನೆಮ್ಮದಿಯಿಂದ ಬದುಕುತಿದ್ದ ಒಂದು‌ ಉದ್ಯಮ ಸಂಪೂರ್ಣವಾಗಿ ಸರ್ವನಾಶ ಮಾಡಿದ್ದಾರೆ. ನಿನ್ನೆ ನಿರಂತರವಾಗಿ 3 ಗಂಟೆಗಳ ಕಾಲ‌ ಸಭೆ ಮಾಡಿದ್ದೇನೆ. HMTಯ ಹಲವಾರು ಸಮಸ್ಯೆಗಳ ಹರಿಯಾಣ, ಹೈದರಾಬಾದ್, ಬೆಂಗಳೂರು ವಿವರಣೆ ಪಡೆದಿದ್ದೇನೆ. ಕೆಲವು ಪುನಶ್ಚೇತನಕ್ಕೆ ಏನೇನು ಮಾಡಬೇಕೊ ಕೆಲವು ಕಡೆ ಸಂಬಳ ಕೊಡೋಕು ಪರಿಸ್ಥಿತಿ ಸರಿಯಿಲ್ಲ. ಇದಕ್ಕೆ ನರೇಂದ್ರ ಮೋದಿ‌ ಕಾರಣವಲ್ಲ, ನಾನೂ ಕಾರಣವಲ್ಲ. ಈ‌ ಸಂಸ್ಥೆಯನ್ನ ಹಾಳು ಮಾಡಿರುವಂತದ್ದು ಹಲವಾರು ವರ್ಷಗಳಿಂದಲೇ ಹಾಳು‌ ಮಾಡಿ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲೈಫ್ ಸೆಟ್ಲ್ ಮಾಡ್ತೀನಿ, ತೋಟದ ಮನೆಗೆ ಬಾ.. ಸೂರಜ್ ರೇವಣ್ಣ ವಿರುದ್ಧ ಸಂತ್ರಸ್ತನ ಆರೋಪಗಳೇನು?

115 ಎಕರೆ ಭೂಮಿಯನ್ನ‌ ಮಾರಾಟ ಮಾಡಿದ್ದಾರೆ

ಬಳಿಕ ಪ್ರತಿನಿತ್ಯ ಬೆಂಗಳೂರಿನಲ್ಲಿ ITI HAL, NGF, HMT ಇರಬಹುದು. ಈ‌ ಉದ್ಯಮಗಳಿಗೆ ನೂರಾರು ಬಸ್ ಗಳ ಮುಖಾಂತರ ಪ್ರಯಾಣಕ್ಕೆ ಸಿದ್ದತೆ ಮಾಡಿಕೊಂಡಿದ್ದರು. ಇವತ್ತು ಅಂತಹ ಪರಿಸ್ಥಿತಿ ಇಲ್ಲ, ಸಂಪೂರ್ಣ ನಾಶವಾಗಿದೆ. ನಿನ್ನೆಯ ದಿನ‌ ಸಂಪೂರ್ಣವಾಗಿ ಮಾಹಿತಿ‌ ಪಡೆಯಲಿಕ್ಕೆ ಅಲ್ಲಿಯ ಪ್ರಮುಖರ ಜೊತೆ ಸಭೆ ಮಾಡಿದ್ದೇನೆ. ಮಾಹಿತಿಗಳನ್ನ ಕೊಟ್ಟಿದ್ದಾರೆ, ಇವತ್ತೂ ಸಹ ದೊಡ್ಡ ಮಟ್ಟದಲ್ಲಿ ನಷ್ಟದಲ್ಲಿದೆ. ನಮಗೆ ಇಲ್ಲಿ‌ ರಾಜ್ಯದಲ್ಲಿ ಈ‌ ಸರ್ಕಾರದಿಂದ ನಾವು ಸಹಕಾರ ಪಡೆಯೋಕೆ‌ ಸಾಧ್ಯವಿಲ್ಲ. ಅವರು‌ ನಡೆದುಕೊಳ್ಳುತ್ತಿರುವ ರೀತಿ ನೋಡಿದ್ರೆ ಈ ಸರ್ಕಾರಕ್ಕೆ ಜನತೆಯ ಸಮಸ್ಯೆ ಪರಿಹಾರ ಮಾಡೋಕೆ‌ ಆಗಿರಲಿ. ಹಲವಾರು ಉದ್ಯಮಗಳು ಮಹಾರಾಜ ಕಾಲದಲ್ಲಿ ಪ್ರಾರಂಭ ಮಾಡಿದ್ದರು. ಇವೆಲ್ಲನ್ನ ನಾಶ ಮಾಡಲಿಕ್ಕೆ ಕಾರಣ ಯಾರಿದ್ದಾರೆ ಅಂತ ಚಿಂತನೆ ಮಾಡ್ಬೇಕು. ಉದಾಹರಣೆಗೆ HMT ಸುಮಾರು 500 ಎಕರೆ‌ ಭೂಮಿ ಕಡಿಮೆ ಬೆಲೆ ಒಂದು ಉದ್ಯಮಕ್ಕೆ ಅನುಕೂಲ‌ ಆಗಲಿ ಅಂತೇಳಿ 115 ಎಕರೆ ಭೂಮಿಯನ್ನ‌ 2002ರಲ್ಲಿ ಖಾಸಗಿಯವರಿಗೆ ಬೇಕಾದ ರೀತಿಯಲ್ಲಿ ಮಾರಾಟ ಮಾಡಿದ್ದಾರೆ. ಈ ಸಂಸ್ಥೆಗಳ‌ ಆಸ್ತಿ ಮಾರಾಟ ಮಾಡೋದು, ಪಾಕೆಟ್ ತುಂಬಿಸಿಕೊಳ್ಳೋದು ನಡೆದು ಹೋಗಿದೆ. ಇದು ಬಹಳ ಕಠಿಣವಾದ ಸಮಸ್ಯೆಗಳಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಘೀ ಜ್ವರ.. ಬೆಂಗಳೂರು, ಮೈಸೂರಿನಲ್ಲಿ ಎಷ್ಟು ಪ್ರಕರಣಗಳು ಪತ್ತೆಯಾಗಿವೆ ಗೊತ್ತಾ?

ನಾನು ಇವತ್ತು ಕೇಂದ್ರದಲ್ಲಿ‌ ಮಂತ್ರಿಯಾಗಿರೋದು PSU ಯೂನಿಟ್ ಗಳನ್ನ Disinvestment ಮಾಡ್ಬೇಕು ಅಂತ ನನ್ನ ಮಾಡಿಲ್ಲ. ಸಾಧ್ಯವಾದ ಮಟ್ಟಿಗೆ ಈ ಸಂಸ್ಥೆಗಳನ್ನ ಉಳಿಸಬೇಕು‌ ಅನ್ನೋ‌ ನಿಲುವನ್ನ ಇಟ್ಟುಕೊಂಡಿದ್ದೇನೆ. ಮಾಹಿತಿ ಪಡೆದುಕೊಂಡಿದ್ದೇನೆ, ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದೇನೆ. ಯಾವ ರೀತಿ ಪುನಶ್ಚೇತನ ಮಾಡಬೇಕು ಅನ್ನೋದರ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದು ಕೇಂದ್ರ ಸಚಿವ ಹೆಚ್​ ಡಿ ಕುಮಾರಸ್ವಾಮಿಯವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೂರಜ್​ ರೇವಣ್ಣ ಅರೆಸ್ಟ್​.. ಯಾಕೆ ನೀವು ನನಗೆ ಬೆದರಿಕೆ ಹಾಕುತ್ತಿದ್ದೀರಿ? ಎಂದ H D ಕುಮಾರಸ್ವಾಮಿ

https://newsfirstlive.com/wp-content/uploads/2024/06/Suraj-HDK.jpg

Load More